ಬೆಂಗಳೂರು: ಹೈಕೋರ್ಟ್ ಕಟ್ಟಡ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ವ್ಯಕ್ತಿಯೊಬ್ಬ ಹೈಕೋರ್ಟ್ ರಿಜಿಸ್ಟಾರ್ ಗೆ ಪತ್ರ ಬರೆದು ಬೆದರಿಸಿದ್ದಾನೆ.
ದೆಹಲಿಯ ಮೋತಿ ನಗರ ವಿಳಾಸದಿಂದ ಹದರ್ಶನ ಸಿಂಗ್ ನಾಗಪಾಲ್ ಎಂಬಾತ ಹೈಕೋರ್ಟ್ ರಿಜಿಸ್ಟಾರ್ ಗೆ ಬೆದರಿಕೆ ಪತ್ರ ಬರೆದಿದ್ದಾನೆ. ನಾನು ಇಂಟರ್ ನ್ಯಾಷನಲ್ ಖಲಿಸ್ತಾನ್ ಸಪೋರ್ಟ್ ಗ್ರೂಪ್ ಗೆ ಸೇರಿದ ವ್ಯಕ್ತಿಯಾಗಿದ್ದು, ನಾನು ಮತ್ತು ನನ್ನ ಮಗ ಸೇರಿ ಹಲವು ಕಟ್ಟಡಗಳ ಬ್ಲಾಸ್ಟ್ ಮಾಡುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಜಿಸ್ಟ್ರಾರ್ ದೂರು ನೀಡಿದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶೋಧಕ್ಕೆ ಮುಂದಾಗಿದ್ದಾರೆ.