ETV Bharat / sports

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್ : ದುಬೈ ಸೇರಿದ ಭಾರತೀಯ ಬಾಕ್ಸರ್​ಗಳು - ವಿಮಾನ್ ತುರ್ತು ಲ್ಯಾಂಡಿಂಗ್

ಭಾರತದಲ್ಲಿ ಕೋವಿಡ್​-19 ಏರಿಕೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಯುಎಇ ಭಾರತದಿಂದ ವಿಮಾನಗಳನ್ನು ನಿಷೇಧಿಸಿರುವುದರಿಂದ ಬಾಕ್ಸರ್​ಗಳಿಗೆ ಅನುಮೋದನೆ ಅಗತ್ಯವಾಗಿತ್ತು. ಈ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದರಿಂದ ವಿಮಾನ ಲ್ಯಾಂಡ್ ಆಗಲು ಕಾರಣವಾಗಿದೆ..

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್​ಶಿಪ್
author img

By

Published : May 22, 2021, 7:52 PM IST

ನವದೆಹಲಿ : 6 ಬಾರಿಯ ವಿಶ್ವ ಚಾಂಪಿಯನ್​ ಮೇರಿ ಕೋಮ್ ಹಾಗೂ ಅಮಿತ್‌ ಪಂಗಲ್ ಸೇರಿದಂತೆ 30 ಭಾರತದ ಬಾಕ್ಸರ್​ಗಳನ್ನೊಳಗೊಂಡ ತಂಡ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಶನಿವಾರ ದುಬೈಗೆ ತೆರಳಿದೆ.

ಏರ್ ​ಬಬಲ್​ ವಿಮಾನದ ಮೂಲಕ ದುಬೈಗೆ ಪ್ರಯಾಣಿಸಿದ್ದ ವಿಮಾನ ಕೆಲವು ಆಡಳಿತಾತ್ಮಕ ದಾಖಲೆಗಳ ಸಮಸ್ಯೆಯಿಂದಾಗಿ ಬಾಕ್ಸರ್‌ಗಳಿದ್ದ ವಿಮಾನವು ನಿಲ್ದಾಣದಲ್ಲಿ ಲ್ಯಾಂಡ್ ಆಗಲು ತಡವಾಗಿದೆ. ಹಾಗಾಗಿ, ನಿಗದಿಗಿಂತ ಹೆಚ್ಚು ಅಮಯ ಆಗಸದಲ್ಲಿ ಹಾರಾಡಿದೆ ಎಂದು ತಿಳಿದು ಬಂದಿದೆ.

ಭಾನುವಾರ ಟೂರ್ನಮೆಂಟ್​ನ ಡ್ರಾ ಬಿಡುಗಡೆಯಾಗಲಿದ್ದು, ಸೋಮವಾರದಿಂದ ಟೂರ್ನಿ ಆರಂಭವಾಗಬೇಕಿದೆ. ಇದು ಜುಲೈನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್​ಗೂ ಮುನ್ನ ಆಯೋಜನೆಯಾಗಿರುವ ಪ್ರಮುಖ ಬಾಕ್ಸಿಂಗ್ ಟೂರ್ನಿಯಾಗಿದೆ.

ಎರಡು ಗಂಟೆ ಹೆಚ್ಚು ಆಗಸದಲ್ಲಿ ಹಾರಾಡಿದ ವಿಮಾನ : ದುಬೈಗೆ ತಂಡದ ಆಗಮನವನ್ನು ಅನುಮೋದಿಸಿದ ದಾಖಲಾತಿಗಳ ತೆರವುಗೊಳಿಸಲು ವಿಳಂಬವಾದ ಕಾರಣ ವಿಮಾನ ಎರಡು ಗಂಟೆಗಳ ಕಾಲ ಆಗಸದಲ್ಲೇ ಎರಡು ಗಂಟೆ ಹಾರಾಡಿ ನಂತರ ಇಂಧನ ಸಮಸ್ಯೆಯ ಕಾರಣ ನೀಡಿ ತುರ್ತು ಲ್ಯಾಂಡಿಂಗ್ ಮಾಡಿದೆ.

"ಪ್ರವಾಸಕ್ಕೆ ಅನುಮೋದಿಸಿದ್ದ ಪತ್ರದಲ್ಲಿ ಸ್ವಲ್ಪ ಗೊಂದಲ ಉಂಟಾಗಿತ್ತು. ಆದರೆ,ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗ ಪರಿಹರಿಸಲ್ಪಟ್ಟಿತು. ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ.

ವಿಮಾನ ಲ್ಯಾಂಡ್‌ ಆಗಲು ಸ್ವಲ್ಪ ಸಮಯ ತೆಗೆದುಕೊಂಡರೂ ಬಾಕ್ಸರ್‌ಗಳು ಅವರಿಗೆ ನಿಗದಿಯಾಗಿರುವ ಹೋಟೆಲ್ ತಲುಪಿದ್ದಾರೆ" ಎಂದು ತಂಡದ ಮೂಲಗಳು ಪಿಟಿಐಗೆ ಮಾಹಿತಿ ನೀಡಿದೆ.

ಭಾರತದಲ್ಲಿ ಕೋವಿಡ್​-19 ಏರಿಕೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಯುಎಇ ಭಾರತದಿಂದ ವಿಮಾನಗಳನ್ನು ನಿಷೇಧಿಸಿರುವುದರಿಂದ ಬಾಕ್ಸರ್​ಗಳಿಗೆ ಅನುಮೋದನೆ ಅಗತ್ಯವಾಗಿತ್ತು. ಈ ವಿಚಾರದಲ್ಲಿ ಸ್ವಲ್ಪ ಗೊಂದಲ ಉಂಟಾಗಿದ್ದರಿಂದ ವಿಮಾನ ಲ್ಯಾಂಡ್ ಆಗಲು ಕಾರಣವಾಗಿದೆ.

ಇದನ್ನು ಓದಿ:ಕೋವಿಡ್​ ವರದಿ ನೆಗೆಟಿವ್, ಫಿಫಾ ವಿಶ್ವಕಪ್ಪ್​ ಅರ್ಹತಾ ಪಂದ್ಯಕ್ಕಾಗಿ ತರಬೇತಿ ಆರಂಭಿಸಿದ 'ಬ್ಲೂ ಟೈಗರ್ಸ್​'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.