ETV Bharat / state

ಮೂರು ದಿನ ಮದ್ಯ ಬಂದ್: ಸರ್ಕಾರದ ಬೊಕ್ಕಸಕ್ಕೆ ಎಷ್ಟು ಕೋಟಿ ನಷ್ಟ ಗೊತ್ತಾ? - alcohol

ಲೋಕಸಭಾ ಚುನಾವಣೆ ಹಿನ್ನೆಲೆ ಮೂರು ದಿನಗಳ ಕಾಲ ಮದ್ಯ ಮಾರಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಚುನಾವಣಾ ಆಯೋಗ ಈ ಮೂಲಕ ಮದ್ಯ ಪ್ರಿಯರಿಗೆ ಶಾಕ್​ ನೀಡಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಮೂರು ದಿನಗಳ ಕಾಲ ಮದ್ಯ ಮಾರಾಟ ಸಂಪೂರ್ಣ ಬಂದ್
author img

By

Published : Apr 17, 2019, 7:23 PM IST

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಮೊದಲ ಹಂತದ ಚುನಾವಣೆಗೆ ಒಂದೇ ದಿನ ಬಾಕಿ ಉಳಿದಿದೆ. ಮಂಗಳವಾರ ಸಂಜೆಯಿಂದ ಗುರುವಾರ ರಾತ್ರಿವರೆಗೂ ಮದ್ಯದಂಗಡಿಗಳು ಮುಚ್ಚಲ್ಪಟ್ಟಿವೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಸುಮಾರು 110 ಕೋಟಿ ರೂ. ನಷ್ಟವಾಗಲಿದೆ.

ಮುಕ್ತ ಹಾಗೂ ನ್ಯಾಯಸಮ್ಮತದಿಂದ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಚುನಾವಣೆಗೆ 48 ಗಂಟೆಗಳ ಮುನ್ನ ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿರುವ ಎಲ್ಲಾ ಬಾರ್​ಗಳು ತೆರೆಯಬಾರದು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಹಿನ್ನಲೆ ಮಂಗಳವಾರ ಸಂಜೆಯಿಂದಲೇ ಬೆಂಗಳೂರು ಸೇರಿದಂತೆ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿನ ಎಲ್ಲಾ ಬಾರ್, ವೈನ್ ಶಾಪ್​​ಗಳು ಮುಚ್ಚಿವೆ. ಇದರಿಂದ ಬಿಯರ್​ ಹಾಗೂ ಮದ್ಯ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಸುಮಾರು 110 ಕೋಟಿ ರೂ. ಬೊಕ್ಕಸಕ್ಕೆ ಕತ್ತರಿ ಬೀಳಲಿದೆ ಎಂದು ಅಂದಾಜಿಸಲಾಗಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಮದ್ಯದಂಗಡಿಗಳು ಬಂದ್​ ಆಗಿರುವುದು

ರಾಜ್ಯದಲ್ಲಿ ಬಿಯರ್​ ತಯಾರಿಸುವ 8 ಬ್ಲೂವರಿಗಳು, ಹಾರ್ಡ್ ಡ್ರಿಂಕ್ಸ್ ತಯಾರಿಸುವ 30 ಡಿಸ್ಟಲರಿಗಳು, 20 ವೈನರಿಗಳಿದ್ದು, ಇವುಗಳ ಮೂಲಕ ಮದ್ಯ ತಯಾರಿಸಿ 70 ಡಿಪೋಗಳ ಮೂಲಕ ಸರಬರಾಜರಾಜು ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ಪಾನಿಯ ನಿಗಮದಿಂದ ಅನುಮತಿ ಮೇರೆಗೆ ರಾಜ್ಯ ಎಲ್ಲಾ ಬಾರ್​ ಹಾಗೂ ವೈನ್ ಶಾಪ್​​ಗಳಿಗೆ ಮದ್ಯ ಸರಬರಾಜು ಆಗುತ್ತದೆ. ಆದ್ರೆ ಮತದಾನ ಇರುವುದರಿಂದ ಮೂರು ದಿನ ಬಂದ್​ ಮಾಡಲಾಗಿದೆ.

ಪ್ರತಿದಿನ ರಾಜ್ಯದಲ್ಲಿ 1.70 ಲಕ್ಷ ಬಾಕ್ಸ್ ಮದ್ಯ, 80 ಸಾವಿರ ಬಾಕ್ಸ್ ಬಿಯರ್​ಗಳು ಪೂರೈಕೆ ಆಗಲಿದ್ದು, ಎರಡು ದಿನಕ್ಕೆ 3.50 ಲಕ್ಷ ಬಾಕ್ಸ್ ಮದ್ಯ ಹಾಗೂ 1.80 ಲಕ್ಷ ಬಾಕ್ಸ್ ಬಿಯರ್​​ಗಳಾಗಿದ್ದು ಇವುಗಳ ಮೊತ್ತ 110 ಕೋಟಿ ರೂ. ದಾಟಲಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Intro:Body:ಎರಡು ದಿನ ಮದ್ಯ ಬಂದ್: ಬೊಕ್ಕಸಕ್ಕೆ ಎಷ್ಟು ಕೋಟಿ ನಷ್ಟ ಗೊತ್ತಾ ?

