ETV Bharat / state

ನನ್ನೆಲ್ಲಾ ಆಸೆಗಳಿಗೆ ಹೆತ್ತವರೇ ಕಲ್ಲು ಹಾಕಿದ್ರು, ಡೆತ್‌ನೋಟ್ ಬರೆದು ನಾಪತ್ತೆ, ಆತ್ಮಹತ್ಯೆ ಶಂಕೆ

ನನ್ನೆಲ್ಲಾ ಆಸೆಗಳಿಗೆ ಹೆತ್ತವರೇ ಕಲ್ಲು ಹಾಕಿದ್ದಾರೆ ಎಂದು ಯುವಕನೋರ್ವ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ. ಇದೀಗ ಬಾಗಲಕೋಟೆಯ ಘಟಪ್ರಭಾ ನದಿ ಸೇತುವೆ ಬಳಿ ಯುವಕನ ಬೈಕ್ ಪತ್ತೆ ಆಗಿದ್ದು, ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಡೆತ್ ನೋಟ್ ಬರೆದು ಯುವಕ ನಾಪತ್ತೆ
author img

By

Published : Sep 29, 2019, 1:32 PM IST

ಬಾಗಲಕೋಟೆ: ತನ್ನ ಯಾವ ಕೆಲಸಕ್ಕೂ ಮನೆಯವರ ಸಹಕಾರ ಇಲ್ಲ, ನನ್ನೆಲ್ಲಾ ಆಸೆಗಳಿಗೆ ಹೆತ್ತವರೇ ಕಲ್ಲು ಹಾಕಿದ್ದಾರೆ ಎಂದು ಯುವಕನೋರ್ವ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

bagalkote crime
ಸಂಗಮೇಶ್ ಹೊಳೆನ್ನವರ (22) ನಾಪತ್ತೆಯಾದ ಯುವಕ.

ಸಂಗಮೇಶ್ ಹೊಳೆನ್ನವರ (22) ನಾಪತ್ತೆಯಾದ ಯುವಕ.

ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಯಾಗಿರುವ ಸಂಗಮೇಶ್, ಡೆತ್ ನೋಟ್ ಬರೆದು ಅದನ್ನು ವಾಟ್ಸಾಪ್ ಸ್ಟೇಟಸ್​ನಲ್ಲಿ ಹಾಕಿ, ನಾಪತ್ತೆಯಾಗಿದ್ದನು. ಅಲ್ಲದೇ ಇದೀಗ ಜಿಲ್ಲೆಯ ಚಿಚಖಂಡಿ ಕೆಡಿ ಬಳಿಯ ಘಟಪ್ರಭಾ ನದಿ ಸೇತುವೆ ಬಳಿ ಯುವಕನ ಬೈಕ್ ಪತ್ತೆ ಆಗಿದ್ದು, ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಲೋಕಾಪುರ ಪೊಲೀಸರು ಯುವಕನ ಹುಡುಕಾಟ ನಡೆಸುತ್ತಿದ್ದಾರೆ.

bagalkote crime
ಡೆತ್ ನೋಟ್

ಡೆತ್ ನೋಟ್​ನಲ್ಲಿ ಏನಿತ್ತು?

ಇಷ್ಟವಿಲ್ಲದಿದ್ರೂ ಅಕ್ಕನ ಮಗಳ ಜೊತೆ ಮದುವೆಗೆ ಮನೆಯವರು ಮುಂದಾಗಿದಕ್ಕೆ ಯುವಕ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಡೆತ್ ನೋಟ್​ನಲ್ಲಿ ನನ್ನ ಯಾವುದೇ ಕೆಲಸಕ್ಕೂ ಹೆತ್ತವರಿಂದ ನನಗೆ ಸಪೋರ್ಟ್ ಸಿಕ್ಕಿಲ್ಲ. ನನ್ನೆಲ್ಲಾ ಆಸೆಗಳಿಗೆ ಹೆತ್ತವರೇ ಕಲ್ಲು ಹಾಕಿದ್ದಾರೆ, ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಬರೆದಿದ್ದಾನೆ. ಅಲ್ಲದೇ ಪತ್ರದಲ್ಲಿ ತನ್ನ ಪ್ರೀತಿಯ ವಿಷಯವನ್ನು ಬಹಿರಂಗ ಪಡಿಸಿರುವ ಯುವಕ, ನೀನು ಎಲ್ಲೇ ಇದ್ರೂ ಚೆನ್ನಾಗಿರುತ್ತೀಯ ಅನ್ನೋ ನಂಬಿಕೆ ನನಗಿದೆ, ನಾ ನಿನ್ನ ಜೊತೆಲೇ ಇರ್ತೀನಿ, ನಾನು ವಾಪಸ್ ಬರಲ್ಲ, ಬಾಯ್​ ಚಿನ್ನಾ ಎಂದು ಬರೆದಿದ್ದು, ತನ್ನ ಕೆಲ ಸ್ನೇಹಿತರಿಗೆ ನನ್ನ ಕ್ಷಮಿಸಿ, ಮಿಸ್​ ಯೂ ಎಂದು ಬರೆದಿದ್ದಾನೆ.

