ಭುವನೇಶ್ವರ : ಪುರುಷರ ಜೂನಿಯರ್ ವಿಭಾಗದ ಹಾಕಿ ವಿಶ್ವಕಪ್ ಟೂರ್ನಿಗೆ (Junior Hockey World Cup) ಒಡಿಶಾ ಆತಿಥ್ಯ ವಹಿಸಿಕೊಂಡಿದೆ. ಈ ವಿಶ್ವಕಪ್ ಟೂರ್ನಿ ಭುವನೇಶ್ವರದ ಕಾಳಿಂಗ ಸ್ಟೇಡಿಯಂನಲ್ಲಿ ನವೆಂಬರ್ 24ರಿಂದ ಡಿಸೆಂಬರ್ 5ರವರೆಗೆ ನಡೆಯಲಿದೆ.
ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸಲು ಕೊರಿಯಾ ಮತ್ತು ಪಾಕಿಸ್ತಾನದ ಜೂನಿಯರ್ ಹಾಕಿ ತಂಡ (Team Korea and Pakistan arrived in Bhubaneswar) ಭಾರತಕ್ಕೆ ಆಗಮಿಸಿವೆ. ಈ ಮೊದಲು ನೆದರ್ಲ್ಯಾಂಡ್ಸ್, ಫ್ರಾನ್ಸ್, ಅರ್ಜೆಂಟೀನಾ ಮತ್ತು ಚಿಲಿ ತಂಡಗಳು ಭುವನೇಶ್ವರಕ್ಕೆ ಆಗಮಿಸಿದ್ದವು.
ಶನಿವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಕಮಿಷನ್‌ನ ಹಿರಿಯ ರಾಜತಾಂತ್ರಿಕರ ತಂಡ, ಪಾಕ್ ತಂಡದ ಸದಸ್ಯರನ್ನು ಬರಮಾಡಿಕೊಂಡಿತು. ಪಾಕ್ ತಂಡಕ್ಕೆ ಪಾಕಿಸ್ತಾನದ ಹೈಕಮಿಷನ್‌ನ ಚಾರ್ಜ್ ಡಿ ಅಫೇರ್ಸ್ ಅಫ್ತಾಬ್ ಹಸನ್ ಖಾನ್ ಆತ್ಮೀಯ ಸ್ವಾಗತ ಕೋರಿದರು.
ಚಾರ್ಜ್ ಡಿ ಅಫೇರ್ಸ್ ಅವರು ಹೈಕಮಿಷನ್‌ನ ಚಾನ್ಸರಿ ಕಟ್ಟಡದಲ್ಲಿ ಪಾಕಿಸ್ತಾನದ ಹಾಕಿ ತಂಡದ ಸದಸ್ಯರಿಗೆ ಭೋಜನ ಕೂಟವನ್ನ ಸಹ ಆಯೋಜಿಸಿದ್ದರು.