ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಾದಾಮಿ ಮತಕ್ಷೇತ್ರದ ಗೋವನಕೊಪ್ಪ ಗ್ರಾಮಕ್ಕೆ ಭೇಟ್ಟಿ ನೀಡಿ, ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಲ್ಲಿ ಮಲಪ್ರಭಾ ನದಿ ಉಕ್ಕಿದ್ದರಿಂದ ಮೂರು ಸಲ ಮುಳುಗಡೆ ಆಗಿದ್ದ ಕಿರು ಸೇತುವೆ ಹಾಗೂ ನದಿ ಪಾತ್ರದ ಜಮೀನಿನ ಬೆಳೆಹಾನಿ ವೀಕ್ಷಿಸಿದರು.
ಬಾದಾಮಿ ಕ್ಷೇತ್ರದಲ್ಲಿ 22 ಕೋಟಿ ರೂ. ಬೆಳೆ ಹಾನಿಯಾಗಿದೆ. ಅಲ್ಲದೆ ಕೊಚ್ಚಿ ಹೋದ ರಸ್ತೆ, ವೀಕ್ಷಣೆ ಮಾಡಿ, ಮೂರು ಕೋಟಿ ರೂ. ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರವಾಹ, ಕೊರೊನಾ ಸಂದರ್ಭದಲ್ಲಿ ಜನರ ಮೈಂಡ್ ಡೈವರ್ಟ್ ಮಾಡೋದಕ್ಕೆ ಡ್ರಗ್ಸ್ ಹೈಲೈಟ್ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಸಂಬಳ ಕೊಡೋಕೆ ಹಣವಿಲ್ಲ. ಅಭಿವೃದ್ಧಿ ಕೆಲಸಕ್ಕೆ ದುಡ್ಡಿಲ್ಲ, ಕೇಂದ್ರದವರು ಜಿಎಸ್ಟಿ ಕಾಂಪನ್ಸೇಷನ್ ಕೊಡಲಿಲ್ಲ. ಸಾಲ ಮಾಡಿ ಹಣ ಖರ್ಚು ಮಾಡಬೇಕಾಗಿದೆ. ಈ ಹಿನ್ನೆಲೆ ಇಂತವನ್ನೆಲ್ಲ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆರ್ಥಿಕ ಕುಸಿತಕ್ಕೆ ದೇವರೆ ಹೊಣೆ ಎಂಬ ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಿದ್ದರಾಮಯ್ಯ, ದೇವರು ಯಾಕೆ ಹೊಣೆ ಆಗ್ತಾರೆ. ಇಡೀ ಜಗತ್ತಲ್ಲಿ ಕೊರೊನಾ ಇದೆ. ಎಲ್ಲಾ ರಾಷ್ಟ್ರದವರು ದೇವರೆ ಹೊಣೆ ಎಂದು ಹೇಳಿದ್ದಾರಾ? ಆ್ಯಕ್ಟ್ ಆಪ್ ಗಾಡ್ ಅಂತ ನಾವೇನು ಮಾಡೋಕಾಗಲ್ಲ ಅಂತಾ ಹೇಳಿದ್ರಾ ಎಂದು ಪ್ರಶ್ನೆ ಮಾಡಿದರು.
ಡ್ರಗ್ಸ್ ಆರೋಪಿ ಶೇಖ್ ಪಾಜಿಲ್ ಜೊತೆ ಸಿದ್ದರಾಮಯ್ಯ ಪೊಟೊ ವಿಚಾರವಾಗಿ ಮಾತನಾಡಿ, ಶೇಖ್ ಪಾಜಿಲ್ ಯಾರೂ ಎಂದು ನನಗೆ ಗೊತ್ತಿಲ್ಲ. ಯಾರ ಜೊತೆ ಫೋಟೋ ಇದೆ ಅನ್ನೋದು ಮುಖ್ಯವಲ್ಲ. ಡ್ರಗ್ಸ್ ಜಾಲದಲ್ಲಿ ಯಾರು ಇದ್ದಾರೆ ಅನ್ನೋದು ಮುಖ್ಯ. ಎವಿಡೆನ್ಸ್ ಇದ್ರೆ ಪೊಲೀಸರು ಕ್ರಮ ಕೈಗೊಳ್ಳಲಿ ಎಂದರು. ಇದೇ ವೇಳೆ ಹಿಂದೆ ಹೇರಿಕೆ ಸರಿಯಲ್ಲ. 5ನೇ ತರಗತಿವರೆಗೆ ಕನ್ನಡ ಕಲಿಕೆ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಈಗಾಗಲೇ ಹೇಳಿದೆ. ಇಷ್ಟವಿದ್ದರೂ ಹಿಂದಿ ಕಲಿಯಲಿ ಎಂದಿದ್ದಾರೆ.