ನವದೆಹಲಿ: ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ ಒಲಿಂಪಿಕ್ಸ್ ಬೌಂಡ್ ರೇಸ್ ವಾಕರ್ ಕೆಟಿ ಇರ್ಫಾನ್ ಸೇರಿದಂತೆ 5 ಟ್ರ್ಯಾಕ್ ಮತ್ತು ಫೀಲ್ಡ್ ಆಥ್ಲೀಟ್ಗಳಿಗೆ ಪಾಸಿಟಿವ್ ದೃಢಪಟ್ಟಿದೆ.
ಕಳೆದ ಶುಕ್ರವಾರ ಪರೀಕ್ಷೆ ನಡಸಲಾಗಿತ್ತೆಂದು ತಿಳಿದು ಬಂದಿದ್ದು, ಪಾಸಿಟಿವ್ ಬಂದವರನ್ನೆಲ್ಲಾ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಸಾಯ್ ಮೂಲದಿಂದ ತಿಳಿದು ಬಂದಿದೆ.
" ಶುಕ್ರವಾರ ನಡೆಸಿದ ಪರೀಕ್ಷೆಗಳಲ್ಲಿ ಕನಿಷ್ಠ ಐದು ಗಣ್ಯ ಕ್ರೀಡಾಪಟುಗಳಿಗೆ ಕೋವಿಡ್19ಗೆ ಪಾಸಿಟಿವ್ ದೃಢಪಟ್ಟಿದೆ. ಅವರನ್ನು ಇತರ ಆಥ್ಲೀಟ್ಗಳಿಂದ ಪ್ರತ್ಯೇಕವಾಗಿರಿಸಲಾಗಿದೆ" ಎಂದು ಎಸ್‌ಎಐ ಕೇಂದ್ರದ ಮೂಲ ಭಾರತೀಯ ಸುದ್ದಿ ಸಂಸ್ಥೆಗೆ ತಿಳಿಸಿದೆ.
ಪಾಸಿಟಿವ್ ಬಂದಿರುವ 5 ಆಥ್ಲೀಟ್ಗಳಲ್ಲದೇ ಮತ್ತೊಬ್ಬ ರೇಸ್ ವಾಕರ್ಗೂ ಪಾಸಿಟಿವ್ ಬಂದಿದೆ, ಆದರೆ, ಇನ್ನೂ ಖಚಿತವಾಗಿಲ್ಲ. ಒಟ್ಟು 4 ಪುರುಷರು ಮತ್ತು ಒಬ್ಬರು ಮಹಿಳಾ ಅಥ್ಲೀಟ್ ಕೋವಿಡ್ 19 ಪಾಸಿಟಿವ್ಗೆ ದೃಢಪಟ್ಟಿದ್ದಾರೆ. ಆ ಮಹಿಳಾ ಆಟಗಾರ್ತಿ ಮನೆಯಿಂದ ಬಂದಿದ್ದರೆಂದು ಸಾಯ್ ಮೂಲ ತಿಳಿಸಿದೆ.
ಏಪ್ರಿಲ್ 29ರಂದು ಎಲ್ಲಾ ಕ್ರೀಡಾಪಟುಗಳಿಗೂ ಕೋವಿಡ್ 19 ಲಸಿಕೆಯ ಮೊದಲ ಡೋಸ್ ಪಡೆದಿಕೊಂಡಿದ್ದಾರೆ. 6ನೇ ತಾರೀಕಿನಂದು ಕೋವಿಡ್ 19 ಟೆಸ್ಟ್ ಮಾಡಿಸಲಾಗಿತ್ತು, ಅದರ ಫಲಿತಾಂಶ 7ರಂದು ಬಂದಿತ್ತೆಂದು ತಿಳಿದು ಬಂದಿದೆ.
31 ವರ್ಷದ ಇರ್ಫಾನ್ ಜಪಾನ್‌ನ ನೋಮಿಯಲ್ಲಿ ನಡೆದ ಏಷ್ಯನ್ ರೇಸ್ ವಾಕಿಂಗ್ ಚಾಂಪಿಯನ್‌ಶಿಪ್‌ನ 20 ಕಿ.ಮೀ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ ನಂತರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಕೊಂಡಿದ್ದರು.
ಇದನ್ನು ಓದಿ: ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಗಿ ಮತ್ತೆ ರಮೇಶ್ ಪವಾರ್ ನೇಮಕ!