ರಾಂಚಿ(ಜಾರ್ಖಂಡ್): ಭಾರತ ಮಹಿಳಾ ಹಾಕಿ ತಂಡ ಭಾನುವಾರ ಜಪಾನ್ ತಂಡವನ್ನು 4-0 ಗೋಲುಗಳಿಂದ ಸೋಲಿಸುವ ಮೂಲಕ ಎರಡನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಜಯಿಸಿತು. ಸಂಗೀತಾ ಕುಮಾರಿ (17ನೇ ನಿಮಿಷ), ನೇಹಾ (46ನೇ ನಿಮಿಷ), ಲಾರೆಮ್ಸಿಯಾಮಿ (57ನೇ ನಿಮಿಷ) ಮತ್ತು ವಂದನಾ ಕಟಾರಿಯಾ (60ನೇ ನಿಮಿಷ) ಅವರ ಗೋಲುಗಳ ನೆರವಿನಿಂದ ತಂಡವು ಪ್ರತಿಷ್ಟಿತ ಟ್ರೋಫಿ ಎತ್ತಿ ಹಿಡಿಯಿತು.
-
Jharkhand Women's Asian Champions Trophy Ranchi 2023 | India wins the title, beats defending champion Japan by 4-0.
— ANI (@ANI) November 5, 2023 " class="align-text-top noRightClick twitterSection" data="
(Video Source: Hockey India/Twitter) pic.twitter.com/34ShmQPJtn
">Jharkhand Women's Asian Champions Trophy Ranchi 2023 | India wins the title, beats defending champion Japan by 4-0.
— ANI (@ANI) November 5, 2023
(Video Source: Hockey India/Twitter) pic.twitter.com/34ShmQPJtnJharkhand Women's Asian Champions Trophy Ranchi 2023 | India wins the title, beats defending champion Japan by 4-0.
— ANI (@ANI) November 5, 2023
(Video Source: Hockey India/Twitter) pic.twitter.com/34ShmQPJtn
ಫ್ಲಡ್ ಲೈಟ್ ಸಮಸ್ಯೆಯಿಂದ ಪಂದ್ಯ 50 ನಿಮಿಷಗಳ ಕಾಲ ತಡವಾಗಿ ಆರಂಭವಾಯಿತು. ರಾಂಚಿಯ ಮರಂಗ್ ಗೊಮ್ಕೆ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಈ ಪಂದ್ಯದುದ್ದಕ್ಕೂ ಭಾರತ ಅಮೋಘ ಫಾರ್ಮ್ ಪ್ರದರ್ಶಿಸಿತು.
17ನೇ ನಿಮಿಷದಲ್ಲಿ ಸಂಗೀತಾ ಅದ್ಭುತ ಗೋಲು ಗಳಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು. ಒಂದು ಗೋಲಿನಿಂದ ಹಿಂದೆ ಬಿದ್ದ ಜಪಾನ್ ತನ್ನ ದಾಳಿಯನ್ನು ತೀವ್ರಗೊಳಿಸಿ 22ನೇ ನಿಮಿಷದಲ್ಲಿ ಗೋಲು ದಾಖಲಿಸಿತು. ಆದರೆ ಭಾರತೀಯ ನಾಯಕಿ ವಿಡಿಯೋ ರೆಫರಲ್ ತೆಗೆದುಕೊಂಡರು. ಆಗ ಗೋಲ್ ಫೌಲ್ ಎಂದು ಘೋಷಿಸಲಾಯಿತು. ನೇಹಾ 46ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಎರಡನೇ ಗೋಲು ತಂದಿಟ್ಟರು. 52ನೇ ನಿಮಿಷದಲ್ಲಿ ಜಪಾನ್‌ಗೆ ಗೋಲು ಗಳಿಸುವ ಅವಕಾಶ ಸಿಕ್ಕಿತು. ಭಾರತದ ಆಟಗಾರರು ಜಪಾನ್ ಆಟಗಾರ್ತಿಯನ್ನು ತಪ್ಪಾಗಿ ತಡೆದಿದ್ದಕ್ಕಾಗಿ ಜಪಾನ್‌ಗೆ ಪೆನಾಲ್ಟಿ ಸಿಕ್ಕಿತು. ಆದರೆ ಭಾರತದ ಗೋಲ್‌ಕೀಪರ್ ಸವಿತಾ ಪುನಿಯಾ ಅವರು ಜಪಾನ್ ಗೋಲು ಗಳಿಸದಂತೆ ತಡೆದರು.
-
It's GOLD for #WomenInBlue 🙌🥇🇮🇳#HockeyIndia #IndiaKaGame #JWACT2023 pic.twitter.com/TyHgoHigaC
— Hockey India (@TheHockeyIndia) November 5, 2023 " class="align-text-top noRightClick twitterSection" data="
">It's GOLD for #WomenInBlue 🙌🥇🇮🇳#HockeyIndia #IndiaKaGame #JWACT2023 pic.twitter.com/TyHgoHigaC
— Hockey India (@TheHockeyIndia) November 5, 2023It's GOLD for #WomenInBlue 🙌🥇🇮🇳#HockeyIndia #IndiaKaGame #JWACT2023 pic.twitter.com/TyHgoHigaC
— Hockey India (@TheHockeyIndia) November 5, 2023
ದೀಪ್ ಗ್ರೇಸ್ ಎಕ್ಕಾ ಪಂದ್ಯಶ್ರೇಷ್ಠ: 57ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಮೂಲಕ ಮೂರನೇ ಗೋಲು ದಾಖಲಿಸಿತು. 60ನೇ ನಿಮಿಷದಲ್ಲಿ ವಂದನಾ ಕಟಾರಿಯಾ ಫೀಲ್ಡ್ ಗೋಲು ಬಾರಿಸಿ ತಂಡಕ್ಕೆ 4-0 ಅಂತರದ ಜಯ ತಂದುಕೊಟ್ಟರು. ಭಾರತದ ದೀಪ್ ಗ್ರೇಸ್ ಎಕ್ಕಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾದರೆ, ಜಾರ್ಖಂಡ್‌ನ ಸಂಗೀತಾ ಕುಮಾರಿ ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ಮುತ್ತಿಕ್ಕಿದರು.
ಮತ್ತೊಂದೆಡೆ, ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದ ಚೀನಾದ ಮಹಿಳಾ ಹಾಕಿ ತಂಡ ಏಷ್ಯನ್ ಮಹಿಳಾ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕ ತನ್ನದಾಗಿಸಿತು. ತೀವ್ರ ಪೈಪೋಟಿಯಲ್ಲಿ ಕೊರಿಯಾವನ್ನು 2-1 ಗೋಲುಗಳಿಂದ ಮಣಿಸಿದ ಚೀನಾ, ತೃತೀಯ ಸ್ಥಾನಿಯಾಯಿತು.
ಇದನ್ನೂ ಓದಿ: "ಸ್ಪೂರ್ತಿ ಪಡೆದವರಿಂದಲೇ ಹೊಗಳಿಕೆ ಸಿಗುತ್ತಿರುವುದು ಸಂತಸದ ವಿಷಯ" - ವಿರಾಟ್ ಕೊಹ್ಲಿ