ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನದೊಂದಿಗೆ ಸಂತೋಷವಾಗಿರುವುದು ತುಂಬಾ ಕಷ್ಟ ಎಂದು ಭಾರತೀಯ ಗಾಲ್ಫರ್, ಕರ್ನಾಟಕದ ಅದಿತಿ ಅಶೋಕ್ ಹೇಳಿದ್ದಾರೆ.
ಒಲಿಂಪಿಕ್ಸ್ನ ಗಾಲ್ಫ್ನಲ್ಲಿ ನಾಲ್ಕನೇ ಸ್ಥಾನ ಪಡೆದ ಅದಿತಿ, ಪದಕ ಪಡೆಯದೇ ಇರುವುದಕ್ಕೆ ನಿರಾಸೆ ವ್ಯಕ್ತಪಡಿಸಿದ್ದಾರೆ. 23 ವರ್ಷದ ಅದಿತಿ ಉತ್ತಮ ಪ್ರದರ್ಶನದ ಮೂಲಕ ಫೈನಲ್ ತಲುಪಿದ್ದರು.
"ಬೇರೆ ಯಾವುದೇ ಪಂದ್ಯಾವಳಿಯಲ್ಲಿ ನಾನು ಸಂತೋಷದಿಂದ ನಾಲ್ಕನೇ ಸ್ಥಾನವನ್ನು ಸಂತೋಷದಿಂದಲೇ ಸ್ವೀಕರಿಸುತ್ತಿದ್ದೆ. ಆದರೆ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನದೊಂದಿಗೆ ಸಂತೋಷವಾಗಿರುವುದು ಕಷ್ಟ. ನಾನು ಚೆನ್ನಾಗಿ ಆಡಿದ್ದೇನೆ ಮತ್ತು ಶೇಕಡಾ ನೂರರಷ್ಟು ಶ್ರಮ ಹಾಕಿದ್ದೇನೆ" ಎಂದು ಅದಿತಿ ಅಶೋಕ್ ಹೇಳಿದ್ದಾರೆ.
"ನಾನು ಅನೇಕ ಫೇರ್ವೇಗಳನ್ನು ಮಿಸ್ ಮಾಡಿಕೊಂಡೆ. ನಾನು ಪದಕ ಪಡೆದಿದ್ದರೆ ಎಲ್ಲರೂ ಇನ್ನೂ ಸಂತೋಷವಾಗುತ್ತಿದ್ದರು. ಆದರೆ ನನಗೆ ಪದಕ ಪಡೆಯಲು ಸಾಧ್ಯವಾಗಿಲ್ಲ." ಎಂದು ಅವರು ಬೇಸರ ವ್ಯಕ್ತಪಡಿಸಿದರು.
"ನನ್ನ ಮುಂದೆ ಇನ್ನೂ ಹೆಚ್ಚಿನ ಅವಕಾಶಗಳಿವೆ. ನಾನು ಗಾಲ್ಫ್ ಆರಂಭಿಸಿದಾಗ, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಕನಸು ಕಾಣಲಿಲ್ಲ. ಆಗ ಗಾಲ್ಫ್ ಒಲಿಂಪಿಕ್ ಕ್ರೀಡೆಯೂ ಆಗಿರಲಿಲ್ಲ." ಎಂದು ಅದಿತಿ ತಿಳಿಸಿದರು.