ETV Bharat / sports

French Open 2021: ಕ್ವಾರ್ಟರ್ ಫೈನಲ್ ತಲುಪಿದ 'ಕಿಂಗ್​ ಆಫ್​ ಕ್ಲೇ ಕೋರ್ಟ್' - ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ ರಾಫೆಲ್ ನಡಾಲ್

ನಡಾಲ್​ 2005ರಲ್ಲಿನ ಚೊಚ್ಚಲ ಪಂದ್ಯದ ಬಳಿಕ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ಕೇವಲ 2 ಪಂದ್ಯಗಳಲ್ಲಿ ಸೋತಿದ್ದು, 104 ಪಂದ್ಯಗಳನ್ನು ಜಯಿಸಿದ್ದಾರೆ. ಈ ಗೆಲುವಿನ ಮೂಲಕ ಪ್ಯಾರಿಸ್‌ನಲ್ಲಿ ಸತತ ಸೆಟ್‌ಗಳ ಗೆಲುವಿನ ಓಟವನ್ನು 35ಕ್ಕೆ ಏರಿಸಿಕೊಂಡಿದ್ದಾರೆ.

French Open 2021
ಕ್ವಾರ್ಟರ್ ಫೈನಲ್ ತಲುಪಿದ 'ಕಿಂಗ್​ ಆಫ್​ ಕ್ಲೇ ಕೋರ್ಟ್'
author img

By

Published : Jun 8, 2021, 12:37 AM IST

ಪ್ಯಾರಿಸ್: ಇಟಲಿಯ ಜಾನಿಕ್ ಸಿನ್ನರ್ ವಿರುದ್ಧ ನೇರ ಸೆಟ್‌ಗಳ ಗೆಲುವು ಸಾಧಿಸಿದ ರಾಫೆಲ್ ನಡಾಲ್ 15ನೇ ಬಾರಿಗೆ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಮೂರನೇ ಶ್ರೇಯಾಂಕದ ನಡಾಲ್ 19 ವರ್ಷದ ಸಿನ್ನರ್ ಅವರನ್ನು 7-5, 6-3, 6-0 ಅಂಕಗಳಿಂದ ಸೋಲಿಸಿದರು.

'ಕಿಂಗ್​ ಆಫ್​ ಕ್ಲೇ ಕೋರ್ಟ್' ಖ್ಯಾತಿಯ ನಡಾಲ್​ ಮುಂದಿನ ಪಂದ್ಯದಲ್ಲಿ 10ನೇ ಶ್ರೇಯಾಂಕದ ಡಿಯಾಗೋ ಶ್ವಾರ್ಟ್ಜ್ಮನ್ ಅವರನ್ನು ಎದುರಿಸಲಿದ್ದಾರೆ. ರಾಫಾ 2005ರಲ್ಲಿನ ಚೊಚ್ಚಲ ಪಂದ್ಯದ ಬಳಿಕ ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ಕೇವಲ 2 ಪಂದ್ಯಗಳಲ್ಲಿ ಸೋತಿದ್ದು, 104 ಪಂದ್ಯಗಳನ್ನು ಜಯಿಸಿದ್ದಾರೆ. ಈ ಗೆಲುವಿನ ಮೂಲಕ ಪ್ಯಾರಿಸ್‌ನಲ್ಲಿ ಸತತ ಸೆಟ್‌ಗಳ ಗೆಲುವಿನ ಓಟವನ್ನು 35ಕ್ಕೆ ಏರಿಸಿಕೊಂಡಿದ್ದಾರೆ.

ವಿಶ್ವದ ಮೂರನೇ ಕ್ರಮಾಂಕದ ನಡಾಲ್ 13 ಫ್ರೆಂಚ್​ ಓಪನ್​ ಸೇರಿ ಒಟ್ಟೂ 20 ಗ್ರಾಂಡ್​ಸ್ಲಾಂ ಟೂರ್ನಿ ಜಯಿಸಿದ್ದಾರೆ.​ ಸೆಮಿಫೈನಲ್‌ನಲ್ಲಿ ರಾಫೆಲ್, ಅಗ್ರ ಕ್ರಮಾಂಕದ ಆಟಗಾರ, 18 ಗ್ರಾಂಡ್​ಸ್ಲಾಂ ಗೆದ್ದಿರುವ ಪ್ರಬಲ ಪ್ರತಿಸ್ಪರ್ಧಿ ನೊವಾಕ್ ಜೋಕೊವಿಕ್ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಫ್ರೆಂಚ್​ ಓಪನ್ 2021: ಜೋಕೊವಿಕ್ ಬೆವರಿಳಿಸಿ ರೋಚಕವಾಗಿ ಸೋತ 19ರ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.