ಬೆಂಗಳೂರು: ರಾಜ್ಯದಲ್ಲಿ ಪ್ರತಿ ದಿನ 5,500 ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಕರ್ನಾಟಕ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ಮೇ. 8ರಂದು 1 ಲಕ್ಷ ಪರೀಕ್ಷೆಗಳ ಮೈಲಿಗಲ್ಲನ್ನು ತಲುಪಿದ 10 ದಿನಗಳಲ್ಲಿ, ಇಂದಿಗೆ 1.56 ಲಕ್ಷ ಪರೀಕ್ಷೆ ಮಾಡಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ

ದಿನಕ್ಕೆ ಸರಾಸರಿ 5,500 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮೇ. 30ರೊಳಗೆ ನಾವು ದಿನಕ್ಕೆ 10,000 ಪರೀಕ್ಷೆ ಸಾಮರ್ಥ್ಯ ಪಡೆಯಲಿದ್ದೇವೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.