ETV Bharat / sports

ಸುಳ್ಳು ದಾಖಲೆ ಸಲ್ಲಿಕೆ, ಪರ್ವತಾರೋಹಿ ನರೇಂದರ್​ ಸಿಂಗ್​ಗೆ ಟೆನ್ಜಿಂಗ್ ನಾರ್ಗೆ ಪ್ರಶಸ್ತಿಯಿಲ್ಲ: ಕ್ರೀಡಾ ಸಚಿವಾಲಯ

ನರೇಂದರ್​ ಮೌಂಟ್​ ಎವರೆಸ್ಟ್​ ಏರಿಲ್ಲ, ಅವರು ಸುಳ್ಳು ಫೋಟೋಗಳನ್ನು ಸಲ್ಲಿಸಿರುವುದು ರುಜುವಾತಾಗಿದೆ. ಹಾಗಾಗಿ ಅವರಿಗೆ ಟೆನ್ಜಿಂಗ್ ನಾರ್ಗೆ ಪ್ರಶಸ್ತಿ ನೀಡಲಾಗುವುದಿಲ್ಲ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.

ಪರ್ವತಾರೋಹಿ ನರೇಂದರ್​ ಸಿಂಗ್
ಪರ್ವತಾರೋಹಿ ನರೇಂದರ್​ ಸಿಂಗ್
author img

By

Published : Feb 11, 2021, 5:36 PM IST

ನವದೆಹಲಿ: ವಿಶ್ವಪ್ರಸಿದ್ದ ಮೌಂಟ್​ ಎವರೆಸ್ಟ್ ಶಿಖರವನ್ನು ಏರಿದ್ದೇನೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಸ ಕ್ರೀಡೆ ಪ್ರಶಸ್ತಿಯಾದ 'ಟೆನ್ಜಿಂಗ್ ನಾರ್ಗೆ' ಪ್ರಶಸ್ತಿಗೆ ಶಿಫಾರಸುಗೊಂಡಿದ್ದ ಪರ್ವತಾರೋಹಿ ನರೇಂದರ್​ ಸಿಂಗ್ ಯಾದವ್​ ಸುಳ್ಳು ದಾಖಲೆ ಸೃಷ್ಟಿಸಿ ಪ್ರಶಸ್ತಿಗೆ ಪ್ರಯತ್ನಿಸಿದ್ದಾರೆ ಎಂದು ಕ್ರೀಡಾ ಸಚಿವಾಲಯ ಖಚಿತಪಡಿಸಿದೆ.

ನರೇಂದರ್​ ಮೌಂಟ್​ ಎವರೆಸ್ಟ್​ ಏರಿಲ್ಲ, ಅವರು ಸುಳ್ಳು ಫೋಟೋಗಳನ್ನು ಸಲ್ಲಿಸಿರುವುದು ರುಜುವಾತಾಗಿದೆ. ಹಾಗಾಗಿ ಅವರಿಗೆ ಟೆನ್ಜಿಂಗ್ ನಾರ್ಗೆ ಪ್ರಶಸ್ತಿ ನೀಡಲಾಗುವುದಿಲ್ಲ ಎಂದು ಕ್ರೀಡಾ ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.

ಯಾದವ್ ಮತ್ತು ಅವರ ಸಹ ಪರ್ವತಾರೋಹಿ ಸೀಮಾ ರಾಣಿ ಅವರನ್ನು ನೇಪಾಳ ಸರ್ಕಾರ ಹಿಮಾಲಯನ್ ದೇಶದಲ್ಲಿ ಆರು ವರ್ಷಗಳ ಕಾಲ ಪರ್ವತಾರೋಹಣ ಮಾಡುವುದನ್ನು ನಿಷೇಧಿಸಿದೆ. ಜೊತೆಗೆ 2016ರಲ್ಲಿ ವಿಶ್ವದ ಅತ್ಯುನ್ನತ ಮೌಂಟ್ ಎವರೆಸ್ಟ್​ ಏರಿದ ಬಗ್ಗೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಪ್ರಮಾಣಪತ್ರಗಳನ್ನು ರದ್ದುಪಡಿಸಿದೆ.

" ನಮ್ಮ ನರೇಂದರ್ ಸಿಂಗ್ ಯಾದವ್ ವಿಚಾರ ನಮ್ಮ ಕಡೆಯಿಂದ ಮುಗಿದ ಅಧ್ಯಾಯ. ಯಾದವ್ ವಿರುದ್ಧ ಸಚಿವಾಲಯ ಆರಂಭಿಸಿದ್ದ ತನಿಖೆಯಲ್ಲಿ ಅವರು ಎವರೆಸ್ಟ್ ಶಿಖರ ಏರಿರುವ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿದೆ. ಅಲ್ಲದೆ ಅವರು ನಕಲಿ ಚಿತ್ರಗಳನ್ನು ಸಲ್ಲಿಸಿದ್ದಾರೆ " ಎಂದು ಕ್ರೀಡಾ ಸಚಿವಾಲಯದ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಹಾಗಾಗಿ ನರೇಂದರ್ ಯಾದವ್ ಅವರ ಹೆಸರನ್ನು 2020ರ ಟೆನ್ಜಿಂಗ್ ನಾರ್ಗೆ ಪ್ರಶಸ್ತಿ ಪಟ್ಟಿಯಿಂದ ಹಿಂತೆಗೆದುಕೊಳ್ಳಲಾಗಿದೆ ಮತ್ತು ಅವರಿಗೆ ಪ್ರಶಸ್ತಿ ನೀಡುವುದಿಲ್ಲ ಸಚಿವಾಲಯ ತಿಳಿಸಿದೆ.

ಸಾಹಸ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಕೇಂದ್ರ ಕ್ರೀಡಾ ಸಚಿವಾಲಯದಿಂದ ಪ್ರಶಸ್ತಿ ಮತ್ತು 5 ಲಕ್ಷ ರೂಪಾಯಿಗಳನ್ನು ಕೊಡಲಿದೆ.

ಇದನ್ನು ಓದಿ:ಕೊಹ್ಲಿ ಭಾರತಕ್ಕೆ ಹೊರಟ ನಂತರ ಪ್ಯಾಟ್​ ಕಮ್ಮಿನ್ಸ್ ಟಾರ್ಗೆಟ್​ ಈ ಬ್ಯಾಟ್ಸ್​ಮನ್​ ಆಗಿದ್ರಂತೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.