ETV Bharat / state

3 ವರ್ಷದ ಮಗನಿದ್ರೂ ಬಾಸ್​ ಜೊತೆ ಲವ್ವಿ ಡವ್ವಿ: ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಸ್ಕೆಚ್​

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಪ್ರಿಯಕರ ಕಲ್ಲೇಶ್ ಜೈನ್ ಸೇರಿದಂತೆ ಆತನ ಸಹಚರರಾದ ಕಾರು ಚಾಲಕ ಪ್ರಭು, ತ್ಯಾಮಗೊಂಡ್ಲು ಬಳಿಯ ನರಸಾಪುರದ ನಿವಾಸಿಗಳಾದ ಗೋಪಾಲಯ್ಯ, ಶಶಿಕುಮಾರ್, ನಾಗರಾಜು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ಗಿರೀಶ್ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆ.

ಗಂಡನ ಹತ್ಯೆಗೆ ಸಂಚು ರೂಪಿಸಿದ್ದ ಹೆಂಡತಿ ಸೇರಿ 6 ಜನರ ಬಂಧನ

author img

By

Published : Jul 25, 2021, 4:56 PM IST

ನೆಲಮಂಗಲ: ಮದುವೆಯಾಗಿ 3 ವರ್ಷದ ಗಂಡು ಮಗು ಇದ್ದರೂ ಆಕೆಗೆ ತಾನು ಕೆಲಸ ಮಾಡುತ್ತಿರುವ ಬಾಸ್ ಜೊತೆ ಲವ್ ಆಗಿತ್ತು. ಹೆಂಡತಿಯ ಅನೈತಿಕ ಸಂಬಂಧ ಪ್ರಶ್ನಿಸಿದ ಗಂಡ, ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದುಕೊಂಡು ಕೊಲೆಗೆ ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟಿದ್ದ ಐನಾತಿ ಹೆಂಡತಿ ಸೇರಿ 6 ಜನರನ್ನು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಅರಿಶಿನಕುಂಟೆಯ ಆದರ್ಶನಗರ ನಿವಾಸಿ ಗಿರೀಶ್ ಮೇಲೆ ಕೊಲೆ ಯತ್ನವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಪ್ರಿಯಕರ ಕಲ್ಲೇಶ್ ಜೈನ್ ಸೇರಿದಂತೆ ಆತನ ಸಹಚರರಾದ ಕಾರು ಚಾಲಕ ಪ್ರಭು, ತ್ಯಾಮಗೊಂಡ್ಲು ಬಳಿಯ ನರಸಾಪುರದ ನಿವಾಸಿಗಳಾದ ಗೋಪಾಲಯ್ಯ, ಶಶಿಕುಮಾರ್, ನಾಗರಾಜು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಪತಿ ಗಿರೀಶ್ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾರೆ.

ಘಟನೆ ವಿವರ: ಗಿರೀಶ್ ಹಾಗೂ ಚೈತ್ರಾ 2015ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಸದ್ಯ ಇವರಿಗೆ ಮೂರು ವರ್ಷದ ಗಂಡು ಮಗುವಿದ್ದು, ಗಿರೀಶ್ ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ಸಮೀಪ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿ ಚೈತ್ರ ನೆಲಮಂಗಲದ ದಾನೋಜಿಪಾಳ್ಯ ಬಳಿಯ ಲಾರಿ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದಳು.

ಆರೋಪಿ ಚೈತ್ರ ಕಳೆದ ಮೇ 9ರ ಭಾನುವಾರ ಕೆಲಸಕ್ಕೆ ರಜೆ ಇದ್ದರೂ ಕೂಡ ಕೆಲಸಕ್ಕೆ ಹೋಗಿದ್ದಳು. ಇದನ್ನು ಪ್ರಶ್ನಿಸಿದ ಗಂಡನಿಗೆ ಸರಿಯಾದ ಉತ್ತರ ನೀಡಿರಲಿಲ್ಲ. ಇದರಿಂದ ಅನುಮಾನಗೊಂಡ ಗಿರೀಶ್ ಚೈತ್ರಾಳ ಮೊಬೈಲ್ ಪರಿಶೀಲಿಸಿದಾಗ, ಚೈತ್ರ ಕೆಲಸ ಮಾಡುತ್ತಿದ್ದ ಶೋ ರೂಂ ಮಾಲೀಕ ಕಲ್ಲೇಶ್ ಜೈನ್ ಜೊತೆಗಿನ ಲವ್ವಿ ಡವ್ವಿ ಗೋತ್ತಾಗಿತ್ತು. ಮೊಬೈಲ್​​ನಲ್ಲಿ ಫೋಟೋ ಹಾಗೂ ಅಶ್ಲೀಲ ಮೆಸೇಜ್‌ಗಳನ್ನು ನೋಡಿ ಗಿರೀಶ್ ಕೋಪಗೊಂಡು ಪತ್ನಿಗೆ ಎಚ್ಚರಿಕೆ ಸಹ ನೀಡಿದ್ದ.

