ETV Bharat / state

22 ಮುಂಚೂಣಿ‌ ಕಾರ್ಯಕರ್ತರ ಗುಂಪುಗಳಿಗೆ ಲಸಿಕೆ ವಿತರಣೆ ಚುರುಕು

author img

By

Published : May 31, 2021, 9:29 PM IST

ನಗರದಲ್ಲಿ 18 ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಿರುವ 22 ವರ್ಗಗಳಿಗೆ ಪ್ರತ್ಯೇಕ ಶಿಬಿರಗಳನ್ನು ಮಾಡಿ ತ್ವರಿತವಾಗಿ ಲಸಿಕೆ ನೀಡಲು ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಸೂಚಿಸಿದ್ದಾರೆ.

vaccine
vaccine

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 18 ರಿಂದ 44 ವರ್ಷದ ಮುಂಚೂಣಿ ಕಾರ್ಯರ್ತರಿಗೆ ಲಸಿಕೆ ನೀಡುವ ಕುರಿತು ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಅವರು ಅಧಿಕಾರಿಗಳ ಜೊತೆ ವರ್ಚುಯಲ್ ಸಭೆ ನಡೆಸಿದರು.

ನಗರದಲ್ಲಿ 18 ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಿರುವ 22 ವರ್ಗಗಳಿಗೆ ಪ್ರತ್ಯೇಕ ಶಿಬಿರಗಳನ್ನು ಮಾಡಿ ತ್ವರಿತವಾಗಿ ಲಸಿಕೆ ನೀಡಲು ಸೂಕ್ತ ಕ್ರಮ ವಹಿಸಬೇಕೆಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು. 22 ವರ್ಗಗಳಿಗೆ ನಿಗದಿತ ಸ್ಥಳ ಗುರುತಿಸಿ ಶಿಬಿರಗಳನ್ನು ಮಾಡಿ ಲಸಿಕೆ ನೀಡಲು ಕ್ರಮವಹಿಸಬೇಕು. ಯಾರಿಗೂ ಸಮಸ್ಯೆ ಆಗದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ ಆ ಸ್ಥಳದ ಬಗ್ಗೆ ಫಲಾನುಭವಿಗಳಿಗೆ ಮಾಹಿತಿ ನೀಡಿ ಲಸಿಕೆ ನೀಡಬೇಕು ಎಂದು ಸೂಚನೆ ನೀಡಿದರು.

ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದ್ದು, ಮುಂಚೂಣಿ ಕಾರ್ಯಕರ್ತರಿಗೆ ಆಯೋಜಿಸುತ್ತಿರುವ ಶಿಬಿರಗಳಲ್ಲಿ 18 ರಿಂದ 44 ವರ್ಷದವರಿಗೆ ನೀಡಲಾಗುತ್ತಿದೆ. ಈ ಶಿಬಿರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಂತಿಲ್ಲ. ಆದ್ದರಿಂದ ಸರಿಯಾದ ಅನುಕ್ರಮದಲ್ಲಿ ಲಸಿಕೆ ನೀಡಬೇಕು. ಯಾವುದೇ ತೊಡಕು ಉಂಟಾಗಬಾರದು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.