ETV Bharat / state

'ಮಡಿವಾಳ ಸಮಾಜದವರಿಗೂ ಸುರಕ್ಷತಾ ಕಿಟ್ ವಿತರಿಸಿ'

author img

By

Published : Jun 20, 2020, 9:00 PM IST

ಕೊರೊನಾ ವಾರಿಯರ್ಸ್​ಗಳ ರೀತಿ ಕರ್ತವ್ಯ ನಿರ್ವಹಿಸುತ್ತಿರುವ ಮಡಿವಾಳ ಜನಾಂಗದವರಿಗೆ ರಾಜ್ಯ ಮಡಿವಾಳ ಸಂಘ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಹಾರ ಧಾನ್ಯದ ಕಿಟ್​ಗಳನ್ನು ವಿತರಿಸಲಾಯಿತು.

food grain kit Distribution
ಆಹಾರ ಧಾನ್ಯದ ಕಿಟ್​ ವಿತರಣೆ

ದೊಡ್ಡಬಳ್ಳಾಪುರ: ದೋಬಿ ಘಾಟ್​ಗಳಲ್ಲಿ ದಿನನಿತ್ಯ ಸಾವಿರಾರು ಜನ ಮಡಿವಾಳ ಸಮಾಜದವರು ತಮ್ಮ ಕಾಯಕವನ್ನು ನಂಬಿ ಬದುಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರನ್ನು ಗುರುತಿಸಿ ಸುರಕ್ಷತಾ ಕಿಟ್​ಗಳನ್ನು ವಿತರಿಸಬೇಕು ಎಂದು ಕರ್ನಾಟಕ ರಾಜ್ಯ ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ. ನಂಜಪ್ಪ ಒತ್ತಾಯಿಸಿದ್ದಾರೆ.

ಮಡಿವಾಳ ಸಂಘದ ರಾಜ್ಯಾಧ್ಯಕ್ಷ ಸಿ. ನಂಜಪ್ಪ

ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ರಾಜ್ಯ ಮಡಿವಾಳ ಸಂಘ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೊರೊನಾ ವಾರಿಯರ್ಸ್​ಗಳ ರೀತಿ ಕರ್ತವ್ಯ ನಿರ್ವಹಿಸುತ್ತಿರುವ ಮಡಿವಾಳ ಜನಾಂಗದವರಿಗೆ ಆಹಾರಧಾನ್ಯದ ಕಿಟ್​​ ಗಳನ್ನು ವಿತರಿಸಲಾಯಿತು. ಈ ಸಂದರ್ಭ ಮಾತನಾಡಿದ ಅವರು, ನಮ್ಮ ಸಮಾಜವು ಆಸ್ಪತ್ರೆ, ಹೋಟೆಲ್ ಸೇರಿದಂತೆ ಎಲ್ಲಾ ಸಮಾಜದವರ ಬಟ್ಟೆಗಳನ್ನು ಶುಚಿ ಮಾಡುತ್ತಾರೆ. ಆದರೆ ಸರ್ಕಾರ ನಮ್ಮ ವೃತ್ತಿ ಬಾಂಧವರಿಗೆ ಇದುವರೆಗೂ ಯಾವುದೇ ಸುರಕ್ಷತಾ ಕಿಟ್​ಗಳನ್ನು ವಿತರಿಸಿಲ್ಲ. ಸಾವಿರಾರು ಜನ ಮಡಿವಾಳ ಸಮಾಜದವರು ತಮ್ಮ ಕಾಯಕವನ್ನು ನಂಬಿ ಬದುಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರನ್ನು ಗುರುತಿಸಿ ಸುರಕ್ಷತಾ ಕಿಟ್​ಗಳನ್ನು ವಿತರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುರುಡಯ್ಯ, ತಾಲೂಕು ಅಧ್ಯಕ್ಷ ಎಚ್.ಆರ್. ಮುನಿಶಾಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.