ETV Bharat / state

ವಿಶ್ವ ಏಡ್ಸ್ ದಿನ: ಮಾರಕ​​ ಕಾಯಿಲೆ ಬಗ್ಗೆ ಜಾಗೃತಿ ಜಾಥಾ - worlds aids day celebration news

ವಿಶ್ವ ಏಡ್ಸ್ ದಿನದ ಅಂಗವಾಗಿ ಬಾಗಲಕೋಟೆಯ ನವನವಗರದಲ್ಲಿ ಜಾಥಾ ನಡೆಸಿ, ಮಾರಕ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

aids
ಏಡ್ಸ್​​ ಜಾಗೃತಿ ಜಾಥಾ
author img

By

Published : Dec 1, 2019, 4:46 PM IST

ಬಾಗಲಕೋಟೆ: ವಿಶ್ವ ಏಡ್ಸ್​​ ದಿನದ ಅಂಗವಾಗಿ ಇಂದು ಬಾಗಲಕೋಟೆ ನವನವಗರದಲ್ಲಿ ಮಾರಣಾಂತಿಕ​​ ಕಾಯಿಲೆ ಕುರಿತು ಜನರಲ್ಲಿ ವಿಶೇಷ ಜಾಥಾ ಮೂಲಕ ಜಾಗೃತಿ ಮೂಡಿಸಲಾಯ್ತು.

ಆರೋಗ್ಯ ಇಲಾಖೆ,ಕೆಸಾಪ್ ಸೇರಿದಂತೆ ಇತರ ಸಂಸ್ಥೆಗಳಿಂದ ಜಾಥಾ,ಜಾನಪದ ಶೈಲಿ ಗೀ ಗೀ ಪದಗಳ ಮೂಲಕ ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಇತರ ಮಹಿಳಾ ಸಂಘಟನೆಗಳಿಂದಲೂ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯ್ತು. ಈ ಜಾಥಾಗೆ ಶಾಸಕ ವೀರಣ್ಣ ಚರಂತಿಮಠ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ್ ಚಾಲನೆ ನೀಡಿದರು.

ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಡಾ.ಅನಿಲ್​​​ ದೇಸಾಯಿ ಮಾತನಾಡಿ, ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಕಾಯಿಲೆ ಪೀಡಿತರ ಸಂಖ್ಯೆ ಶೇ.2.5 ರಿಂದ ಶೇ.2.2ಕ್ಕೆ ಇಳಿಮುಖವಾದರೆ, ಗರ್ಭಿಣಿಯರಲ್ಲಿ ಶೇ.0.085 ರಿಂದ ಶೇ.0.082 ಕ್ಕೆ ಇಳಿಮುಖವಾಗಿರುವುದು ಕಂಡುಬಂದಿದೆ ಎಂದ್ರು.

ಏಡ್ಸ್​​ ಜಾಗೃತಿ ಜಾಥಾ

ಜಿಲ್ಲೆಯಲ್ಲಿ ಒಟ್ಟು 3 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು (ಸುರಕ್ಷಾ ಕ್ಲಿನಿಕ್) ಇವುಗಳ ಅಡಿಯಲ್ಲಿ ಏಪ್ರಿಲ್​​​ನಿಂದ ಅಕ್ಟೋಬರ್​​-2019ವರೆಗೆ ಒಟ್ಟು 6,810 ತಪಾಸಣೆ ಮಾಡಲಾಗಿ ಶೇ.62 ರಷ್ಟು ಪ್ರಗತಿ ಸಾಧಿಸಲಾಗಿದೆ. ಎಚ್ಐವಿ ಪೀಡಿತ ಹೆರಿಗೆಗೆ ಬಂದಿರುವ ಮಹಿಳೆಯರಿಂದ ಮಕ್ಕಳಿಗೆ ರೋಗ ಹರಡದಂತೆ ತಡೆಯಲು ಸಾಕಷ್ಟ ಶ್ರಮವಹಿಸಿ, ನೂರಕ್ಕೆ 99 ರಷ್ಟು ಸಾಧನೆ ಮಾಡಲಾಗಿದ್ದು ಹೆಮ್ಮೆಯ ಸಂಗತಿ ಎಂದು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಜಯಶ್ರೀ ಎಮ್ಮಿ ತಿಳಿಸಿದ್ರು.

