ಧರ್ಮಶಾಲಾ (ಹಿಮಾಚಲ ಪ್ರದೇಶ): ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಹವಣಿಸುತ್ತಿರುವ ನ್ಯೂಜಿಲೆಂಡ್ ತಂಡ 2023 ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ. ಭಾನುವಾರ ಧರ್ಮಶಾಲಾ ಮೈದಾನದಲ್ಲಿ ಆತಿಥೇಯ ಟೀಮ್ ಇಂಡಿಯಾದ ವಿರುದ್ಧ ಕಿವೀಸ್ ಪಡೆ ಸೆಣಸಬೇಕಿದೆ. ಇದಕ್ಕೂ ಮುನ್ನದಿನ ಮಾತನಾಡಿದ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್, ವೇಗದ ಬೌಲರ್ ಟಿಮ್ ಸೌಥಿ ಆಯ್ಕೆಗೆ ಲಭ್ಯರಿದ್ದಾರೆ, ಕೇನ್ ವಿಲಿಯಮ್ಸನ್ ಹೆಬ್ಬೆರಳು ಮುರಿತಕ್ಕೆ ಒಳಗಾಗಿದ್ದಾರೆ ಅವರ ಅಲಭ್ಯತೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
- " class="align-text-top noRightClick twitterSection" data="">
ನ್ಯೂಜಿಲೆಂಡ್‌ನ ಸ್ಥಿರ ಪ್ರದರ್ಶನಕ್ಕೆ ವಿವಿಧ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವೆ ಕಾರಣ ಎಂದು ನಾಯಕ ಲ್ಯಾಥಮ್ ಹೇಳಿದ್ದಾರೆ. "ಒಂದು ತಂಡವಾಗಿ ವಾತಾವರಣಕ್ಕೆ ವೇಗವಾಗಿ ಹೊಂದಿಕೊಳ್ಳುವ ಸಾಮರ್ಥ್ಯ ಇರುವುದು ನಮ್ಮ ಸ್ಥಿರ ಪ್ರದರ್ಶನಕ್ಕೆ ಕಾರಣವಾಗಿದೆ. ಕಳೆದ ಎರಡು ವಿಶ್ವಕಪ್ ಪಂದ್ಯಗಳು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಅಲ್ಲಿ ಹೆಚ್ಚು ಕಡಿಮೆ ನ್ಯೂಜಿಲೆಂಡ್ ವಾತಾವರಣ ಮತ್ತು ಪಿಚ್ ಗುಣ ಹೊಂದಿತ್ತು. ಆದರೆ, ಭಾರತ ಪಿಚ್ ಮತ್ತು ಇಲ್ಲಿನ ಪರಿಸ್ಥಿತಿ ಭಿನ್ನವಾಗಿದೆ. ಇದಕ್ಕೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ತಂಡ ಸಮರ್ಥವಾಗಿ ಹೊಂದಿಕೊಂಡಿದೆ" ಎಂದಿದ್ದಾರೆ.
"ಭಾರತ ಅದ್ಭುತ ತಂಡವಾಗಿದೆ. ಅನೇಕ ವರ್ಷಗಳಿಂದ, ವಿಶೇಷವಾಗಿ ಈ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವುದನ್ನು ನೋಡಿದ್ದೇವೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಭಾರತ ತಂಡ ಸಮರ್ಥವಾಗಿದೆ. ಹೀಗಾಗ ಪಂದ್ಯವನ್ನು ನಾವು ಸಂಪೂರ್ಣ 100 ಓವರ್ ಆಡಬೇಕಿದೆ. ಉಭಯ ತಂಡಗಳು ಫಾರ್ಮ್ನಲ್ಲಿರುವುದರಿಂದ ಕೆಲವು ಉತ್ತಮ ಕ್ರಿಕೆಟ್ ಆಡುತ್ತಿರುವುದನ್ನು ನೋಡಬಹುದು, ನಾಳೆ ಉತ್ತಮ ಸ್ಪರ್ಧೆಯಾಗಲಿದೆ,"ಎಂದು ಕಿವೀಸ್ ನಾಯಕ ಹೇಳಿದರು.
ಚೆನ್ನೈ ಸೂಪರ್ ಕಿಂಗ್ಸ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿರುವ ಮಿಚೆಲ್ ಸ್ಯಾಂಟ್ನರ್ ತಂಡಕ್ಕೆ ಆಸರೆ ಆಗುತ್ತಾರೆ ಎಂಬ ಭರವಸೆಯನ್ನು ನಾಯಕ ವ್ಯಕ್ತ ಪಡಿಸಿದ್ದಾರೆ. "ಸ್ಯಾಂಟ್ನರ್ ಅವರ ಸಿಎಸ್ಕೆ (ಚೆನ್ನೈ ಸೂಪರ್ ಕಿಂಗ್ಸ್) ಅನುಭವವು ಭಾರತೀಯ ಪಿಚ್ಗಳಲ್ಲಿ ಸಹಾಯಕಾರಿಯಾಗಿದೆ. ಧರ್ಮಶಾಲಾ ಮೈದಾನದಲ್ಲಿ ಅವರ ಬೌಲಿಂಗ್ ಎಷ್ಟು ಸಹಾಯ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ಪಂದ್ಯಗಳಲ್ಲಿ ಧರ್ಮಶಾಲಾ ಪಿಚ್ ಸ್ಪಿನ್ ಸ್ನೇಹಿಯಾಗಿ ವರ್ತಿಸಿತ್ತು" ಎಂದು ಟಾಮ್ ಲ್ಯಾಥಮ್ ಹೇಳಿದರು.
ನ್ಯೂಜಿಲೆಂಡ್ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದೆ. 2015 ಮತ್ತು 2019 ಆವೃತ್ತಿಗಳಲ್ಲಿ ರನ್ನರ್ ಅಪ್ ಆಗಿತ್ತು. 2011 ರಲ್ಲಿ ಸೆಮಿಫೈನಲ್ನಲ್ಲಿ ಸೋಲನುಭವಿಸಿತ್ತು. ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ 2021 ರಲ್ಲಿ ರನ್ನರ್ ಅಪ್ ಆದರೆ, 2022ರಲ್ಲಿ ಸೆಮಿಫೈನಲ್ನಿಂದ ಹೊರಬಿದ್ದಿತ್ತು. ನ್ಯೂಜಿಲೆಂಡ್ 2021 ರಲ್ಲಿ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತ್ತು.
ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಶ್ರೀಲಂಕಾ: ನೆದರ್ಲೆಂಡ್ಗೆ 5 ವಿಕೆಟ್ಗಳ ಸೋಲು