ಮಸ್ಕಾಟ್: ಬಲಿಷ್ಠವಲ್ಲದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಸೋಲು ಕಂಡಿರುವುದರಿಂದ ಯಾವುದೇ ಭೀತಿ ಕಾಣಿಸುತ್ತಿಲ್ಲ. ನನ್ನ ಪ್ರಕಾರ ಇದು ಭಾರತದ ತಾತ್ಕಾಲಿಕ ಹಿನ್ನಡೆ, ಶೀಘ್ರದಲ್ಲೇ ಇದು ಬಗೆಹರಿಯಲಿದೆ ಎಂದು ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ವಿರಾಟ್ ಕೊಹ್ಲಿಯನ್ನು ಎಲ್ಲಾ ಮಾದರಿಯ ಭಾರತ ತಂಡದ ನಾಯಕತ್ವದಿಂದ ಕೆಳಗಿಳಿದ ಮೇಲೆ ಕೆ ಎಲ್ ರಾಹುಲ್ ನೇತೃತ್ವದಲ್ಲಿ ಭಾರತ ತಂಡ 0-3ರಲ್ಲಿ ಏಕದಿನ ಸರಣಿ ಸೋಲು ಕಂಡು ಮರೆಯಾಲಾಗದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿದೆ.
ಈ ಸರಣಿಗೂ ಮುನ್ನ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದ ಗೆಲುವಿನ ಹೊರತಾಗಿಯೂ ಜೋಹಾನ್ಸ್ಬರ್ಗ್ ಮತ್ತು ಕೇಪ್ ಟೌನ್ ಟೆಸ್ಟ್ ಪಂದ್ಯಗಳಲ್ಲಿ ಸೋಲು ಕಂಡು ನಿರಾಶೆಯನುಭವಿಸಿತ್ತು. ಈ ಸರಣಿಯ ಬಳಿಕ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ತಂಡವು ಒಂದು ಸರಣಿಯನ್ನು ಕಳೆದುಕೊಂಡರೆ, ಜನರು ಟೀಕಿಸಲು ಆರಂಭಿಸುತ್ತೀರಿ... ನೀವು ಎಲ್ಲಾ ಪಂದ್ಯಗಳನ್ನು ಗೆಲ್ಲಲಾಗುವುದಿಲ್ಲ. ಅಲ್ಲಿ ಯಾವಾಗಲೂ ಗೆಲುವು ಮತ್ತು ಸೋಲುಗಳಿರುವತ್ತವೆ ಎಂದು ಟಿ20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದ ಶಾಸ್ತ್ರಿ ಪಿಟಿಐಗೆ ಹೇಳಿದ್ದಾರೆ.
ಭಾರತ ತಂಡದ ನಾಯಕನಾಗಿ ಕೊಹ್ಲಿ ಕೆಳಗಿಳಿದ ನಂತರ ಭಾರತ ಆಡಿದ ಮೊದಲ ಸರಣಿಯಲ್ಲಿ ಸೋಲು ಕಂಡಿರುವುದು ತಂಡದ ಗುಣಮಟ್ಟ ಕುಸಿದಂತೆ ಕಾಣಿತ್ತಿದೆ ಎಂಬ ಊಹಾಪೋಹವನ್ನು ಶಾಸ್ತ್ರಿ ತಳ್ಳಿ ಹಾಕಿದ್ದಾರೆ.
ಸ್ಟ್ಯಾಂಡರ್ಡ್ ಇದ್ದಕ್ಕಿದ್ದಂತೆ ಹೇಗೆ ಕುಸಿಯುತ್ತದೆ? ಕಳೆದ 5 ವರ್ಷಗಳಿಂದ ತಂಡ ವಿಶ್ವದ ನಂಬರ್ 1 ಸ್ಥಾನದಲ್ಲಿತ್ತು ಎಂದು ಶಾಸ್ತ್ರಿ ಸೋಲು-ಗೆಲುವು ಸ್ಪರ್ಧೆಯಲ್ಲಿ ಸಾಮಾನ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೇರೊಬ್ಬರ ಖಾಸಗಿ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ: ರವಿಶಾಸ್ತ್ರಿ