ETV Bharat / state

ನೈಸ್ ರಸ್ತೆಯ ಪೊಲೀಸ್​ ಚೆಕ್​ಪೋಸ್ಟ್ ಮೇಲೆ ಬಿತ್ತು ಬೃಹತ್ ಮರದ ಕೊಂಬೆ! - tree fall down on check post

ಬೆಂಗಳೂರಿನ ನೈಸ್ ರಸ್ತೆಯ ಚೆಕ್​ಪೋಸ್ಟ್ ಮೇಲೆ ಬೃಹತ ಮರದ ಕೊಂಬೆ ಮುರಿದು ಬಿದ್ದಿದ್ದು, ಅದೃಷ್ಟವಶಾತ್​ ಕೂದಲೆಳೆ ಅಂತರದಲ್ಲಿ ಹೋಂ ಗಾರ್ಡ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

tree
tree
author img

By

Published : May 30, 2021, 6:08 PM IST

ಬೆಂಗಳೂರು: ಮರದ ಕೊಂಬೆವೊಂದು ಉರುಳಿ ಪೊಲೀಸರ ತಾತ್ಕಾಲಿಕ ಚೆಕ್​ಪೋಸ್ಟ್ ಮೇಲೆ ಬಿದ್ದು, ಓರ್ವನಿಗೆ ಗಾಯವಾಗಿರುವ ಘಟನೆ ನಡೆದಿದೆ.

ಪಶ್ಚಿಮ ವಿಭಾಗ ಪೊಲೀಸ್ ವಿಭಾಗದ ವ್ಯಾಪ್ತಿಯ ನೈಸ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ರಭಸದ ಗಾಳಿಯಿಂದ ಮಾವಿನ ಮರದ ಕೊಂಬೆ ಮುರಿದಿದೆ ಎಂದು ಪಶ್ಚಿಮ ವಿಭಾಗದ ಡಿ.ಸಿ.ಪಿ ತಿಳಿಸಿದ್ದಾರೆ.

ಕೂದಲೆಳೆ ಅಂತರದಲ್ಲಿ ಹೋಂ ಸಿಬ್ಬಂದಿ ಪಾರಾಗಿದ್ದು, ಘಟನೆಯಲ್ಲಿ ಮಹೇಶ್ ಎನ್ನುವ ಹೋಂ ಗಾರ್ಡ್​ಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.