ಬೆಂಗಳೂರು: ರಾಜ್ಯದಲ್ಲಿಂದು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಮತ್ತೊಂದು ವಿಶೇಷ ಅಂದರೆ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು 30 ವರ್ಷ ದಾಟಿದ ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. 15 ವರ್ಷ ಮೇಲ್ಪಟ್ಟ ಖಾಸಗಿ ಅಭ್ಯರ್ಥಿಗಳು ಕೂಡ ಪರೀಕ್ಷೆಗೆ ನೋಂದಾಯಿಸಿದ್ದರು. ಇದೀಗ ಅವರೆಲ್ಲರೂ ಪಾಸ್ ಆಗಿದ್ದಾರೆ.
ಯಾವ್ಯಾವ ವಯೋಮಾನದವರು ಎಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ?
ವಯೋಮಾನ | ಹಾಜರಾದವರು | ಫಲಿತಾಂಶ |
15-20 ವರ್ಷ | 13,133 | ಪಾಸ್ |
21-25 ವರ್ಷ | 7,728 | ಪಾಸ್ |
26-30 ವರ್ಷ | 3,849 | ಪಾಸ್ |
31-35 ವರ್ಷ | 2,618 | ಪಾಸ್ |
36-40 ವರ್ಷ | 2,097 | ಪಾಸ್ |
41-45 ವರ್ಷ | 980 | ಪಾಸ್ |
50 ವರ್ಷ ಮೇಲ್ಪಟ್ಟು | 126 | ಪಾಸ್ |
ಒಟ್ಟಾರೆ 30,818 ಅಭ್ಯರ್ಥಿಗಳಲ್ಲಿ 30,817 ಪಾಸ್ ಆಗಿದ್ದಾರೆ.
ವಿಭಿನ್ನ ಸಾಮರ್ಥ್ಯವುಳ್ಳ 4 ಸಾವಿರ ವಿದ್ಯಾರ್ಥಿಗಳು:
ಇನ್ನು ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಕೂಡ ಕೋವಿಡ್ ನೆಪವೊಡ್ಡದೇ ಪರೀಕ್ಷೆಯನ್ನ ಬರೆದಿದ್ದರು. ದೃಷ್ಟಿ, ಶ್ರವಣ ಸಮಸ್ಯೆ, ಮಾನಸಿಕ ಅಸ್ವಸ್ಥ, ಸ್ನಾಯುವಿನ ಡಿಸ್ಟ್ರೋಫಿ ಸೇರಿದಂತೆ ಇತರ ಸಮಸ್ಯೆವುಳ್ಳ ವಿದ್ಯಾರ್ಥಿಗಳು ಉತ್ತೀಣರಾಗಿದ್ದಾರೆ.. ಒಟ್ಟಾರೆ 4,626 ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಪಾಸ್ ಆಗಿದ್ದಾರೆ.