ನೆಲಮಂಗಲ: ಬೆಂಗಳೂರು ಹೊರವಲಯದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ (BIEC) ಅಸಂಖ್ಯ ಪ್ರಮಥರ ಗಣ ಮೇಳ ಹಮ್ಮಿಕೊಳ್ಳಲಾಗಿದೆ.
21ನೇ ಶತಮಾನದಲ್ಲಿ ಚಾರಿತ್ರಿಕ ಘಟನೆಗೆ ಸಾಕ್ಷಿಯಾಗುವ ಕಾರಣಕ್ಕೆ ವಿಶಿಷ್ಟವಾದ ಈ ಸಮಾವೇಶ ಆಯೋಜಿಸಲಾಗಿದ್ದು, ಬಸವ ಕೇಂದ್ರಗಳು, ಬಸವ ಸಂಘಟನೆಗಳು, ಸರ್ವಜನಾಂಗದ ಮಠಾಧೀಶರು ಆಯೋಜಿಸಿರುವ ಸರ್ವಶರಣರ ಸಮ್ಮೇಳನವಾದ ಈ ಗಣಮೇಳ ಫೆಬ್ರವರಿ 16 ರಂದು ನಡೆಯಲಿದೆ. ಈ ಕುರಿತು ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಇದೊಂದು ಸರ್ವಧರ್ಮ ಸಮ್ಮೇಳನವಾಗಿದ್ದು, ಈ ಸಮ್ಮೇಳನದಲ್ಲಿ ರಾಜಕಾರಣಿಗಳು ಹಲವು ಮಠಾಧೀಶರು ಸೇರಿದಂತೆ ದೇಶ ವಿದೇಶಗಳಿಂದ ಲಕ್ಷಾಂತರ ಜನ ಭಾಗವಹಿಸುವ ಸಾಧ್ಯತೆಯಿದೆ ಇದೆ ಎಂದ್ರು. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಸದಾನಂದ ಗೌಡ ಅವರಂತಹ ಮಹಾನ್ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಇಡೀ ದೇಶವೇ ಬೆರಗಾಗುವಂತಹ ಬೃಹತ್ ಸಮ್ಮೇಳನವಾಗಲಿದೆ ಎಂದು ತಿಳಿಸಿದರು.
ಮುರುಘಾ ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ವಿಶ್ವಶಾಂತಿಗಾಗಿ ಜಗತ್ತನ್ನೇ ಬೆರಗಾಗಿಸುವಂತಹ ಕಾರ್ಯಕ್ರಮ ಇದಾಗಲಿದೆ. ರಾಜ್ಯದ ಹಾಗೂ ದೇಶದ ಒಂದು ಸಾವಿರಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗುತ್ತಿರುವುದು ಅಲ್ಲದೇ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಈ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಈ ಗಣಮೇಳದ ಮುಖಾಂತರ ಇಡೀ ಜಗತ್ತಿಗೆ ಉತ್ತಮ ಸಂದೇಶ ಕೊಡುವ ನಿಟ್ಟಿನಲ್ಲಿ ಅನೇಕ ದೇಶಗಳ ಧರ್ಮದ ಗುರುಗಳು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ವಿವಿಧ ದೇಶಗಳಿಂದ ಭಕ್ತರು ಬರುವುದರಿಂದ ಭಕ್ತರ ಅನುಕೂಲಕ್ಕಾಗಿ ಊಟ , ವಸತಿ, ಮತ್ತು ಸಾರಿಗೆ ವ್ಯವಸ್ಥೆ ಮಾಡಲಾಗಿದೆ.