ಮಿಯಾಮಿ(ಯುಎಸ್ಎ): ವಿಶ್ವದ 2ನೇ ಶ್ರೇಯಾಂಕಿತ ಆಟಗಾರ್ತಿಯಾದ ಜಪಾನ್‌ನ ನವೋಮಿ ಒಸಾಕರನ್ನು ಮಣಿಸುವ ಮೂಲಕ ಗ್ರೀಸ್ನ ಮರಿಯಾ ಸಕ್ಕರಿ ಸೆಮಿಫೈನಲ್ ಪ್ರವೇಶಿಸಿದರು.
ಒಂದು ವರ್ಷದಿಂದ ಸೋಲೇ ಕಾಣದೆ ಸತತ 23 ಪಂದ್ಯಗಳಿಂದಲೂ ಅಜೇಯರಾಗುಳಿದಿದ್ದ ಜಪಾನ್‌ನ ಸ್ಟಾರ್ ಆಟಗಾರ್ತಿಯನ್ನು ಮರಿಯಾ ಸಕ್ಕರಿ 6-0,6-4ರ ನೇರ ಸೆಟ್ಗಳಲ್ಲಿ ಮಣಿಸಿದ್ದಾರೆ. ಯುಎಸ್ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಒಸಾಕ ಎರಡೂ ಸೆಟ್ಗಳಲ್ಲೂ 23ನೇ ಶ್ರೇಯಾಂಕದ ಆಟಗಾರ್ತಿಯ ವಿರುದ್ಧ ಹೀನಾಯವಾಗಿ ಸೋಲುಂಡರು.
ಎರಡನೇ ಸೆಟ್ನಲ್ಲಿ 0-3ರ ಹಿನ್ನಡೆಯಲ್ಲಿದ್ದ ಸಕ್ಕರಿ 22 ವಿನ್ನರ್ಸ್ಗಳೊಂದಿಗೆ ತಿರುಗಿಬಿದ್ದು, 6-4ರಲ್ಲಿ ಸೆಟ್ ಗೆದ್ದರು. ಒಸಾಕ 23 ತಪ್ಪುಗಳನ್ನೆಸಗಿದರೆ, ಕೇವಲ 5 ವಿನ್ನರ್ಸ್ಗಳನ್ನು ಮಾತ್ರ ಪಡೆದರು.
ಸಕ್ಕರಿ ಸೆಮಿಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಕೆನಡಾದ ಬಿಯಾಂಕ ಆ್ಯಂಡ್ರಿಸ್ಕು ಅವರ ಸವಾಲನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: ಮಿಯಾಮಿ ಓಪನ್.. ಸೆಮಿಫೈನಲ್ಗೆ ಲಗ್ಗೆಯಿಟ್ಟ ನಂಬರ್ 1 ಆಶ್ಲೆ ಬಾರ್ಟಿ