ಬೆಂಗಳೂರು: ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯು ಅಂತಿಮ ಹಂತದತ್ತ ತಲುಪಿದೆ. ಇಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವು ಯು.ಪಿ.ಯೋಧಾ ವಿರುದ್ಧ ಹಾಗೂ ಮತ್ತೊಂದು ಸೆಮೀಸ್‌ನಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ತಂಡಗಳು ಕಾದಾಡಲಿವೆ.
ಸೋಮವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟಿರುವ ಪವನ್ ಕುಮಾರ್ ಶೆರಾವತ್ ಸಾರಥ್ಯದ ಬುಲ್ಸ್, ಮೂರನೇ ಸಲ ಅಂತಿಮ ಹಂತಕ್ಕೆ ತಲುಪುವ ಗುರಿ ಹೊಂದಿದೆ. 2015ರ 2ನೇ ಸೀಸನ್ನಲ್ಲಿ ಮೊದಲ ಬಾರಿಗೆ ಫೈನಲ್ ತಲುಪಿದ್ದ ಬುಲ್ಸ್ ಯು ಮುಂಬಾ ವಿರುದ್ಧ ಸೋಲುಂಡಿತ್ತು. ಬಳಿಕ 2018ರ 6ನೇ ಆವೃತ್ತಿಯಲ್ಲಿ ಗುಜರಾತ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿತ್ತು.
-
4️⃣ Semi-finalists
— ProKabaddi (@ProKabaddi) February 21, 2022 " class="align-text-top noRightClick twitterSection" data="
1️⃣ #VIVOProKabaddi 🏆
♾️ Entertainment 🤩
Who are you backing? 🥳 #SuperhitPanga @UpYoddha @PatnaPirates @DabangDelhiKC @BengaluruBulls pic.twitter.com/zLDlOfVqL8
">4️⃣ Semi-finalists
— ProKabaddi (@ProKabaddi) February 21, 2022
1️⃣ #VIVOProKabaddi 🏆
♾️ Entertainment 🤩
Who are you backing? 🥳 #SuperhitPanga @UpYoddha @PatnaPirates @DabangDelhiKC @BengaluruBulls pic.twitter.com/zLDlOfVqL84️⃣ Semi-finalists
— ProKabaddi (@ProKabaddi) February 21, 2022
1️⃣ #VIVOProKabaddi 🏆
♾️ Entertainment 🤩
Who are you backing? 🥳 #SuperhitPanga @UpYoddha @PatnaPirates @DabangDelhiKC @BengaluruBulls pic.twitter.com/zLDlOfVqL8
ಸದ್ಯ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಬುಲ್ಸ್ ತಂಡಕ್ಕೆ ದಬಾಂಗ್ ಡೆಲ್ಲಿ ಎದುರಾಳಿಯಾಗಿದೆ. ಇದಕ್ಕೂ ಮುನ್ನ ರೌಂಡ್ ರಾಬಿನ್ ಹಂತದ ಎರಡು ಕಾದಾಟದಲ್ಲಿ ಬುಲ್ಸ್ ಮೊದಲ ಪಂದ್ಯದಲ್ಲಿ ವಿರುದ್ಧ 61-22ರಿಂದ ಭರ್ಜರಿ ಗೆಲುವು ಸಾಧಿಸಿದ್ದರೆ, ಎರಡನೇ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು.
ಇದನ್ನೂ ಓದಿ: U19 ವಿಶ್ವಕಪ್ ವೇಳೆ ಭಾರತದ ಯುವಕರು ಎದುರಿಸಿದ ಕಷ್ಟಗಳನ್ನು ಬಿಚ್ಚಿಟ್ಟ ಟೀಮ್ ಮ್ಯಾನೇಜರ್
ಈ ಆವೃತ್ತಿಯ 23 ಪಂದ್ಯಗಳಲ್ಲಿ 286 ರೈಡ್ ಅಂಕ ಸಂಪಾದಿಸಿರುವ ನಾಯಕ ಪವನ್, ಬುಲ್ಸ್ ತಂಡದ ಆಧಾರಸ್ತಂಭವಾಗಿದ್ದಾರೆ. ಇನ್ನುಳಿದಂತೆ ಭರತ್ ಹಾಗೂ ಚಂದ್ರನ್ ರಂಜಿತ್ ಪವನ್ಗೆ ಸಾಥ್ ನೀಡಿದ್ದಾರೆ.
ರೌಂಡ್ ರಾಬಿನ್ ಹಂತದಲ್ಲಿ 2ನೇ ಸ್ಥಾನಕ್ಕೇರಿದ್ದ ಡೆಲ್ಲಿ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಸ್ಟಾರ್ ರೈಡರ್ ನವೀನ್ ಕುಮಾರ್ ಅವರನ್ನು ಕಟ್ಟಿಹಾಕುವ ಸವಾಲು ಬುಲ್ಸ್ ಎದುರಿಗಿದೆ.
4ನೇ ಪ್ರಶಸ್ತಿಯತ್ತ ಪಾಟ್ನಾ: 2016ರ ನಂತರ ಹ್ಯಾಟ್ರಿಕ್ ಚಾಂಪಿಯನ್ ಆಗಿದ್ದ ಪಾಟ್ನಾ ಪೈರೇಟ್ಸ್ ಈ ಬಾರಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ತಲುಪಿದೆ. ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಕನ್ನಡಿಗ ಪ್ರಶಾಂತ್ ಕುಮಾರ್ ನೇತೃತ್ವದ ತಂಡವು ಇಂದು ಮೊದಲ ಸೆಮೀಸ್‌ನಲ್ಲಿ ಯು.ಪಿ.ಯೋಧಾ ವಿರುದ್ಧ ಕಣಕ್ಕಿಳಿಯಲಿದೆ. ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ ಸೇರಿ ಪ್ರಮುಖ ಆಟಗಾರರಿರುವ ಯೋಧಾ ಟೀಂ ಚೊಚ್ಚಲ ಫೈನಲ್ ಮೇಲೆ ಕಣ್ಣಿಟ್ಟಿದೆ.
ಪಂದ್ಯಗಳು:
ಸ್ಥಳ: ಬೆಂಗಳೂರು
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್
ಸಂಜೆ 7.30ಕ್ಕೆ ಮೊದಲ ಸೆಮಿಫೈನಲ್ - ಪಾಟ್ನಾ ಪೈರೇಟ್ಸ್ Vs ಯು.ಪಿ.ಯೋಧಾ
ಸಂಜೆ 8.30ಕ್ಕೆ ಎರಡನೇ ಸೆಮಿಫೈನಲ್ - ಬೆಂಗಳೂರು ಬುಲ್ಸ್ Vs ದಬಾಂಗ್ ಡೆಲ್ಲಿ