ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಪುರುಷರ ಹಾಕಿ ತಂಡ ಹಾಗೂ ಗಮನಾರ್ಹ ಪ್ರದರ್ಶನ ನೀಡಿರುವ ಮಹಿಳಾ ತಂಡ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾಗಿಯಾಗದಿರಲು ನಿರ್ಧರಿಸಿದೆ. ಇಂಗ್ಲೆಂಡ್ನಲ್ಲಿನ ಕೋವಿಡ್ ಹೆಚ್ಚುವಿಕೆ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾಗಿಯಾಗುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ.
-
Hockey India withdraws from 2022 Commonwealth Games due to be held in England over COVID concern pic.twitter.com/k9bAuEKylo
— ANI (@ANI) October 5, 2021 " class="align-text-top noRightClick twitterSection" data="
">Hockey India withdraws from 2022 Commonwealth Games due to be held in England over COVID concern pic.twitter.com/k9bAuEKylo
— ANI (@ANI) October 5, 2021Hockey India withdraws from 2022 Commonwealth Games due to be held in England over COVID concern pic.twitter.com/k9bAuEKylo
— ANI (@ANI) October 5, 2021
ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಹಾಕಿ ಮಾಹಿತಿ ಹಂಚಿಕೊಂಡಿದ್ದು, ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ನಡುವೆ ಕೇವಲ 32 ದಿನಗಳ ಅಂತರ ಇರುವ ಕಾರಣ ಈ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ.
ಕಾಮನ್ವೆಲ್ತ್ ಬರ್ಮಿಂಗ್ಹ್ಯಾಮ್ನಲ್ಲಿ 2022ರ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯಲಿದ್ದು, ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 10ರಿಂದ 25ರವರೆಗೆ ಆಯೋಜನೆಗೊಂಡಿವೆ. ಕೊರೊನಾ ಸಂದರ್ಭದಲ್ಲಿ ಭಾರತ ತಂಡ ಯುಕೆಗೆ ಕಳುಹಿಸಲು ಭಾರತ ಹಿಂದೇಟು ಹಾಕಿರುವ ಕಾರಣ, ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಭಾಗಿಯಾಗಿ ಮುಂದಿನ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದುಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ.
ಈ ನಿರ್ಧಾರವನ್ನ ಭಾರತದ ಹಾಕಿ ಅಧ್ಯಕ್ಷ ಜ್ಞಾನೇಂದ್ರ ಈಗಾಗಲೇ ಇಂಡಿಯನ್ ಒಲಿಂಪಿಕ್ಸ್ ಅಸೋಷಿಯೇಷನ್ಗೆ ತಿಳಿಸಿದ್ದು, ಪತ್ರ ಸಹ ಬರೆದಿದೆ.