ಬಾಗಲಕೋಟೆ : ವಿಶ್ವ ತಾಯಂದಿರ ದಿನದ ಅಂಗವಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕೈಯಲ್ಲಿ ಲಾಠಿ ಹಿಡಿದು ಬೀದಿಗಿಳಿದು ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುವವರಿಗೆ ಲಾಠಿ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ. ತಾಯಿಯಂತೆ ಬುದ್ಧಿ ಮಾತು ಹೇಳುತ್ತಿದ್ದಾರೆ. ಬೈಕ್ಗಳನ್ನು ನಿಲ್ಲಿಸಿ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸಿ, ಮಾಸ್ಕ್ ಧರಿಸದವರಿಗೆ ಟವೆಲ್, ಖರ್ಚೀಫ್ ಕಟ್ಟುವಂತೆ ತಿಳಿ ಹೇಳುತ್ತಿದ್ದಾರೆ.
ಕೊರೊನಾ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಮಾಹಿತಿಯನ್ನು ಪಡೆದುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ವಿಶ್ವ ಅಮ್ಮಂದಿರ ದಿನದ ಅಂಗವಾಗಿ ಇವರು ಸಹ ತಾಯಿ ರೂಪದಲ್ಲಿ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ.