ETV Bharat / state

ಹುಬ್ಬಳ್ಳಿ 'ಲವ್ ಜಿಹಾದ್‌ ಕೇಸ್‌': ಪೋಷಕರ ಜೊತೆ ತೆರಳಲು ನಿರಾಕರಿಸಿದ ಯುವತಿ - ಲವ್​ ಜಿಹಾದ್​ ಸಂಬಂಧ ವಿಡಿಯೋ ಬಿಡುಗಡೆ ಮಾಡಿದ ಯುವತಿ

ಇಂದು ಅಜ್ಞಾತ ಸ್ಥಳದಿಂದ ಯುವತಿ ಸ್ನೇಹ ವಿಡಿಯೋ ಬಿಡುಗಡೆ ಮಾಡಿದ್ದಾಳೆ. 'ನಾನು ಇಬ್ರಾಹಿಂ ಜೊತೆಯಲ್ಲಿಯೇ ಇದ್ದೇನೆ. ನಾನು ಆತ ಜೊತೆಯಲ್ಲಿರುವುದು ಅವರ ಮನೆಯವರಿಗೂ ತಿಳಿದಿಲ್ಲ. ನನ್ನನ್ನು ಯಾರೂ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ. ನಾನೇ ಪ್ರೀತಿಯಿಂದ ಬಂದಿದ್ದೇನೆ' ಎಂದು ತಿಳಿಸಿದ್ದಾಳೆ.

ಹುಬ್ಬಳ್ಳಿ ಲವ್ ಜಿಹಾದ್ ಗೆ ಬಿಗ್ ಟ್ವಿಸ್ಟ್
ಹುಬ್ಬಳ್ಳಿ ಲವ್ ಜಿಹಾದ್ ಗೆ ಬಿಗ್ ಟ್ವಿಸ್ಟ್
author img

By

Published : Apr 7, 2022, 4:13 PM IST

Updated : Apr 7, 2022, 6:42 PM IST

ಹುಬ್ಬಳ್ಳಿ: ಹುಬ್ಬಳ್ಳಿಯ ಲವ್ ಜಿಹಾದ್ ಆರೋಪ ಪ್ರಕರಣ ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪವನ್ನು ಪಡೆಯುತ್ತಿದೆ. ಹಿಂದೂ ಯುವತಿ, ಮುಸ್ಲಿಂ ಯುವಕನ ನಡುವೆ ನಡೆದ ಮದುವೆ ಬಗ್ಗೆ ಈಗಾಗಲೇ ಪೋಷಕರು ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ಮಧ್ಯೆಯೇ ಇದೀಗ ಯುವತಿ ಪ್ರತ್ಯಕ್ಷವಾಗಿ ಪೋಷಕರ ಜೊತೆ ತೆರಳಲು‌ ನಿರಾಕರಿಸಿದ್ದಾಳೆ. ಮಗಳ ನಡೆಯಿಂದ ಪೋಷಕರು ಕಣ್ಣೀರು ಹಾಕಿದ್ದಾರೆ.

ಹುಬ್ಬಳ್ಳಿಯ ಹಿಂದೂ, ಮುಸ್ಲಿಂ ಮದುವೆ ಇದೀಗ ಲವ್ ಜಿಹಾದ್ ಅನ್ನೋ ಆರೋಪವನ್ನ ಪಡೆದುಕೊಂಡಿದೆಯಾದರೂ ಯುವತಿ ಇದಕ್ಕೆ ಸ್ಪಷ್ಟನೆ ನೀಡಿದ್ದಾಳೆ. ಹಿಂದೂ ಯುವತಿ ಸ್ನೇಹಾ ಮತ್ತು ಯುವಕ ಇಬ್ರಾಹಿಂ ಈಗಾಗಲೇ ಮದುವೆ ಆಗಿದ್ದು, ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ನಿನ್ನೆ ರಾತ್ರಿಯಿಂದಲೇ ಪ್ರತಿಭಟನೆ ಹಾದಿ ಹಿಡಿದಿವೆ. ನಮ್ಮ ಮಗಳನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಮದುವೆ ಆಗಿದ್ದಾರೆ. ಇದು ಲವ್ ಜಿಹಾದ್ ಅಂತ ಪೋಷಕರು ಆರೋಪಿಸಿದ್ರೆ ಇತ್ತ ಮದುವೆ ಆಗಿರುವ ಸ್ನೇಹಾ ಮಾತ್ರ ವಿಡಿಯೋ ಮೂಲಕ ತನ್ನ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾಳೆ.

