ಬಾಗಲಕೋಟೆ : ಜಿಲ್ಲೆಯ ರಬಕವಿ ಬನಹಟ್ಟಿ ಸಮೀಪದ ರಾಮಪುರದ ಜೊಡಿ ಶ್ರೀಲಕ್ಕವ್ವಾ ಜಾತ್ರೆಯ ನಿಮಿತ್ತ ಹನುಮ ದೇವರ ನೀರೋಕಳಿ ಕಾರ್ಯಕ್ರಮ ಆರಂಭಗೊಂಡಿತು.
ಪಟ್ಟಣದಲ್ಲಿ ವಾರದ ಆಚರೆಣೆಯಂತೆ ಶುಕ್ರವಾರ ಬೆಳಗ್ಗೆ ಸಕಲ ವಾದ್ಯ ಮೇಳಗಳೊಂದಿಗೆ ಸುಮಂಗಲಿಯರಿಂದ ಲಕ್ಕವ್ವಾ ದೇವಿಗೆ ಉಡಿ ತುಂಬಿ ಭಕ್ತಿಯ ಭೂ ಸ್ಪರ್ಷ ಪ್ರಣಾಮಗಳು ನೆರವೇರಿಸಿದರು. ಈ ಸಂದರ್ಭದಲ್ಲಿ 120 ಕೆಜಿಯ ಜೋಳದ ಗೋಣಿ ಚೀಲವನ್ನು ಹೊತ್ತ ವಿಠ್ಠಲ ಹುಚ್ಚಪ್ಪಾ ತಳವಾರ ಸುಮಾರು ಅರ್ಧ ಕಿ.ಮೀ ಕಾಲ್ನಡಿಗೆಯಲ್ಲಿ ಭೂ ಸ್ಪರ್ಶ ಪ್ರಣಾಮಗಳನ್ನು ಸಮರ್ಪಣೆ ಮಾಡಿದರು. ಇನ್ನು ಈ ಜಾತ್ರೆಯಲ್ಲಿ ಕತ್ತೆಗಳ ರೇಸ್ ನಡೆದಿದ್ದು ನೋಡುಗರಿಗೆ ಮನರಂಜನೆ ನೀಡಿತ್ತು.
ಬಣ್ಣದ ನೀರೋಕಳಿ, ದೇವಿಯ ಚೌಡಕಿ ಪದಗಳು, ಕುದುರೆಯ ಸೋಗದ ಆಟಗಳನ್ನು ಏರ್ಪಡಿಸುವ ಮೂಲಕ ಜಾತ್ರೆ ಅದ್ದೂರಿಯಾಗಿ ಜರುಗಿತು.