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಮೊದಲ ಹಂತದ ಚುನಾವಣೆಗೆ ಒಂದೇ ದಿನ ಬಾಕಿ ಉಳಿದಿದ್ದು, ನಿನ್ನೆ ಸಂಜೆಯಿಂದ ನಾಳೆವರೆಗೂ ಮದ್ಯದಂಗಡಿಗಳು ಮುಚ್ಚಿದ ಪರಿಣಾಮ ರಾಜ್ಯ ಸರ್ಕಾರಕ್ಕೆ ಸುಮಾರು 110 ಕೋಟಿ ರೂ. ನಷ್ಟವಾಗಲಿದೆ.

ಮುಕ್ತ ಹಾಗೂ ನಿರ್ಬೀತಿಯಿಂದ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಚುನಾವಣೆಗೆ ಮುನ್ನ 48 ಗಂಟೆಗಳ ಮುನ್ನ ಅಬಕಾರಿ ಇಲಾಖೆಯಿಂದ ಪರವಾನಗಿ ಪಡೆದುಕೊಂಡಿರುವ ಎಲ್ಲಾ ಬಾರ್ ಗಳು ತೆರೆಯಬಾರದು ಎಂದು ಚುನಾವಣಾ ಆಯೋಗ ಸ್ಪಷ್ಟ ನಿಯಮ ಇರುವುದರಿಂದ ನಿನ್ನೆ ಸಂಜೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಬಾರ್, ವೈನ್ ಶಾಪ್ ಗಳು ಮುಚ್ಚಿದ್ದು,  ಇದರಿಂದ ಬಿಯರ್ ಹಾಗೂ ಮದ್ಯ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಸುಮಾರು 110 ಕೋಟಿ ರೂ. ಬೊಕಸಕ್ಕೆ ಕತ್ತರಿ ಬೀಳಲಿದೆ.

ರಾಜ್ಯದಲ್ಲಿ ಬಿಯರ್ ತಯಾರಿಸುವ 8 ಬ್ಲೂವರಿಗಳು,  ಹಾರ್ಡ್ ಡ್ರಿಂಕ್ಸ್ ತಯಾರಿಸುವ 30 ಡಿಸ್ಟಲರಿಗಳು, 20 ವೈನರಿಗಳಿದ್ದು, ಇವುಗಳ ಮೂಲಕ ತಯಾರಿಸಿ 70 ಡಿಪೊಗಳ ಮೂಲಕ ಸರಬರಾಜರಾಗಲಿದ್ದು, ಕರ್ನಾಟಕ ರಾಜ್ಯ ಪಾನಿಯ ನಿಗಮದಿಂದ ಅನುಮತಿ ಮೇರೆಗೆ ರಾಜ್ಯ ಎಲ್ಲಾ ಬಾರ್ ಹಾಗೂ ವೈನ್ ಶಾಪ್ ಗಳಿಗೆ ಮದ್ಯ ಸರಬರಾಜು ಆಗಲಿದೆ.

ಪ್ರತಿದಿನ ರಾಜ್ಯದಲ್ಲಿ 1.70 ಲಕ್ಷ ಬಾಕ್ಸ್ ಮದ್ಯ, 80 ಸಾವಿರ ಬಾಕ್ಸ್ ಬಿಯರ್ ಗಳು ಸಪ್ಲೈ ಆಗಲಿದ್ದು, ಎರಡು ದಿನಕ್ಕೆ  3.50 ಲಕ್ಷ ಬಾಕ್ಸ್ ಮದ್ಯ ಹಾಗೂ 1.80 ಲಕ್ಷ ಬಾಕ್ಸ್ ಬಿಯರ್ ಗಳಾಗಿದ್ದು ಇವುಗಳ ಮೊತ್ತ 110 ಕೋಟಿ ರೂ. ದಾಟಲಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಸಿಗಲ್ಲ ಎಂಬ ಗ್ಯಾರಂಟಿ ಮೇರೆಗೆ ಮದ್ಯ ಸೇವಿಸುವವರು ಈಗಾಗಲೇ ಮುಂಚಿತವಾಗಿ ಮದ್ಯ ಖರೀದಿಸಿ ಸ್ಟ್ರಾಕ್ ಇಟ್ಟುಕೊಂಡಿರುವುದು ಕಂಡು ಬಂದಿದೆ. ನಿಯಮದಂತೆ ಒಬ್ಬರಿಗೆ  ಮೂರು ಬಾಟೆಲ್ ಮದ್ಯವನ್ನು ಬಾರ್ನಲ್ಲಿ  ನೀಡಬೇಕು. ಅಲ್ಲದೆ, ಮದ್ಯ ಖರೀದಿ ಮಾಡುವಾಗ 1 ಲಕ್ಷ ಸ್ಟ್ರಾಕ್ ಪರ್ಚೆಸ್ ಮಾಡಿ, ಸ್ಥಳೀಯ ಮಟ್ಟದಲ್ಲಿ ಅದೇ ಮದ್ಯವನ್ನು ಡಬಲ್ ರೇಟ್ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ.

Conclusion:Bharath . ,.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.