ಟೋಕಿಯೋ: ಇಂದು ನಡೆದ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಭಾರತದ ಮಹಿಳಾ ಹಾಕಿ ತಂಡ ಉತ್ತಮವಾಗಿ ಪ್ರದರ್ಶನ ನೀಡುವುದರ ಮೂಲಕ ಸೌತ್ ಆಫ್ರಿಕಾ ವಿರುದ್ಧ 4-3 ಅಂತರಿಂದ ಭರ್ಜರಿ ಜಯ ಸಾಧಿಸಿತು.
-
News Flash:
— India_AllSports (@India_AllSports) July 31, 2021 " class="align-text-top noRightClick twitterSection" data="
Women's #Hockey: India beat South Africa 4-3 in their final pool match.
It keeps India in contention for QF spot.
For India to go through, Ireland should either lose or play out a draw against Great Britain later today. #Tokyo2020 #Tokyo2020withIndia_AllSports pic.twitter.com/thDFZINSF8
">News Flash:
— India_AllSports (@India_AllSports) July 31, 2021
Women's #Hockey: India beat South Africa 4-3 in their final pool match.
It keeps India in contention for QF spot.
For India to go through, Ireland should either lose or play out a draw against Great Britain later today. #Tokyo2020 #Tokyo2020withIndia_AllSports pic.twitter.com/thDFZINSF8News Flash:
— India_AllSports (@India_AllSports) July 31, 2021
Women's #Hockey: India beat South Africa 4-3 in their final pool match.
It keeps India in contention for QF spot.
For India to go through, Ireland should either lose or play out a draw against Great Britain later today. #Tokyo2020 #Tokyo2020withIndia_AllSports pic.twitter.com/thDFZINSF8
ಗ್ರೂಪ್ ‘ಎ’ ವಿಭಾಗದಲ್ಲಿ ಭಾರತಕ್ಕೆ ಇದು ಎರಡನೇ ಜಯವಾಗಿದೆ. ಮೊದಲಾರ್ಧದಲ್ಲಿ ಭಾರತ ಮತ್ತು ಐರ್ಲೆಂಡ್ ತಂಡ 2-2 ಗೋಲ್ಗಳನ್ನು ಪಡೆದು ಆಟ ಮುಂದುವರೆಸಿದ್ದವು. ಬಳಿಕ ಆಟ ರೋಚಕತೆಯಿಂದ ಕೂಡಿತ್ತು. ಭಾರತ ಮತ್ತು ಸೌತ್ ಆಫ್ರಿಕಾ ತಂಡ 3-3 ಗೋಲ್ಗಳನ್ನು ಗಳಿಸಿ ಮುನ್ನಡೆಯುತ್ತಿದ್ದವು. ಕೊನೆಯ ಕ್ಷಣದಲ್ಲಿ ಭಾರತದ ಪರವಾಗಿ ಕಟಾರಿಯಾ ಗೋಲು ಬಾರಿಸಿದರು. ಈ ಮೂಲಕ ಭಾರತ ತಂಡ 4-3 ರಿಂದ ಮುನ್ನಡೆ ಪಡೆಯಿತು. ಅಂತಿಮವಾಗಿ ಭಾರಿ ಒತ್ತಡದಲ್ಲಿದ್ದ ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧ 4-3 ಮೂಲಕ ರೋಚಕ ಜಯ ಸಾಧಿಸಿತು.
ಭಾರತದ ಪರ ವಂದನಾ ಕಟಾರಿಯಾ ಮೂರು ಗೋಲ್ಗಳು ಮತ್ತು ನೇಹಾ ಒಂದು ಗೋಲ್ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಸೌತ್ ಆಫ್ರಿಕಾ ಪರ ಹಂಟರ್, ಮಾರಿಯಾಸ್, ಗ್ಲ್ಯಾಸ್ಬಿ ತಲಾ ಒಂದೊಂದು ಗೋಲ್ ಬಾರಿಸುವ ಮೂಲಕ ಭಾರತದ ವನಿತೆಯರಿಗೆ ಕಠಿಣ ಸವಾಲು ನೀಡಿದರು.
ಮುಂದಿನ ಪಂದ್ಯದಲ್ಲಿ ಐರ್ಲೆಂಡ್ ಬಲಿಷ್ಠ ಗ್ರೇಟ್ ಬ್ರಿಟನ್ ವಿರುದ್ಧ ಅದೃಷ್ಟ ಪರೀಕ್ಷಿಸಲಿದೆ. ಒಂದು ವೇಳೆ ಗ್ರೇಟ್ ಬ್ರಿಟನ್ ವಿರುದ್ಧ ಐರ್ಲೆಂಡ್ ಸೋತರೇ ಭಾರತ 'ಎ' ಗುಂಪಿನಲ್ಲಿ 4ನೇ ಸ್ಥಾನದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಲಿದೆ.