ದೊಡ್ಡಬಳ್ಳಾಪುರ : ನಗರ ಹೊರವಲಯದ ಅಪೆರಲ್ಸ್ ಪಾರ್ಕ್ನಲ್ಲಿ ಆಗತಾನೇ ಹುಟ್ಟಿದ ನವಜಾತ ಗಂಡು ಶಿಶುವೊಂದನ್ನು ಯಾರೋ ಪಾಪಿಗಳು ಬಿಟ್ಟು ಪರಾರಿಯಾಗಿದ್ದಾರೆ.
ಒಂದು ದಿನದ ಗಂಡು ಶಿಶು ಇದಾಗಿದ್ದು, ಬೆಳಗಿನ ಜಾವ ಅಪೆರಲ್ ಪಾರ್ಕ್ನ ರಸ್ತೆ ಬದಿ ಬಟ್ಟೆಯಲ್ಲಿ ಸುತ್ತಿ ಪರಾರಿಯಾಗಿದ್ದಾರೆ. ದಾರಿಹೋಕರ ಕಣ್ಣಿಗೆ ಮಗು ಕಾಣಿಸಿಕೊಂಡಿದ್ದು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸುದ್ದು ತಿಳಿದು ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್ ಗೌಡ ಶಿಶುವನ್ನು ಸಾರ್ವಜನಿಕ ಆಸ್ಪತ್ರೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಪರಸ್ಪರ ಟ್ರಸ್ಟ್ಗೆ ಶಿಶುವನ್ನ ಹಸ್ತಾಂತರ ಮಾಡಿದ್ದಾರೆ.