ನವದೆಹಲಿ: ಜುಲೈ 23 ರಿಂದ ಟೋಕಿಯೋದಲ್ಲಿ ಆರಂಭವಾಗುವ ಪ್ರಾರಂಭವಾಗುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ತಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರ್ಜರಿ ಬಹುಮಾನ ಘೋಷಣೆ ಮಾಡಿದ್ದಾರೆ.
ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದವರಿಗೆ 6 ಕೋಟಿ ರೂ. ತಂಡದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದವರಿಗೆ 3 ಕೋಟಿ ರೂ. ಘೋಷಣೆ ಮಾಡಿದೆ. ಜೊತೆಗೆ ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೆ ಹೆಚ್ಚುವರಿಯಾಗಿ ಸರ್ಕಾರದಿಂದ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದೆ.
ಸೌರಭ್ ಚೌಧರಿ, ಮೈರಾಜ್ ಖಾನ್ ಮತ್ತು ಜಾವೆಲಿನ್ ಥ್ರೋ ತಾರೆಗಳಾದ ಶಿವಪಾಲ್ ಸಿಂಗ್ ಮತ್ತು ಅನು ರಾಣಿ ಅವರು ಉತ್ತರ ಪ್ರದೇಶದಿಂದ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಕ್ರೀಡಾಪಟುಗಳಾಗಿದ್ದಾರೆ.
ಇದಕ್ಕೂ ಮುನ್ನ ಹರಿಯಾಣ ಸರ್ಕಾರ ಚಿನ್ನ ಗೆದ್ದವರಿಗೆ 6 ಕೋಟಿ, ಬೆಳ್ಳಿ ಗೆದ್ದವರಿಗೆ 4 ಕೋಟಿ ಮತ್ತು ಕಂಚು ಗೆದ್ದವರಿಗೆ 2.5 ಕೋಟಿ ರೂ. ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ತಿಳಿಸಿದೆ. ದೆಹಲಿ, ಕೇರಳ, ತಮಿಳುನಾಡು ಹಾಗೂ ಜಾರ್ಖಂಡ್ ಸರ್ಕಾರಗಳು ಕೂಡ ಭಾರಿ ಮೊತ್ತವನ್ನು ಘೋಷಿಸಿವೆ.
ಇದನ್ನೂ ಓದಿ: ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದವರಿಗೆ ₹3 ಕೋಟಿ ನಗದು ಬಹುಮಾನ ಘೋಷಿಸಿದ ದೆಹಲಿ ಸರ್ಕಾರ