ನವದೆಹಲಿ: ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ (ಎಎಫ್‌ಐ) ಆನ್‌ಲೈನ್ ಪೋರ್ಟಲ್ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಇದರೊಂದಿಗೆ, ವಿಶ್ವ ಬಿಲ್ಲುಗಾರಿಕೆ ನಿಷೇಧವನ್ನು ತೆಗೆದುಹಾಕುವ ಷರತ್ತನ್ನು ಎಎಐ ಪೂರೈಸಿದೆ.
"ಈ ಪೋರ್ಟಲ್ ಮೂಲಕ, ಬಿಲ್ಲುಗಾರರು, ತರಬೇತುದಾರರು, ವಿಶ್ವ ಬಿಲ್ಲುಗಾರಿಕೆ ಅಥವಾ ಎಎಐ-ಮಾನ್ಯತೆ ಪಡೆದ ಚಾಂಪಿಯನ್‌ಶಿಪ್‌ಗಳು, ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಬಯಸುವ ಅಧಿಕಾರಿಗಳು ಇನ್ಮುಂದೆ ಎಎಐನ ಪೋರ್ಟಲ್ ನಿಂದ ಮಾಹಿತಿ ಪಡೆಯಬಹುದು." ಎಂದು ಎಎಐ ತಿಳಿಸಿದೆ.
ಅರ್ಜಿದಾರರು ಡಿಜಿಟಲ್ ದಕ್ಷತೆ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು, ಅದು ರಾಷ್ಟ್ರೀಯ ಬಿಲ್ಲುಗಾರಿಕೆ ಚಾಂಪಿಯನ್‌ಶಿಪ್ ಅಥವಾ ಇತರ ಬಿಲ್ಲುಗಾರಿಕೆ ಚಟುವಟಿಕೆಗಳಲ್ಲಿ ಭಾಗವಹಿಸಲು ಕಡ್ಡಾಯವಾಗಿರುತ್ತದೆ.
ಓದಿ : ರಜಿನಿಕಾಂತ್ ಅವತಾರ ತಾಳಿದ ವಾರ್ನರ್.. ತಲೈವಾ ಸ್ಟೈಲ್ನಲ್ಲಿ ಅಭಿಮಾನಿಗಳಿಗೆ ನ್ಯೂ ಇಯರ್ ವಿಶ್
ಎಎಐ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಚಂದ್ರುಕರ್ ಮಾತನಾಡಿ, "ಕ್ರೀಡಾ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳನ್ನು ಪರಿಗಣಿಸಿ ಪ್ರತಿಯೊಬ್ಬ ಆಟಗಾರನಿಗೆ ಗುರುತಿನ ಚೀಟಿ ನೀಡಲಾಗುವುದು ಮತ್ತು ಅದನ್ನೂ ಈ ಪೋರ್ಟಲ್ ಅಡಿ ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ದತ್ತಾಂಶಗಳ ಆಧಾರದ ಮೇಲೆ ದೇಶೀಯ ಪಂದ್ಯಾವಳಿಗಳನ್ನು ನಡೆಸಲು ಸಂಘಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.