ETV Bharat / state

ಚಿಕ್ಕಪೇಟೆಯಲ್ಲಿ ಪೊಲೀಸ್ ಸಿಬ್ಬಂದಿ ಕೈ ಕಚ್ಚಿದ ಮಹಿಳೆ

ಚಿಕ್ಕಪೇಟೆಯಲ್ಲಿ ಶಾಪಿಂಗ್‍ಗೆ ಎಂದು ಬಂದಿದ್ದ ಮಹಿಳೆಯೊಬ್ಬರು ಫುಟ್‍ಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡಿಸುತ್ತಿರುವುದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಕಾನ್ಸ್​ಟೇಬಲ್​ ಕೈ ಕಚ್ಚಿದ್ದಾರೆ.

A woman who bit a police constable hand in bengaluru
ಪೊಲೀಸ್​ ಕಾನ್ಸ್​ಟೇಬಲ್​ ಜೊತೆ ಮಹಿಳೆ ಗಲಾಟೆ
author img

By

Published : Aug 2, 2021, 7:12 AM IST

ಬೆಂಗಳೂರು: ಚಿಕ್ಕಪೇಟೆಯಲ್ಲಿ ಪೊಲೀಸ್​ ಕಾನ್ಸ್​ಟೇಬಲ್​ ಜೊತೆ ಮಹಿಳೆಯೊಬ್ಬರು ಗಲಾಟೆ ಮಾಡಿ, ಪೊಲೀಸ್ ಸಿಬ್ಬಂದಿಯ ಕೈ ಕಚ್ಚಿದ ಘಟನೆ ನಿನ್ನೆ ಸಂಜೆ ನಡೆದಿದೆ.

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಅಂಗಡಿ ಮುಂಗಟ್ಟುಗಳನ್ನು ಆದಷ್ಟು ಬೇಗ ಮುಚ್ಚುವಂತೆ ಆದೇಶ ಹೊರಡಿಸಿದೆ. ಹೀಗಾಗಿ ಪೊಲೀಸರು ನಿಗದಿತ ಸಮಯದ ನಂತರ ಎಲ್ಲಾ ಅಂಗಡಿಗಳ ಬಳಿ ಹೋಗಿ ಅಂಗಡಿಗಳನ್ನು ಮುಚ್ಚುವಂತೆ ಎಚ್ಚರಿಕೆ ನೀಡುತ್ತಿದ್ದಾರೆ. ನಿನ್ನೆ ಸಹ ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡುತ್ತಿದ್ದರು. ಈ ವೇಳೆ ಶಾಪಿಂಗ್‌ಗೆ ಅಂತ ಬಂದಿದ್ದ ಮಹಿಳೆ ಜನರಿಗೆ ಯಾಕೆ ಸಮಸ್ಯೆ ಕೊಡುತ್ತಿದ್ದೀರಾ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆ ಪೊಲೀಸರ ವಿಡಿಯೋ ಮಾಡಲು ಮುಂದಾಗಿದ್ದಾರೆ.

ಪೊಲೀಸ್​ ಕಾನ್ಸ್​ಟೇಬಲ್​ ಜೊತೆ ಮಹಿಳೆ ಗಲಾಟೆ

ಇನ್ನು ಮಹಿಳೆ ವಿಡಿಯೋ ಮಾಡುತ್ತಿರುವುದನ್ನು ನೋಡಿದ ಪೊಲೀಸರು, ಮೊಬೈಲ್ ಕಿತ್ತುಕೊಂಡಿದ್ದಾರೆ. ಈ ವೇಳೆ ರಾದ್ಧಾಂತ ಸೃಷ್ಟಿಸಿದ ಮಹಿಳೆ, ಪೊಲೀಸ್ ಕಾನ್ಸ್​ಟೇಬಲ್ ಕೈಯನ್ನೇ ಕಚ್ಚಿದರು.‌

ಈ ಕುರಿತು ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.