ETV Bharat / sports

ಕೌಂಟಿ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯ: ಮೇಲುಗೈ ಸಾಧಿಸಿದ ರೋಹಿತ್ ಪಡೆ

author img

By

Published : Jul 22, 2021, 11:06 AM IST

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡ ಅಭ್ಯಾಸ ಪಂದ್ಯದಲ್ಲಿ ನಿರತವಾಗಿದೆ. ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ತಂಡ ಬೌಲಿಂಗ್​ನಲ್ಲೂ ಎದುರಾಳಿ ತಂಡವನ್ನ ಕಟ್ಟಿಹಾಕಿದೆ.

warm-up-indians-vs-county-xi-day-report
ಕೌಂಟಿ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯ:

ಡುರ್ಹಮ್ (ಇಂಗ್ಲೆಂಡ್​)​: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಿನ್ನೆಲೆ ಮೂರು ದಿನಗಳ ಅಭ್ಯಾಸ ಪಂದ್ಯ ಆಡುತ್ತಿರುವ ಭಾರತ ತಂಡ ಮೇಲುಗೈ ಸಾಧಿಸಿದೆ. ಕೌಂಟಿ ಸೆಲೆಕ್ಟ್​ ಇಲೆವೆನ್ ವಿರುದ್ಧದ 2ನೇ ದಿನದಾಟದಂದು ಬೌಲರ್ ಉಮೇಶ್ ಯಾದವ್ ದಾಳಿಗೆ ಇಲೆವನ್​​ ತಂಡ 220ಕ್ಕೆ 9 ವಿಕೆಟ್​ ಕಳೆದುಕೊಂಡಿದೆ. ಕೌಂಟಿ ಪರವಾಗಿ ಓಪನರ್ ಹಸೀಬ್ ಹಮೀದ್​​ 112ರನ್ ಗಳಿಸಿದ್ದು ಬಿಟ್ಟರೆ ಮತ್ಯಾರು ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.

ಮೊದಲ 56 ರನ್​​ಗಳಿಗೆ 4 ವಿಕೆಟ್​ ಕಳೆದುಕೊಂಡು ಅಪಾಯಕ್ಕೆ ಸಿಲುಕಿದ್ದ ತಂಡವನ್ನು ಹಮೀದ್​​ ದಡಸೇರಿಸಿದರು. ಮುಂಬರುವ ಭಾರತ ವಿರುದ್ಧದ 2 ಟೆಸ್ಟ್ ಪಂದ್ಯಗಳಿಗೂ ಹಮೀದ್ ಆಯ್ಕೆಯಾಗಿದ್ದು, ಅವರ ಒಟ್ಟಾರೆ ಇನ್ನಿಂಗ್ಸ್​ನಲ್ಲಿ 13 ಬೌಂಡರಿ ಸಿಡಿಸಿ ಮಿಂಚಿದ್ದಾರೆ.

ಇತ್ತ ಬೌಲಿಂಗ್​ ನಲ್ಲಿ ಮಾರಕ ದಾಳಿ ನಡೆಸಿದ ಉಮೇಶ್ ಯಾದವ್ 3 ವಿಕೆಟ್​ ಪಡೆದರೆ, ಸಿರಾಜ್ 2 ವಿಕೆಟ್ ಪಡೆದರೆ ಬುಮ್ರಾ, ಜಡೇಜಾ, ಅಕ್ಸರ್ ಪಟೇಲ್, ಶಾರ್ದುಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮೊದಲು ಭಾರತ ತಂಡ 311 ರನ್​ಗಳಿಗೆ ಆಲ್​ಔಟ್ ಆಗಿತ್ತು. ಸದ್ಯ ಇದೀಗ ಕೌಂಟಿ ತಂಡ 220ಕ್ಕೆ 9 ವಿಕೆಟ್ ಕಳೆದುಕೊಂಡು 91 ರನ್​ಗಳಿಂದ ಹಿನ್ನಡೆ ಸಾಧಿಸಿದೆ.

ಕೊಹ್ಲಿ ಮತ್ತು ರಹಾನೆ ಅನುಪಸ್ಥಿತಿಯಲ್ಲಿ ರೋಹಿತ್​ ನೇತೃತ್ವದಲ್ಲಿ ಕಣಕ್ಕಿಳಿದಿರುವ ಭಾರತ ತಂಡ ಕೇವಲ 67 ರನ್​ಗಳಾಗುವಷ್ಟರಲ್ಲಿ ರೋಹಿತ್(9), ಮಯಾಂಕ್ ಅಗರ್​ವಾಲ್(28), ಚೇತೇಶ್ವರ್ ಪೂಜಾರ(21) ವಿಕೆಟ್​ ಕಳೆದುಕೊಂಡಿತು. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್ ಹನುಮ ವಿಹಾರಿ ಜೊತೆಗೂಡಿ 4ನೇ ವಿಕೆಟ್​ಗೆ 40 ರನ್​ ಸೇರಿಸಿದರು. 24 ರನ್​ಗಳಿಸಿದ್ದ ವಿಹಾರಿ ಪ್ಯಾಟರ್ಸನ್ ವೇಟ್​ಗೆ ವಿಕೆಟ್​ ಒಪ್ಪಿಸಿದರು.

150 ಎಸೆತಗಳನ್ನು ಎದುರಿಸಿದ ರಾಹುಲ್ 11 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 101 ರನ್​ಗಳಿಸಿ ಬೇರೆ ಆಟಗಾರರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಡುವ ಸಲುವಾಗಿ ನಿವೃತ್ತಿ ತೆಗೆದುಕೊಂಡಿದ್ದರು, ಅಂತಿಮವಾಗಿ ಭಾರತ 311 ಗಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.