ETV Bharat / state

ವೀಸಾ ಅವಧಿ ಮುಗಿದರೂ 992 ವಿದೇಶಿಗರ ಅಕ್ರಮ ವಾಸ : ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ

author img

By

Published : Dec 7, 2020, 6:49 AM IST

ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರನ್ನು ವಾಪಸ್ ಅವರ ದೇಶಕ್ಕೆ ಕಳುಹಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ..

ರಾಜ್ಯ ಸರ್ಕಾರ
ರಾಜ್ಯ ಸರ್ಕಾರ

ಬೆಂಗಳೂರು : ವೀಸಾ ಅವಧಿ ಮುಗಿದಿದ್ದರೂ ತಮ್ಮ ದೇಶಗಳಿಗೆ ಮರಳದೆ ರಾಜ್ಯದಲ್ಲಿ ಅಕ್ರಮವಾಗಿ 992 ವಿದೇಶಿಗರು ನೆಲೆಸಿದ್ದಾರೆ. ಇವರ ವಿರುದ್ಧ ವಿದೇಶಿ ಕಾಯ್ದೆಯಡಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯಕ್ಕೆ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಬಂದು ವೀಸಾ ಅವಧಿ ಮುಗಿದಿದ್ದರೂ ಸಹ 740 ವಿದೇಶಿ ವಿದ್ಯಾರ್ಥಿಗಳು ತವರು ದೇಶಕ್ಕೆ ವಾಪಸಾಗದೆ ಕರ್ನಾಟಕದಲ್ಲಿಯೇ ಉಳಿದಿದ್ದಾರೆ. ಬೇರೆ ಬೇರೆ ಕಾರಣಗಳ ಮೇರೆಗೆ ಬಂದ ವಿದೇಶಿಗರಲ್ಲಿ ವೀಸಾ ಅವಧಿ ಮುಗಿದಿದ್ದರೂ 252 ಜನರು ರಾಜ್ಯದಲ್ಲೇ ಉಳಿದಿದ್ದು ಒಟ್ಟು 992 ವಿದೇಶಿಯರ ಅಕ್ರಮವಾಗಿ ನೆಲೆಸಿದ್ದಾರೆ.

ರಾಜ್ಯ ಸರ್ಕಾರದ ಗಮನಕ್ಕೆ ಈ ವಿಷಯ ಬಂದಿದ್ದು, ವೀಸಾ ಅವಧಿ ಮುಗಿದಿರುವ ವಿದ್ಯಾರ್ಥಿಗಳು ಹಾಗೂ ವಿದೇಶಿಯರ ವಿರುದ್ಧ ವಿದೇಶಿ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳುತ್ತಿದೆ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರನ್ನು ವಾಪಸ್ ಅವರ ದೇಶಕ್ಕೆ ಕಳುಹಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ವಿದೇಶಿ ವಿದ್ಯಾರ್ಥಿಗಳು:
ತುಮಕೂರು: 4
ಕಲಬುರಗಿ: 3
ಚಿತ್ರದುರ್ಗ: 1
ಹುಬ್ಬಳ್ಳಿ-ಧಾರವಾಡ: 12
ರಾಮನಗರ: 2
ಉತ್ತರ ಕನ್ನಡ: 1
ಮಂಗಳೂರು ನಗರ: 4
ದಾವಣಗೆರೆ: 2
ಬೆಂಗಳೂರು ನಗರ: 711

ವಿದೇಶಿಯರು:
ಹುಬ್ಬಳ್ಳಿ-ಧಾರವಾಡ: 15
ಉಡುಪಿ: 2
ರಾಮನಗರ: 10
ಮಂಗಳೂರು ನಗರ: 2
ದಾವಣಗೆರೆ: 1
ಬೆಂಗಳೂರು ನಗರ: 222

ETV Bharat Logo

Copyright © 2024 Ushodaya Enterprises Pvt. Ltd., All Rights Reserved.