Intro:AnchorBody:ಬಾಗಲಕೋಟೆ---ಇಷ್ಟವಿಲ್ಲದ ಮದುವೆಗೆ ಹೆತ್ತವರ ಒತ್ತಾಯ ಹಿನ್ನೆಲೆ.
ಮನನೊಂದ ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ,ಬಾಗಲಕೋಟೆ ಜಿಲ್ಲೆಯ ಚಿಚಖಂಡಿ ಕೆಡಿ ಬಳಿಯ ಘಟಪ್ರಭಾ ನದಿ ಸೇತುವೆ ಬಳಿ ನಡೆದಿದೆ.ಸೇತುವೆ ಬಳಿ ಯುವಕನ ಬೈಕ್ ಪತ್ತೆ,ಆಗಿರುವ ಹಿನ್ನೆಲೆಯಲ್ಲಿ
ಸೆತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.ಸಂಗಮೇಶ್ ಹೊಳೆನ್ನವರ (೨೨) ನಾಪತ್ತೆಯಾದ ಯುವಕ. ಮುಧೋಳ ತಾಲ್ಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಯಾಗಿರುವ ಯುವಕನು
ಡೆತ್ ನೋಟ್ ನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿರುವ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೊಲೀಸ್ ರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ
ಲೋಕಾಪುರ ಪೊಲೀಸರಿಂದ ಯುವಕನ ಹುಡುಕಾಟ ನಡೆಸಿದ್ದಾರೆ.ಇಷ್ಟವಿಲ್ಲದಿದ್ರೂ ಅಕ್ಕನ ಮಗಳ ಜೊತೆ ಮದುವೆಗೆ ಮನೆಯವ್ರು ಮುಂದಾಗಿದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಎನ್ನುವ ಶಂಕೆ ವ್ಯಕ್ತವಾಗಿದ್ದು,ಡೇತ್ ನೋಟದಲ್ಲಿ ನನಗೆ ಈಗಲೇ ಮದುವೆ ಇಷ್ಟ ಇರಲಿಲ್ಲ..
ನನ್ನ ಯಾವುದೇ ಕೆಲಸಕ್ಕೂ ಹೆತ್ತವರಿಂದ ನನಗೆ ಸಪೋರ್ಟ್ ಸಿಕ್ಕಿಲ್ಲ.ಪ್ರತಿ ಕೆಲಸದಲ್ಲೂ ಹೆತ್ತವ್ರೆ ನನ್ನನ್ನು ಹೀಯಾಳಿಸ್ತಿದ್ದಿದ್ದು,
ನನಗೆ ನೋವಾಗಿದೆ ಅಂತಾ ಡೆತ್ ನೋಟ್ ಬರೆದಿದ್ದಾನೆ.ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಯುವಕನು,ಡೆತ್ ನೋಟ್ ಮೂಲಕ ಯುವಕನ ಪ್ರೀತಿ ವಿಷಯ ಬಹಿರಂಗ ಪಡಿಸಿ,
ಮಿಸ್ ಯೂ, ಸಾರಿ, ಚೆನ್ನಾಗಿರು, ನಾ ನಿನ್ನ ಜೊತೆಲೇ ಇರ್ತೀನಿ-..ನಾನು ವಾಪಸ್ ಬರಲ್ಲ ಸಾರಿ ಬೈ ಅಂತಾ ಪ್ರೇಯಸಿಗೆ ಡೆತ್ ನೋಟ್ ಮೂಲಕ ಯುವಕನ ಸಂದೇಶ ಕಳಿಸಿದ್ದಾನೆ..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.