ನ್ಯೂಯಾರ್ಕ್: ನೋವಾಕ್ ಜೊಕೊವಿಕ್ ಫೈನಲ್‌ನಲ್ಲಿ ಆಘಾತಕಾರಿ ಸೋಲು ಅನುಭವಿಸಿ ನಿರಾಸೆ ಅನುಭವಿಸಿದ್ದಾರೆ. ಯುಎಸ್ ಓಪನ್ ಫೈನಲ್‌ನಲ್ಲಿ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 6-4, 6-4, 6-4 ನೇರ ಸೆಟ್ಗಳಿಂದ ಸೋಲು ಅನುಭವಿಸಿದ್ದಾರೆ.
-
Daniil Medvedev just won the #USOpen on his wedding anniversary.
— US Open Tennis (@usopen) September 12, 2021 " class="align-text-top noRightClick twitterSection" data="
Good thing, because he didn't have a present ready 😂 pic.twitter.com/eUXVYEyzup
">Daniil Medvedev just won the #USOpen on his wedding anniversary.
— US Open Tennis (@usopen) September 12, 2021
Good thing, because he didn't have a present ready 😂 pic.twitter.com/eUXVYEyzupDaniil Medvedev just won the #USOpen on his wedding anniversary.
— US Open Tennis (@usopen) September 12, 2021
Good thing, because he didn't have a present ready 😂 pic.twitter.com/eUXVYEyzup
ಇನ್ನು ಮೆಡ್ಬೆಡೆವ್ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ಅಮೆರಿಕನ್ ಒಪನ್ ಟೆನಿಸ್ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ. ಮೆಡ್ವೆಡೆವ್ ಆಶ್ಚರ್ಯಕರ ರೀತಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಜೊಕೊವಿಕ್ ಅವರನ್ನು ಸೋಲಿಸಿ, ವಿಶ್ವನಂಬರ್ ಒನ್ ಆಟಗಾರನ 21 ಗ್ರ್ಯಾಂಡ್ ಸ್ಲಾಮ್ ಗೆಲುವಿನ ಆಸೆಗೆ ತಣ್ಣೀರೆರಚಿದ್ದಾರೆ. ಈಗಾಗಲೇ ಟೆನಿಸ್ ದಿಗ್ಗಜರಾದ ಫೆಡರರ್ ಹಾಗೂ ನಡಾಲ್ 20 ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಮೂಲಕ ಜೊಕೊವಿಕ್ ಜತೆ ಸಮಾನ ಸ್ಥಾನ ಹಂಚಿಕೊಂಡಿದ್ದಾರೆ.
-
Champion status 🏆 pic.twitter.com/dMbePkgano
— US Open Tennis (@usopen) September 12, 2021 " class="align-text-top noRightClick twitterSection" data="
">Champion status 🏆 pic.twitter.com/dMbePkgano
— US Open Tennis (@usopen) September 12, 2021Champion status 🏆 pic.twitter.com/dMbePkgano
— US Open Tennis (@usopen) September 12, 2021
21ನೇ ಗ್ರ್ಯಾಂಡ್ಸ್ಲಾಮ್ ಗೆಲ್ಲಲು ಆಗದೇ ಇದ್ದರೂ ಎಲ್ಲ ಗ್ರ್ಯಾಂಡ್ಸ್ಲಾಮ್ಗಳ ಫೈನಲ್ ತಲುಪುವ ಮೂಲಕ ದಾಖಲೆ ಬರೆದಿದ್ದಾರೆ. ಮೆಡ್ವೆಡೆವ್ ಅವರನ್ನು ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ನಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಅಷ್ಟೇ ಅಲ್ಲ ಜೊಕೊವಿಕ್ ಫ್ರೆಂಚ್ ಹಾಗೂ ವಿಂಬಲ್ಡನ್ ಒಪನ್ ಗೆಲ್ಲುವ ಮೂಲಕ ನಾಗಾಲೋಟ ಮುಂದುವರಿಸಿದ್ದರು. ಆದರೆ, ಯುಎಸ್ ಒಪನ್ನಲ್ಲಿ ಮೆಡ್ವೆಡೆವ್ ನೊವಾಕ್ಗೆ ಸೋಲಿನ ರುಚಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.