Intro:AnchorBody:
ಆಂಕರ್--ರಾಜ್ಯದಲ್ಲಿಯೇ ಎಚ್ ಐ ವಿ ಪೀಡಿತ ಸಂಖ್ಯೆಯಲ್ಲಿ ಬಾಗಲಕೋಟೆ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ.ಹೀಗಾಗಿ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಸಾಕಷ್ಟು ಪ್ರಚಾರದ ಕಾರ್ಯಕ್ರಮಗಳು ಹಾಗೂ ಜಾಥಾ ಸೇರಿದಂತೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ ಪರಿಣಾಮ ಪ್ರಸ್ತಕ ಸಾಲಿನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗಿದೆ.ಜಾನಪದ ಕಲೆಗಳಾದ ಗೀಗೀ ಪದ,ಬೈಲಾಟ್,ನಾಟಕಗಳ ಮೂಲಕ ಎಚ್ ಐ ವಿ ರೋಗ ಹರಡುವ ಬಗ್ಗೆ ಮತ್ತು ವಿರೋಧ ಬಳಕೆ ಬಗ್ಗೆ ಜಾಗೃತ ಮೂಡಿಸುವ ಮುಖಾಂತರ ಜಿಲ್ಲೆಯಲ್ಲಿ ಏಚ್ ಐ ವಿ ರೋಗ ನಿಯಂತ್ರಣಕ್ಕೆ ತಂದಿರುವುದು ಶ್ಲಾಘನೀಯವಾಗಿದೆ. ಏಡ್ಸ್ ದಿನಾಚರಣೆ ಅಂಗವಾಗಿ ವಿಶೇಷ ವರದಿ ಇಲ್ಲಿದೆ ನೋಡಿ..

ವೈಸ್-ಓ-1-ಬಾಗಲಕೋಟೆ ಜಿಲ್ಲೆಯು ಎಚ್ ಐ ವಿ/ಏಡ್ಸ್ ಪೀಡತ ರೋಗಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿತ್ತು.2003-04 ರಲ್ಲಿ ಶೇಕಡಾ 40.99 ರಷ್ಟು ಇದ್ದ ರೋಗಿಗಳ ಸಂಖ್ಯೆ ಇದ್ದ ಹಿನ್ನಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಹೊಂದಿತ್ತು.ಈ ಹಿನ್ನಲೆ ಜಿಲ್ಲೆಗೆ ವಿವಿಧ ಸಂಘ-ಸಂಸ್ಥೆಗಳು ಆರೋಗ್ಯ ಇಲಾಖೆ ಮೂಲಕ ಸಾಕಷ್ಟು ಜಾಗೃತಿ ಮೂಡಿಸಲಾಗಿತ್ತು.ಚಿತ್ರ ನಟಿ ಪೂಜಾಗಾಂಧಿ ಅವರಿಗೆ ವಿಶೇಷ ಪ್ರಚಾರಕರನ್ನಾಗಿ ಮಾಡಿ,ಮುಧೋಳ ತಾಲೂಕಿನಲ್ಲಿ ಜಾಗೃತ ಮೂಡಿಸುವ ಕಾರ್ಯ ಸರ್ಕಾರ ಹಮ್ಮಿಕೊಳ್ಳಲಾಗಿತ್ತು.ಜಿಲ್ಲೆಯಲ್ಲಿ ಮುಧೋಳ.ಜಮಖಂಡಿ ತಾಲೂಕಿನಲ್ಲಿ ದೇವದಾಸಿಯರು ಸಾಕಷ್ಟು ಸಂಖ್ಯೆಯಲ್ಲಿದ್ದು,ಜಾಗೃತ ಮೂಡಿಸುವ ಕಾರ್ಯ ನಡೆಸಲಾಗಿತ್ತು.ವಿಶ್ವ ಏಡ್ಸ್ ದಿನದ ಅಂಗವಾಗಿ ಬಾಗಲಕೋಟೆ ನವನವಗರದಲ್ಲಿ ಜಾಥಾ ನಡೆಸಿ,ಜಾಗೃತ ಮೂಡಿಸಲಾಯಿತು.ಈ ಸಮಯದಲ್ಲಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಜಿಲ್ಲಾ ಪಂಚಾಯತ್ ಸಿ ಇ ಓ ಗಂಗೂಬಾಯಿ ಮಾನಕರ್ ಜಾಥಾಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿ ಡಾ,ಅನಿಲ ದೇಸಾಯಿ ಮಾತನಾಡಿ,ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ ಸಾಮಾನ್ಯರಲ್ಲಿ ಶೇ.2.5 ರಿಂದ ಶೇ.2.2ಕ್ಕೆ ಇಳಿಮುಖವಾದರೆ,ಗರ್ಭಿಣಿಯರಲ್ಲಿ ಶೇ.0.085 ರಿಂದ ಶೇ.0.082 ಕ್ಕೆ ಇಳಿಮುಖವಾಗಿರುವುದು ಕಂಡುಬಂದಿರುತ್ತದೆ.ವಯಸ್ಸುವಾರು ನೋಡಲಾಗಿ ಏಪ್ರೀಲ್ 2017 ರಿಂದ ಮಾರ್ಚ 2019ರ ವರೆಗೆ 35 ರಿಂದ 49ವರ್ಷದೊಳಗಿನ ಪುರುಷರಲ್ಲಿ 317 ರಿಂದ 268 ಮಹಿಳೆಯರಲ್ಲಿ 329 ರಿಂದ 319ಕ್ಕೆ ಇಳಿಮುಖವಾಗಿರುವುದು ಕಂಡುಬಂದಿದೆ ಎಂದು ತಿಳಿಸಿದರು.

