ಬಾಗಲಕೋಟೆ: ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಒಬ್ಬ ಮೃತಪಟ್ಟು, ಇಬ್ಬರಿಗೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬಾದಾಮಿ ಸಮೀಪದ ಮುತ್ತಲಗೇರಿ ಗ್ರಾಮದಲ್ಲಿ ನಡೆದಿದೆ.
ಕಬ್ಬಲಗೇರಿ ಗ್ರಾಮದ ಶಿವಪ್ಪ ಮುತ್ತಲಗೇರಿ(33) ಎಂದು ಗುರುತಿಸಲಾಗಿದೆ. ನರಗುಂದ ಪಟ್ಟಣಕ್ಕೆ ವಧು ನೋಡಲು ಹೊರಟಾಗ ಈ ಅವಘಡ ಸಂಭವಿಸಿದೆ.
ಗಾಯಳುಗಳು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.