ಪತಿ ಎಚ್ಚರಿಕೆ ನೀಡಿದ ನಂತರ ಗಂಡ ತುಂಬಾ ಅನುಮಾನ ಪಡುತ್ತಿದ್ದಾನೆ ಎಂದು ಕ್ಯಾತೆ ತೆಗೆದಿದ್ದ ಚೈತ್ರ, ತನ್ನ ಸಹೋದರ ಚಲುವರಾಜ್ ಬಳಿ ನಾಟಕವಾಡಿದ್ದಳು. ನಂತರ ಹಿರಿಯರೆಲ್ಲರೂ ಸೇರಿ ಗಿರೀಶ್ ಹಾಗೂ ಚೈತ್ರ ಸಂಸಾರ ಚೆನ್ನಾಗಿರಲೆಂದು ರಾಜಿಸಂಧಾನ ಮಾಡಿಸಿದ್ದರು. ಇದಾದ ನಂತರದಲ್ಲೂ ಚೈತ್ರ ತನ್ನ ಪ್ರಿಯಕರನ ಸಂಗ ಮುಂದುವರೆಸಿದ್ದರು. ನಮ್ಮ ಈ ಸಂಬಂಧಕ್ಕೆ ತನ್ನ ಗಂಡ ಅಡ್ಡಿಯಾಗುತ್ತಾನೆ ಎಂದುಕೊಂಡಿದ್ದ ಚೈತ್ರ, ಆತನನ್ನು ಕೊಲೆ ಮಾಡುವಂತೆ ಪ್ರಿಯಕರನಿಗೆ ತಿಳಿಸಿದ್ದಳು.

ಇದರಂತೆ ಜುಲೈ 1 ರಂದು ಗಿರೀಶ್ ಹತ್ಯೆಗೆ ಸಂಚು ರೂಪಿಸಿದ್ದ ಕಲ್ಲೇಶ್ ಜೈನ್ ಮತ್ತು ತಂಡ ಮಧ್ಯಾಹ್ನ ಹುಸ್ಕೂರು ಬಳಿ ಗಿರೀಶ್‌ನನ್ನು ತಡೆದು ಅವ್ಯಾಚವಾಗಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದರು. ಅಲ್ಲಿಂದ ತಪ್ಪಿಸಿಕೊಂಡ ಬಂದಿದ್ದ ಗಿರೀಶ್, ಸಿದಾ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದ.

ಇದನ್ನೂ ಓದಿ: ಕಲಬುರಗಿ: ತುಂಬಿ ಹರಿಯುತ್ತಿರುವ ಹಳ್ಳದಲ್ಲಿಯೇ ಸ್ಮಶಾನದತ್ತ ಶವಯಾತ್ರೆ

ಜು.10 ರಂದು ಬೆಂಗಳೂರು ಉತ್ತರ ತಾಲೂಕಿನ ಆರ್‌ಎಂಸಿ ಯಾರ್ಡ್ ತರಕಾರಿ ಮಾರುಕಟ್ಟೆ ಬಳಿ‌ ಕಾರು ಚಾಲಕ ಪ್ರಭುನನ್ನು ಪೊಲೀಸರು ಬಂಧಿಸಿ, ವಿಚಾರಿಸಿದಾಗ ಗಿರೀಶ್‌ನನ್ನು ಕೊಲೆ ಮಾಡಲು 10 ಲಕ್ಷ ಹಣ ಸುಪಾರಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದ. ಕಾರು ಚಾಲಕ ಪ್ರಭುವನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಚೈತ್ರ ಹಾಗೂ ಪ್ರಿಯಕರ ಕಲ್ಲೇಶ್ ಜೈನ್ ಈ ಕೊಲೆಗೆ ಸುಪಾರಿ ನೀಡಿದ್ದನ್ನು ಬಾಯಿಬಿಟ್ಟಿದ್ದ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.