ಬೈಟ್--ಡಾ.ಅನಿಲ ದೇಸಾಯಿ(ಡಿ ಎಸ್ ಓ)

ವೈಸ್-2-ಜಿಲ್ಲೆಯಲ್ಲಿ ಒಟ್ಟು 12 ಐಸಿಟಿಸಿ ಕೇಂದ್ರಗಳು, 4 ಏ.ಆರ್.ಟಿ ಕೇಂದ್ರಗಳು ಮತ್ತು 9 ಲಿಂಕ್
ಏ.ಆರ್.ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳ ಅಡಿಯಲ್ಲಿ ಪ್ರಾರಂಭದಿಂದ 2019ರ
ಅಕ್ಟೋಬರ ಅಂತ್ಯದ ವರೆಗೆ 31921 ಸೋಂಕಿತರನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, ಇದರಲ್ಲಿ
16299 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಎಚ್.ಐವಿ/ಏಡ್ಸ್ ರೋಗಕ್ಕೆ ತುತ್ತಾದವರು ಚಿಕಿತ್ಸೆ
ಪಡೆದಲ್ಲಿ 20 ವರ್ಷಕ್ಕೂ ಹೆಚ್ಚು ಕಾಲ ಬದುಕಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಒಟ್ಟು 3 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು (ಸುರಕ್ಷಾ ಕ್ಲಿನಿಕ್) ಇವುಗಳ
ಅಡಿಯಲ್ಲಿ ಏಪ್ರೀಲ್ ರಿಂದ ಅಕ್ಟೋಬರ-2019 ವರೆಗೆ ಒಟ್ಟು 6810 ಪರೀಕ್ಷೆ ಮಾಡಲಾಗಿ ಶೇ.62 ರಷ್ಟು
ಪ್ರಗತಿ ಸಾಧಿಸಲಾಗಿದೆ.ಎಚ್ ಐ ವಿ ಪೀಡಿತ ಹೆರಿಗೆ ಬಂದಿರುವ ಮಹಿಳೆಯರಿಂದ ಮಕ್ಕಳಿಗೆ ರೋಗ ಹರಡದಂತೆ ತಡೆಯಲು ಸಾಕಷ್ಟ ಶ್ರಮವಹಿಸಿ,ನೂರಕ್ಕೆ 99 ರಷ್ಟು ಸಾಧನೆ ಮಾಡಲಾಗಿದ್ದು,ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಆರೋಗ್ಯ ಇಲಾಖೆಯ ವೈಧ್ಯಾಧೀಕಾರಿ ಹಾಗೂ ಸ್ತ್ರೀ ರೋಗ ತಜ್ಞೆ ಡಾ.ಜಯಶ್ರೀ ಎಮ್ಮಿ ತಿಳಿಸಿದ್ದಾರೆ.

ಬೈಟ್--ಜಯಶ್ರೀ ಎಮ್ಮಿ(ಸ್ತೀರೋಗ ತಜ್ಞರು)

ವೈಸ್-3- ಆರೋಗ್ಯ ಇಲಾಖೆ,ಕೆಸಾಪ್ ಸೇರಿದಂತೆ ಇತರ ಸಂಸ್ಥೆಗಳಿಂದ ಜಾಥಾ,ಜಾನಪದ ಶೈಲಿ ಗೀ ಗೀ ಪದಗಳ ಮೂಲಕ ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಇತರ ಮಹಿಳಾ ಸಂಘಟನೆಗಳಿಂದಲೂ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿರುವುದರಿಂದ ಪ್ರಥಮ ಜಿಲ್ಲೆಯಾಗಿರುವ ಎಚ್ ಐ ವಿ ಪೀಡಿತರ ಸಂಖ್ಯೆಯಲ್ಲಿ ಬಾಗಲಕೋಟೆ ಇಳಿ ಮುಖವಾಗುತ್ತಿರುವ ಹೆಮ್ಮೆಯ ಸಂಗತಿಯಾಗಿದೆ.Conclusion:ETV-Bharat-Bagalkote

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.