ETV Bharat / state

ದೊಡ್ಡಬಳ್ಳಾಪುರ: 25ಕ್ಕೂ ಹೆಚ್ಚು ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು - ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ

ಫಸಲಿಗೆ ಬಂದಿದ್ದ 25ಕ್ಕೂ ಅಧಿಕ ಅಡಿಕೆ ಮರಗಳನ್ನು ರಾತ್ರೋರಾತ್ರಿ ದುಷ್ಕರ್ಮಿಗಳು ಕಡಿದು ಹಾಕಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

perpetrators cut down areca nut trees in Doddaballapur
ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು
author img

By

Published : Dec 4, 2022, 8:12 AM IST

ದೊಡ್ಡಬಳ್ಳಾಪುರ: ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಮರಳೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರ ತಡರಾತ್ರಿ ಗ್ರಾಮದ ರಾಮಪ್ಪ ಎಂಬುವರ ತೋಟದ 25ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ವಿಕೃತಿ ಮೆರೆದಿದ್ದಾರೆ.

ಯಲಹಂಕ ತಾಲೂಕಿನ ಗಂಟಿಗಾನ ಹಳ್ಳಿಯವರಾದ ರಾಮಪ್ಪ ಬಿಇಎಲ್​ ನಿವೃತ್ತ ನೌಕರ. ಪತ್ನಿಯ ಊರಾದ ಮರಳೇನಹಳ್ಳಿಯಲ್ಲಿ ಎರಡು ಎಕರೆ ತೋಟ ಮಾಡಿಕೊಂಡು ಅಲ್ಲಿಯೇ ವಾಸವಿದ್ದರು. 'ನಾಲ್ಕು ವರ್ಷಗಳಿಂದ ಅಡಿಕೆ ಮರಗಳನ್ನು ಮಕ್ಕಳಂತೆ ಸಾಕುತ್ತಿದ್ದೆ. ಮುಂದಿನ 6 ತಿಂಗಳಲ್ಲಿ ಫಸಲು ಕಟ್ಟುತ್ತಿತ್ತು' ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಸನ: 500ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿ ಕಿಡಿಗೇಡಿಗಳ ದುಷ್ಕೃತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.