ಬೆಂಗಳೂರು: ರಾಜ್ಯದಲ್ಲಿಂದು ಕೂಡ 5,172 ಕೋವಿಡ್ ಪ್ರಕರಣ ದಾಖಲಾಗಿದ್ದು, 98 ಜನರು ಸಾವು ಸಂಭವಿಸಿದೆ.
ಇದೀಗ ಒಟ್ಟು ಸೋಂಕಿತರ ಸಂಖ್ಯೆ 1,29,287 ತಲುಪಿದ್ದು, ವಿವಿಧ ಆಸ್ಪತ್ರೆಗಳಿಂದ 3,860 ಜನರು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇಲ್ಲಿಯವರೆಗೆ 53,648 ಗುಣಮುಖರಾಗಿದ್ದು, ಸದ್ಯ 73,219 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ರಾಜ್ಯದಲ್ಲಿ 2,412 ಜನರು ಸಾವನ್ನಪ್ಪಿದ್ದು, 602 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಇಂದು 21,075 ಆ್ಯಂಟಿಜೆನ್ ಟೆಸ್ಟ್ ಕಿಟ್ಗಳು ಹಾಗೂ 13,685 ಗಂಟಲು ದ್ರವ ಪರೀಕ್ಷೆ ಸೇರಿ ಒಟ್ಟು 34,760 ಕೋವಿಡ್ ಟೆಸ್ಟ್ ನಡೆಸಲಾಗಿದೆ. ಬೆಂಗಳೂರಿನಲ್ಲಿ 1,852 , ಮೈಸೂರಿನಲ್ಲಿ 365, ಬಳ್ಳಾರಿ 269, ಕಲಬುರಗಿ 219, ಬೆಳಗಾವಿ 219, ಧಾರವಾಡ 184, ಹಾಸನ 146, ದಕ್ಷಿಣ ಕನ್ನಡ 139, ಉಡುಪಿ 136 ಬಾಗಲಕೋಟೆ 134 ,ವಿಜಯಪುರ 129 , ಶಿವಮೊಗ್ಗ 119, ರಾಯಚೂರಿನಲ್ಲಿ 109 ಕೇಸ್ ಪತ್ತೆಯಾಗಿವೆ.