ETV Bharat / sports

ದೇಶದ ಮೊದಲ ಚಳಿಗಾಲದ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಚಾಲನೆ

author img

By

Published : Mar 7, 2020, 5:02 PM IST

ಈ ಕ್ರೀಡಾಕೂಟವನ್ನು ಜಮ್ಮುಕಾಶ್ಮೀರ​ ಕ್ರೀಡಾ ಮಂಡಳಿ ಕೇಂದ್ರ ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಆಯೋಜನೆ ಮಾಡಿದೆ. 5 ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ 20 ರಾಜ್ಯಗಳಿಂದ 10 ಬಗೆಯ ಕ್ರೀಡೆಗಳಲ್ಲಿ ಭಾಗವಹಿಸಲು ಸುಮಾರು 900 ಅಥ್ಲಿಟ್​ಗಳು ಜಮ್ಮುಕಾಶ್ಮೀರಕ್ಕೆ ಆಗಮಿಸಿದ್ದಾರೆ.

Khelo India Winter Game
ಖೇಲೋ ಇಂಡಿಯಾ ವಿಂಟರ್​ ಗೇಮ್ಸ್​

ಗುಲ್ಮಾರ್ಗ್​(ಜ-ಕಾ): ಭಾರತದ ಕ್ರೀಡಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟಕ್ಕೆ (ವಿಂಟರ್​ ಗೇಮ್ಸ್​) ಕೇಂದ್ರ ಕ್ರೀಡಾ ಸಚಿವಾ ಕಿರಣ್​ ರಿಜಿಜು ಜಮ್ಮುಕಾಶ್ಮೀರದಲ್ಲಿ ಚಾಲನೆ ನೀಡಿದ್ದಾರೆ.

Khelo India Winter Game
ಖೇಲೋ ಇಂಡಿಯಾ ವಿಂಟರ್​ ಗೇಮ್ಸ್​

ಕ್ರೀಡಾ ಸಚಿವಾ ಕಿರಣ್​ ರಿಜಿಜು ಗುಲ್ಮಾರ್ಗ್​ನಲ್ಲಿ ಈ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿದ್ದಾರೆ. ಜೊತೆಗೆ ಗಡೂರ ದೈಹಿಕ ಶಿಕ್ಷಣ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಏಕೀಕರಣ ಶಿಬಿರದಲ್ಲಿ ಯುವಕರೊಂದಿಗೆ ಅವರು ಸಂವಾದ ನಡೆಸಿದ್ದಾರೆ. ನಂತರ ಗಂದರ್ಬಲ್ ಮತ್ತು ಶ್ರೀನಗರ ಜಿಲ್ಲೆಯ ವಿವಿಧ ಕ್ರೀಡಾಕ್ಲಬ್​ಗಳ 250 ಯುವ ಕ್ರೀಡಾಪಟುಗಳಿಗೆ ಸ್ಫೋರ್ಟ್ಸ್​ ಕಿಟ್ ವಿತರಿಸಲಾಯಿತು.

ಫೆಬ್ರವರಿ 25 2020ರಂದು ಲಡಾಕ್​ನಲ್ಲಿ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವಾ ಕಿರಣ್​ ರಿಜಿಜು ಖೇಲೋ ಇಂಡಿಯಾ ವಿಂಟರ್​ ಗೇಮ್ಸ್​ ಉದ್ಘಾಟನೆ ಮಾಡುವ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದರು. ನಂತರದ ಮೂರನೇ ವಾರದಲ್ಲಿ ಮೂರು ಚಳಿಗಾಲದ ಕ್ರೀಡೆಗಳಾದ ಐಸ್​ ಹಾಕಿ, ಫಿಗರ್​ ಸ್ಕೇಟಿಂಗ್ ಹಾಗೂ ಸ್ಪೀಡ್​ ಸ್ಕೇಟಿಂಗ್​ ಚಾಂಪಿಯನ್​ ಶಿಪ್​ ಆಯೋಜನೆ ಮಾಡಲಾಗಿತ್ತು.

Khelo India Winter Game
ಖೇಲೋ ಇಂಡಿಯಾ ವಿಂಟರ್​ ಗೇಮ್ಸ್​

ವಿಂಟರ್​ ಕ್ರೀಡಾಕೂಟದ ಉದ್ದೇಶ:

ಚಳಿಗಾಲದ ಕ್ರೀಡೆಗಳು ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ದೇಶದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರಿಂದ ಚಳಿಗಾಲದ ಆಟಗಳನ್ನು ಯುವಪೀಳಿಗೆಗೆ ಪರಿಚಯಿಸುವ ಮೂಲಕ ಜನಪ್ರಿಯಗೊಳಿಸಬಹುದು. ಜೊತೆಗೆ ಇಂತಹ ಕ್ರೀಡಾಕೂಟದಿಂದ ಭಾರತದಲ್ಲಿ ಅದ್ಭುತ ಆಟಗಾರರನ್ನು ಸೃಷ್ಠಿ ಮಾಡಬಹುದು. ಈ ಮೂಲಕ ವಿಶ್ವಮಟ್ಟದಲ್ಲಿ ಪ್ರತಿ ನಾಲ್ಕು ವರ್ಷಗಳಿಗೆ ನಡೆಯುವ ವಿಂಟರ್​ ಒಲಿಂಪಿಕ್ಸ್​ನಲ್ಲಿ ಪದಕಗಳನ್ನು ಗೆದ್ದು ಭಾರತ ಹೆಮ್ಮೆ ಪಡುವಂತೆ ಮಾಡುವುದೇ ಈ ಖೇಲೋ ಇಂಡಿಯಾ ವಿಂಟರ್​ ಗೇಮ್ಸ್ ಆಯೋಜನೆಯ ​ಉದ್ದೇಶ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.