ಠಾಣೆಯಲ್ಲಿ ಯುವತಿಯ ವಿಚಾರಣೆ: ನಿನ್ನೆಯಿಂದಲೇ ಯುವತಿಯನ್ನು ಕರೆತರಬೇಕು ಅಂತ ಪೊಲೀಸರಿಗೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಡವು ನೀಡಿದ್ರು. ಇಲ್ಲದಿದ್ರೆ ಎಲ್ಲಾ ಹಿಂದೂ ಸಂಘಟನೆಗಳ ಮೂಲಕ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆ ಇಂದು ಯುವತಿಯನ್ನು ಗೋವಾದಿಂದ ಕರೆತಂದಿರೋ ಪೊಲೀಸರು ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ವಿಚಾರಣೆ ನಡೆಸಿದರು.

ಪೋಷಕರ ಜೊತೆ ತೆರಳಲು ನಿರಾಕರಿಸಿದ ಯುವತಿ

ಪೋಷಕರ ಜೊತೆ ಕೆಲಕಾಲ ಯುವತಿಯ ಮನವೊಲಿಕೆ ಮಾಡಿದ್ರೂ ಸಹ ಯುವತಿ ಮಾತ್ರ ಮತ್ತೆ ಮನೆಗೆ ಹೋಗಲು ಹಿಂದೇಟು ಹಾಕಿದ್ದಾಳೆ. ಇದರಿಂದ ಪೋಷಕರಲ್ಲಿ ಆಕ್ರೋಶ ಹೆಚ್ಚಾಗಿದ್ದು, ಮನೆಯಲ್ಲಿ ಈಗಾಗಲೇ ಸ್ನೇಹಾ ಅಜ್ಜಿ ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಕೇವಲ ಒಂದು ಗಂಟೆ ಮನೆಗೆ ಕಳಿಸಿ ಕೊಡಿ ಅಂತ ಕೇಳಿಕೊಂಡರೂ ಸಹ ಯುವತಿ ಒಪ್ಪಿಗೆ ನೀಡಿಲ್ಲ.

ವಿಡಿಯೋದಲ್ಲಿ ಯುವತಿ ಹೇಳಿದ್ದೇನು? ನನ್ನನ್ನು ಯಾರೂ ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ. ನಾನು ಇಬ್ರಾಹಿಂ ಜೊತೆಯಲ್ಲಿಯೇ ಇದ್ದೇನೆ. ನಾನು ಆತ ಜೊತೆಯಲ್ಲಿರುವುದು ಅವರ ಮನೆಯವರಿಗೂ ತಿಳಿದಿಲ್ಲ. ನಾನೇ ಪ್ರೀತಿಯಿಂದ ಬಂದಿದ್ದೇನೆ ಎಂದು ಆಕೆ ಹೇಳಿದ್ದಾಳೆ. ಕಳೆದ ಆರು ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಫೆಬ್ರವರಿ 11ರಂದು ಗದಗ ಉಪ ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಅಪ್ಪಾ ಬೇಡಪ್ಪ.. ಪ್ಲೀಸ್​ ಬೇಡಪ್ಪ ಅಂತಾ ಗೋಗರಿದ್ರೂ ಕರಗದ ಮನಸ್ಸು.. ಮಗನಿಗೆ ಬೆಂಕಿ ಹಚ್ಚಿ ತಂದೆ ಕ್ರೌರ್ಯ!

Last Updated : Apr 7, 2022, 6:42 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.