ಸಿಡ್ನಿ : ಇದೇ ತಿಂಗಳು ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಚಾಂಪಿಯನ್ ಆಗಲಿದೆ ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೇನ್ ಭವಿಷ್ಯ ನುಡಿದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವುದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ತಮ್ಮದೇ ಆದ ವ್ಯಾಖ್ಯಾನದೊಂದಿಗೆ ಭವಿಷ್ಯ ನುಡಿದಿದ್ದಾರೆ.
ಆದರೆ, ಬಹಳಷ್ಟು ಮಂದಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ಆಗಿರುವುದರಿಂದ ನ್ಯೂಜಿಲ್ಯಾಂಡ್ ತಂಡಕ್ಕೆ ಹೆಚ್ಚಿನ ಅವಕಾಶವಿದೆ ಎನ್ನುತ್ತಿದ್ದಾರೆ. ಇದರಲ್ಲಿ ಕೆಲವು ಭಾರತೀಯರು ಇದ್ದಾರೆ. ಆದರೆ, ಅಚ್ಚರಿ ಎಂಬಂತೆ ಆಸೀಸ್ ಕ್ಯಾಪ್ಟನ್ ಪೇನ್ ಭಾರತದ ಪರ ಬ್ಯಾಟಿಂಗ್ ಮಾಡಿದ್ದಾರೆ.
-
Tim Paine has been keeping an eye on England's form ahead of the #Ashes summer - and the Aussie Test skipper also shares his prediction for the #WTC21 Final... pic.twitter.com/zGO3hZbYxv
— cricket.com.au (@cricketcomau) June 14, 2021 " class="align-text-top noRightClick twitterSection" data="
">Tim Paine has been keeping an eye on England's form ahead of the #Ashes summer - and the Aussie Test skipper also shares his prediction for the #WTC21 Final... pic.twitter.com/zGO3hZbYxv
— cricket.com.au (@cricketcomau) June 14, 2021Tim Paine has been keeping an eye on England's form ahead of the #Ashes summer - and the Aussie Test skipper also shares his prediction for the #WTC21 Final... pic.twitter.com/zGO3hZbYxv
— cricket.com.au (@cricketcomau) June 14, 2021
ಭಾರತ ತಂಡ ತಮ್ಮ ಅತ್ಯುತ್ತಮ ಪ್ರದರ್ಶನದ ಸಮೀಪ ಆಡಿದರೆ ಟೆಸ್ಟ್ ಚಾಂಪಿಯನ್ಶಿಪ್ನ ಬಹಳ ಆರಾಮಾದಾಯಕವಾಗಿ ಗೆಲ್ಲಲಿದೆ ಎಂದು Cricket.com.au ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪೇನ್ ತಿಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನ್ಯೂಜಿಲ್ಯಾಂಡ್ ಸರಣಿ ಗೆದ್ದಿದ್ದರ ಬಗ್ಗೆ ಮಾತನಾಡಿ, ಇಂಗ್ಲೆಂಡ್ ಈ ಸರಣಿಯಲ್ಲಿ ತಮ್ಮ ಸ್ಟಾರ್ ಆಟಗಾರರಾದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ಬಟ್ಲರ್ ಇಲ್ಲದೆ ಟೆಸ್ಟ್ ಸರಣಿಯನ್ನಾಡಿದೆ. ಹಾಗಾಗಿ, ನ್ಯೂಜಿಲ್ಯಾಂಡ್ ಸರಣಿಯನ್ನು ಸುಲಭವಾಗಿ ಗೆದ್ದಿದೆ ಎಂದಿದ್ದಾರೆ. ವಿಶ್ರಾಂತಿ ಪಡೆದಿದ್ದ ಆಟಗಾರರು ಮರಳಿದರೆ ಅವರದು ಮತ್ತೆ ಬಲಿಷ್ಠ ತಂಡವಾಗಲಿದೆ ಎಂದು ಹೇಳಿದ್ದಾರೆ.
ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ, ಬುಮ್ರಾ, ಶಮಿ ಅಂತಹ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 2-1ರಲ್ಲಿ ಮಣಿಸಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಎತ್ತಿ ಹಿಡಿದಿತ್ತು.
ಇದನ್ನು ಓದಿ:ನ್ಯೂಜಿಲ್ಯಾಂಡ್ ಬೌಲಿಂಗ್ ದಾಳಿ ಕೊಹ್ಲಿಗೆ ಸಮಸ್ಯೆಯಾಗಬಹುದು: ಪಾರ್ಥೀವ್ ಪಟೇಲ್