ETV Bharat / sports

ಅಭಿಮಾನಿಗಳೇ ನಮ್ಮನೇ ದೇವ್ರು.. ಗರ್ಭಿಣಿ ಮನವಿಗೆ ಸ್ಪಂದಿಸಿದ ಬೆಂಗಳೂರು ಎಫ್​ಸಿ.. - ಬೆಂಗಳೂರು ಫುಟ್ಬಾಲ್ ಕ್ಲಬ್

ಗರ್ಭಿಣಿ ಮಹಿಳೆಯ ಮನವಿಗೆ ಸ್ಪಂದಿಸಿರುವ ಬಿಎಫ್​ಸಿ ತಂಡ ಇಂದಿನ ಪಂದ್ಯ ನೋಡುವ ಅವಕಾಶ ಒದಗಿಸಿಕೊಟ್ಟಿದೆ.

ಬೆಂಗಳೂರು ಎಫ್​ಸಿ
author img

By

Published : Nov 23, 2019, 3:53 PM IST

ಬೆಂಗಳೂರು: ಇಂದು ನಡೆಯಲಿರುವ ಬೆಂಗಳೂರು ಎಫ್​ಸಿ ಮತ್ತು ಕೇರಳ ತಂಡದ ನಡುವಿನ ಐಎಸ್​ಎಲ್ ಪಂದ್ಯ ವೀಕ್ಷಣೆಗೆ ತುಂಬು ಗರ್ಭಿಣಿಯೊಬ್ಬರು ಮಾಡಿದ ಮನವಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ಸ್ಪಂದಿಸಿ ಮಾನವೀಯತೆ ಮೆರೆದಿದೆ.

ಬೆಂಗಳೂರು ಮೂಲದ ಮೇಘನಾ ನಾಯರ್‌ ಎಂಬ ಮಹಿಳೆ ಬಿಎಫ್​ಸಿ ತಂಡದ ಅಪ್ಪಟ ಅಭಿಮಾನಿಯಾಗಿದ್ದಾರೆ. ಇಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಬೆಂಗಳೂರು ಮತ್ತು ಕೇರಳಾ ಬ್ಲಾಸ್ಟರ್ಸ್​ ನಡುವಿನ ಪಂದ್ಯ ನೋಡುವ ಆಸೆ ಹೊಂದಿದ್ದರು. ಗರ್ಭಿಣಿಯಾದ ಕಾರಣ ಬಿಸಿ ನೀರು ಮತ್ತು ಕೆಲವು ಔಷಧಿಗಳನ್ನ ಸೇವಿಸುವುದು ಅನಿವಾರ್ಯ.

ಆದರೆ, ಭದ್ರತಾ ದೃಷ್ಟಿಯಿಂದ ಅವುಗಳನ್ನ ಕ್ರೀಡಾಂಗಣಕ್ಕೆ ತರುವಂತಿಲ್ಲ. ಈ ಬಗ್ಗೆ ಟ್ವೀಟ್ ಮಾಡಿದ್ದ ಮೇಘನಾ ನನಗೆ ಮೈದಾನಕ್ಕೆ ಬಿಸಿ ನೀರು ಮತ್ತು ಔಷಧಿಗಳನ್ನ ತರಲು ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದರು.

  • Hello @bengalurufc! Is there any possibility that I could permission to carry some hot water from home in a reusable bottle?? I’m currently 33 weeks pregnant & I need to stay hydrated also take my medication. It was terribly inconvenient when I came to watch previous matches!!

    — Meghana (@missusnair) November 20, 2019 " class="align-text-top noRightClick twitterSection" data=" ">

ಅಭಿಮಾನಿಗಳೇ ನಮ್ಮನೇ ದೇವ್ರು ಎಂದು ಸದಾ ಟ್ವಿಟರ್​ನಲ್ಲಿ ಹೇಳಿಕೊಳ್ಳುತ್ತಿದ್ದ ಬಿಎಫ್​ಸಿ, ಅಭಿಮಾನಿಯ ಮನವಿಗೆ ಸ್ಪಂದಿಸಿದೆ. ಮೇಘನಾ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಬಿಎಫ್​ಸಿ, ಮಾಲೀಕರು ಕುಳಿತುಕೊಳ್ಳುವಲ್ಲಿಯೇ ನಿಮಗೆ ಮ್ಯಾಚ್​ ನೋಡಲು ಅವಕಾಶ ನೀಡಲಾಗುವುದು. ಅಲ್ಲಿ ಬಿಸಿ ನೀರು ಮತ್ತು ಎಲ್ಲಾ ರೀತಿಯ ಸೌಲಭ್ಯಗಳಿದೆ ಎಂದು ತಿಳಿಸಿದೆ.

  • Hey, Meghana. We love the fact that you're introducing your little one to the Fortress already!

    We'd be more than happy to accommodate you in the Owner's Box for Saturday's game, where there's hot water and more. This one's on us. 🙂 #FansFirst #BENKER https://t.co/xpNZHYKe3Q

    — Bengaluru FC (@bengalurufc) November 20, 2019 " class="align-text-top noRightClick twitterSection" data=" ">

ಬಿಎಫ್​ಸಿ ತನ್ನ ಮನವಿಗೆ ಸ್ಪಂದಿಸಿದ್ದಕ್ಕೆ ಮೇಘನಾ ಸಂತಸ ವ್ಯಕ್ತಪಡಿಸಿದ್ದಾರೆ. ನಿಮ್ಮಿಂದ ಈ ಉತ್ತರ ನಿರೀಕ್ಷಿಸಿರಲಿಲ್ಲ. ನಿಮ್ಮ ಔದಾರ್ಯಕ್ಕೆ ಧನ್ಯವಾದಗಳು ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.