ETV Bharat / sports

3 ಬಾರಿಯ ಹಾಕಿ ಚಾಂಪಿಯನ್ಸ್​ಗೆ ಆಘಾತ ನೀಡಿದ ಡಚ್ಚರು... ಪಾಕ್​​​ ಒಲಿಂಪಿಕ್​​ ಕನಸು ಭಗ್ನ - , 2020 Olympics

ಮೂರು ಬಾರಿಯ ಒಲಿಂಪಿಕ್ ಹಾಕಿ​ ಚಾಂಪಿಯನ್​ ಪಾಕಿಸ್ತಾನ ಮುಂದಿನ ವರ್ಷ ಜಪಾನ್​ನ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ.

Netherlands
author img

By

Published : Oct 28, 2019, 7:24 PM IST

ನವದೆಹಲಿ: ಮೂರು ಬಾರಿಯ ಒಲಿಂಪಿಕ್ ಹಾಕಿ​ ಚಾಂಪಿಯನ್​ ಪಾಕಿಸ್ತಾನ ಮುಂದಿನ ವರ್ಷ ಜಪಾನ್​ನ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದೆ.

ಮೊದಲಾರ್ಧದಲ್ಲಿ 4-0 ಲೀಡ್​ ಪಡೆದುಕೊಂಡಿದ್ದ ನೆದರ್ಲೆಂಡ್​ ನಂತರ ದ್ವಿತೀಯಾರ್ಧದಲ್ಲೂ ಮತ್ತೆರಡು ಗೋಲು ಸಿಡಿಸಿತು. ಪಾಕಿಸ್ತಾನ ದ್ವಿತೀಯಾರ್ಧದಲ್ಲಿ ಕೇವಲ ಒಂದು ಗೋಲು ಗಳಿಸಿ ಮರ್ಯಾದೆ ಉಳಿಸಿಕೊಂಡಿತಾದರೂ ಒಲಿಂಪಿಕ್​ ಅರ್ಹತೆ ಪಡೆಯಲಾಗದೆ ನಿರಾಶೆಯನುಭವಿಸಿತು. ಶನಿವಾರ ನಡೆದ ಪಂದ್ಯದಲ್ಲಿ 4-4ರಲ್ಲಿ ಸಮಬಲ ಸಾಧಿಸಿಕೊಂಡಿದ್ದ ನೆದರ್ಲೆಂಡ್​​​ ಭಾನುವಾರ ಭರ್ಜರಿ ಪ್ರದರ್ಶನ ತೋರುವ ಮೂಲಕ ಮೂರು ಬಾರಿಯ ಚಾಂಪಿಯನ್​ ಪಾಕಿಸ್ತಾನವನ್ನು 10-5 ಗೋಲುಗಳಲ್ಲಿ ಮಣಿಸಿತು.

ಪಾಕಿಸ್ತಾನ ತಂಡ 1960, 1968 ಹಾಗೂ 1984ರ ಒಲಿಂಪಿಕ್​ನಲ್ಲಿ ಚಿನ್ನದ ಪದಕ ಗಿಟ್ಟಿಸಿಕೊಂಡಿತ್ತು. ಇನ್ನು ಕೊನೆಯ ಬಾರಿ 1992ರಲ್ಲಿ ಕಂಚಿನ ಪದಕ ಗೆದ್ದಿರುವುದೇ ಪಾಕಿಸ್ತಾನದ ಒಲಿಂಪಿಕ್​ ಸಾಧನೆಯಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.