ETV Bharat / sports

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌: ಇಂದಿನಿಂದ ಅಖಾಡಕ್ಕಿಳಿಯಲಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ

author img

By ETV Bharat Karnataka Team

Published : Aug 25, 2023, 9:30 AM IST

World Athletics Championships: ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅಭಿಯಾನ ಇಂದಿನಿಂದ ಆರಂಭವಾಗಲಿದೆ.

Neeraj Chopra
ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ

ಬುಡಾಪೆಸ್ಟ್ (ಹಂಗೇರಿ) : ಬಹುನಿರೀಕ್ಷಿತ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಈಗಾಗಲೇ ಆರಂಭಗೊಂಡು 6 ದಿನ ಕಳೆದಿದೆ. ಭಾರತದ ಒಲಿಂಪಿಕ್ ಹಾಗೂ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ 2023 ರ ಪುರುಷರ ಜಾವೆಲಿನ್ ಥ್ರೋ ಈವೆಂಟ್‌ನ ಅರ್ಹತಾ ಸುತ್ತುಗಳಲ್ಲಿ ಸೆಣೆಸಾಡಲು ಶುಕ್ರವಾರದಿಂದ (ಇಂದಿನಿಂದ) ಮೈದಾನಕ್ಕೆ ಇಳಿಯಲಿದ್ದಾರೆ.

ನೀರಜ್ ಅವರು ಇಂದು ಮಧ್ಯಾಹ್ನ 1:40 ಕ್ಕೆ ನಿಗದಿಪಡಿಸಲಾದ ಗುಂಪು A ನ ಕ್ವಾಲಿಫೈಯರ್‌ನಲ್ಲಿ ಆಡಲಿದ್ದಾರೆ. ಈಗಾಗಲೇ ಒಲಿಂಪಿಕ್ಸ್, ಕಾಮನ್​ ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಚಾಂಪಿಯನ್ ಕೂಡ ಹೌದು. ಆದರೂ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ್ಕೆ ಮುತ್ತಿಕ್ಕಿಲ್ಲ. ಕಳೆದ ವರ್ಷ ಬೆಳ್ಳಿ ಪದಕಕ್ಕೆ ಕೊರಳೊಡಿದ್ದರು. ಈ ವೇಳೆ, ಅಂದು ಮಾತನಾಡಿದ್ದ ಚೋಪ್ರಾ "ನನ್ನ ಚಿನ್ನದ ಬೇಟೆ ಮುಂದುವರಿಯಲಿದೆ. ಪ್ರತಿ ಬಾರಿ ಚಿನ್ನ ಪಡೆಯಲು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತು. ಆದರೂ, ಸಾಧ್ಯತೆ ಮೀರಿ ಪ್ರಯತ್ನಿಸುತ್ತೇನೆ. ಇನ್ನೂ ಹೆಚ್ಚಿನ ತರಬೇತಿ ಪಡೆದು ಮುಂದಿನ ಬಾರಿ ಪದಕದ ಬಣ್ಣ ಬದಲಿಸಲು ಪ್ರಯತ್ನಿಸುತ್ತೇನೆ" ಎಂದಿದ್ದರು.

27 ಜಾವೆಲಿನ್ ಎಸೆತಗಾರರನ್ನು ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಲಾಗಿದೆ, ಭಾನುವಾರದಂದು ನಿಗದಿಯಾಗಿರುವ ಸಮಯಕ್ಕೆ 12 ಜನ ಫೈನಲ್‌ಗಾಗಿ ಅರ್ಹತಾ ಪಂದ್ಯಗಳನ್ನು ಆಡಲಿದ್ದಾರೆ. ಫೈನಲ್‌ಗೆ ಲಗ್ಗೆ ಇಡಲು ಸ್ವಯಂಚಾಲಿತ ಅರ್ಹತಾ ಅಂಕವು 83.00 ಮೀ. ಆಗಿದೆ. ಈ ವರ್ಷ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತರಾದ ಮನು ಅವರು ಸಹ ಎ ಗುಂಪಿನಲ್ಲಿದ್ದರೆ, ಜೆನಾ ಬಿ ಗುಂಪಿನಲ್ಲಿ ಕುಳಿತಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್, ಲಂಡನ್​ನ 2012 ರ ಒಲಿಂಪಿಕ್ ಚಾಂಪಿಯನ್ ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್, ಜರ್ಮನಿಯ ವಿಶ್ವದ ನಂ. 2 ಜೂಲಿಯನ್ ವೆಬರ್ ಅವರಂತಹ ಘಟಾನುಘಟಿಗಳ ಮಧ್ಯೆ ಭಾರತದ ಮೂವರು ಜಾವೆಲಿನ್ ಥ್ರೋ ಆಟಗಾರರು ಸ್ಪರ್ಧೆಗಳಿಸಿದ್ದಾರೆ.

ಇದನ್ನೂ ಓದಿ : ' ಸಾಧನೆಗೆ ತೃಪ್ತಿ ಇದೆ, ಮುಂದಿನ ಬಾರಿ ಪದಕದ ಬಣ್ಣ ಬದಲಿಸಲು ಪ್ರಯತ್ನಿಸುವೆ '

1983 ರಿಂದ ವಿಶ್ವ ಅಥ್ಲೆಟಿಕ್ಸ್‌ ಕೂಟ ಪ್ರಾರಂಭವಾಗಿದ್ದು, ಈವರೆಗೆ ಭಾರತ 2 ಪದಕಗಳನ್ನು ಗೆದ್ದಿದೆ. 2003ರ ಪ್ಯಾರಿಸ್‌ ವಿಶ್ವ ಕೂಟದ ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಅಂಜು ಬಾಬಿ ಜಾರ್ಜ್‌ ಮೊದಲ ಪದಕ ಪಡೆದಿದ್ದರು. ಆನಂತರ, ಕಳೆದ ವರ್ಷ ಅಮೆರಿಕದಲ್ಲಿ ನಡೆದಿದ್ದ ಕೂಟದಲ್ಲಿ ಪುರುಷರ ಜಾವೆಲಿನ್‌ ಎಸೆತದಲ್ಲಿ ನೀರಜ್‌ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಅಮೆರಿಕದ ಅಥ್ಲೀಟ್‌ಗಳೇ ವಿಶ್ವ ಕೂಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಹೆಚ್ಚು ಪದಕ ಬಾಚಿಕೊಂಡಿದ್ದಾರೆ. (ಎಎನ್​ಐ)

ಇದನ್ನೂ ಓದಿ : ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್​ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಪರಮ್‌ಜೀತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.