ETV Bharat / sports

ಮುಂಬೈಗೆ ಆಘಾತ ನೀಡಿದ ಬೆಂಗಾಲ್​, ಯೋಧ ಮಣಿಸಿದ ಪಾಟ್ನಾ

author img

By

Published : Aug 10, 2019, 9:05 AM IST

ಬೆಂಗಾಲ್​ ವಾರಿಯರ್ಸ್​ ಬಲಿಷ್ಠ ಯು ಮುಂಬಾ ತಂಡವನ್ನು 32-30 ಅಂತರದಿಂದ ಮಣಿಸಿದರೆ, ಪಾಟ್ನಾ ಪೈರೇಟ್ಸ್​ 41-20 ರಿಂದ ಯುಪಿ ಯೋದ ತಂಡವನ್ನು ಸೋಲಿಸಿದೆ.

Patna Pirates

ಪಾಟ್ನಾ: ಬೆಂಗಾಲ್​ ವಾರಿಯರ್ಸ್​ ಬಲಿಷ್ಠ ಯು ಮುಂಬಾ ತಂಡವನ್ನು 32-30 ಅಂತರದಿಂದ ಮಣಿಸಿದರೆ, ಪಾಟ್ನಾ ಪೈರೇಟ್ಸ್​ 41-20 ರಿಂದ ಯುಪಿ ಯೋದ ತಂಡವನ್ನು ಸೋಲಿಸಿದೆ.

ಪಾಟ್ನಾದ ಪಾಟಲೀಪುತ್ರ ಸ್ಪೋರ್ಟ್ಸ್​ ಕಾಂಪ್ಲೆಕ್ಷ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್​ ಯು ಮುಂಬಾಗೆ ಶಾಕ್​ ನೀಡಿತು. ಮೊದಲಾರ್ಧದಲ್ಲಿ 11-16ರಲ್ಲಿ ಹಿನ್ನಡೆ ಅನುಭವಿಸಿದ್ದ ವಾರಿಯರ್ಸ್​ ದ್ವಿತೀಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಮುಂಬೈ ತಂಡವನ್ನು 31-30 ಅಂಕಗಳಿಂದ ಸೋಲುಣಿಸಿತು.

Bengal Warriors Beat U Mumba
ಯು ಮುಂಬಾ-ಬೆಂಗಾಲ್​ ವಾರಿಯರ್ಸ್​

ವಾರಿಯರ್ಸ್​ ಕೆ ಪ್ರಪಂಜನ್​ 6, ಮಣಿಂದರ್​ ಸಿಂಗ್​ 5, ಬಲ್ದೇವ್​ ಸಿಂಗ್​ 5, ಜೀವ ಕುಮಾರ್ 4, ನಬೀಬಕ್ಷ್​ 3, ರಾಕೇಶ್​ ನರ್ವಾಲ್​ 3 ಅಂಕ ಪಡೆದರು. ಮುಂಬೈ ಪರ ಅರ್ಜುನ್​ ದೇಶ್ವಲ್​ 10, ಸುರಿಂದರ್​ ಸಿಂಗ್​ 4, ಸಂದೀಪ್​ ನರ್ವಾಲ್​ 3 ಅಂಕ ಪಡೆದು ವಾರಿಯರ್ಸ್​ಗೆ ತೀವ್ರ ಪೈಪೋಟಿ ನೀಡಿದರು.

ಮತ್ತೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್​ ತಂಡ 41-20 ಅಂಕಗಳ ಬೃಹತ್​ ಅಂತರದಿಂದ ಯುಪಿ ಯೋಧ ತಂಡವನ್ನು ಸೋಲಿಸಿತು. ಪರ್​ದೀಪ್​ ನರ್ವಾಲ್​ 12 ಅಂಕಗಳಿಸಿ ಮತ್ತೊಂದು ಸೂಪರ್​ 10 ಸಂಪಾದಿಸಿದರು. ಡಿಫೆಂಡರ್​ ನೀರಜ್​ ಕುಮಾರ್​ 8 ಅಂಕ ಪಡೆದು ಯೋಧ ತಂಡವನ್ನು 3 ಬಾರಿ ಆಲೌಟ್​ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಜಾನ್​ ಕುಂಗ್​ ಲಿ 5, ವಿಕಾಶ್​ ಜಗ್ಲನ್​ 3 ಅಂಕ ಪಡೆದರು.

ಯುಪಿ ಪರ ಸುಮಿತ್​ 5, ಮೋನು ಗೋಯಟ್​ 4 ಸುರಿಂದರ್​ ಗಿಲ್​ 3, ಅಜಾದ್​ ಸಿಂಗ್​ 3 ಅಂಕ ಪಡೆದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.