ETV Bharat / sports

ಈ ಇನ್ನಿಂಗ್ಸ್​ಗೆ ಧೈರ್ಯ ಮತ್ತು ದೃಢ ಸಂಕಲ್ಪವೇ ಕಾರಣ: ಮಯಾಂಕ್ ಅಗರ್ವಾಲ್ - ಮಯಾಂಕ್ ಅಗರ್ವಾಲ್ ನ್ಯೂಸ್​

"ನನಗೆ ಅದು(ಶತಕ) ತುಂಬಾ ಅದ್ಭುತ ಮತ್ತು ಅದು ಉತ್ತಮ ಎನಿಸುತ್ತಿದೆ. ಈ ಇನ್ನಿಂಗ್ಸ್​ ಎಲ್ಲ ಧೈರ್ಯ ಮತ್ತು ದೃಢ ಸಂಕಲ್ಪದಿಂದ ಕೂಡಿದೆ" ಎಂದು ಪಂದ್ಯದ ನಂತರ ಬ್ರಾಡ್​ಕಾಸ್ಟರ್​ ಜೊತೆ ಮಾತನಾಡುವ ಸಂದರ್ಭದಲ್ಲಿ ತಿಳಿಸಿದರು.

Mayank Agarwal
ಮಯಾಂಕ್ ಅಗರ್ವಾಲ್ ಶತಕ
author img

By

Published : Dec 4, 2021, 8:01 PM IST

Updated : Dec 4, 2021, 8:29 PM IST

ಮುಂಬೈ: ಕಳೆದ ಒಂದಷ್ಟು ಇನ್ನಿಂಗ್ಸ್​ಗಳ ಭಾರಿ ವೈಫಲ್ಯದ ನಂತರ ಮಯಾಂಕ್​ ಕಿವೀಸ್​ ವಿರುದ್ಧದ 2ನೇ ಟೆಸ್ಟ್​ನಲ್ಲಿ ಆಕರ್ಷಕ ಶತಕದ ಮೂಲಕ ಅದ್ಭುತ ಕಮ್​ಬ್ಯಾಕ್ ಮಾಡಿದ್ದು, ಇದಕ್ಕೆಲ್ಲ ಧೈರ್ಯ ಮತ್ತು ದೃಢ ಸಂಕಲ್ಪ ಕಾರಣ ಎಂದು ಹೇಳಿದ್ದಾರೆ.

ಒಂದು ಕಡೆ ವಿಕೆಟ್​ ಉರುಳುತ್ತಿದ್ದರೂ ಮತ್ತೊಂದು ಕಡೆ ಕಿವೀಸ್​ ಬೌಲರ್​ಗಳು ಸೆಟ್ ಆಗಲು ಬಿಡದೇ ಅದ್ಭುತ ಬ್ಯಾಟಿಂಗ್ ಮಾಡಿದ ಅಗರ್ವಾಲ್ 325 ಎಸೆತಗಳಲ್ಲಿ 17 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 150 ರನ್​ಗಳಿಸಿದರು. ಹೆಚ್ಚು ಕಡಿಮೆ ತಂಡದ ಅರ್ಧದಷ್ಟು ರನ್​ಗಳಿಸಿದ ಕನ್ನಡಿಗ ತಾವೂ ವೈಫಲ್ಯದಿಂದ ಹೊರಬರಲು ಮಾನಸಿಕವಾಗಿ ಕೆಲವು ಬದಲಾವಣೆ ಮಾಡಿಕೊಂಡಿದ್ದೇನೆಯೇ ಹೊರತೂ ರನ್ನ ಬ್ಯಾಟಿಂಗ್ ತಂತ್ರಗಾರಿಕೆಯಲ್ಲಲ್ಲ ಎಂದು ತಿಳಿಸಿದ್ದಾರೆ.

"ನನಗೆ ಅದು(ಶತಕ) ತುಂಬಾ ಅದ್ಭುತ ಮತ್ತು ಅದು ಉತ್ತಮ ಎನಿಸುತ್ತಿದೆ. ಈ ಇನ್ನಿಂಗ್ಸ್​ ಎಲ್ಲ ಧೈರ್ಯ ಮತ್ತು ದೃಢ ಸಂಕಲ್ಪದಿಂದ ಕೂಡಿದೆ" ಎಂದು ಪಂದ್ಯದ ನಂತರ ಬ್ರಾಡ್​ಕಾಸ್ಟರ್​ ಜೊತೆ ಮಾತನಾಡುವ ಸಂದರ್ಭದಲ್ಲಿ ತಿಳಿಸಿದರು.

ತಾವೂ ಬ್ಯಾಟಿಂಗ್ ಮಾಡುವ ವೇಳೆ ಅನುಭವಿಸಿದ ಸವಾಲುಗಳಿಗೆ ಉತ್ತರಿಸುತ್ತ," ನಾನು ಹೆಚ್ಚೇನು ಬದಲಾವಣೆ ಮಾಡಿಕೊಳ್ಳಲಿಲ್ಲ, ತಂತ್ರಗಾರಿಕೆಗಿಂತ ಹೆಚ್ಚು ಮಾನಸಿಕವಾಗಿ ಸದೃಢನಾಗಿರಲು ಪ್ರಯತ್ನಿಸಿದೆ. ನನ್ನ ಬ್ಯಾಟಿಂಗ್​ ಬಗ್ಗೆ ಹೇಳುವುದಾದರೆ, ನಾನು ದಾಳಿ ಮಾಡದಿದ್ದರೆ ಮತ್ತೆ ಸಿಲುಕಿಕೊಳ್ಳುತ್ತೇನೆ, ಹಾಗಾಗಿ ಅಜಾಜ್ ಪಟೇಲ್​ ಅವರನ್ನು ಒತ್ತಡದಲ್ಲಿರುವಂತೆ ಮಾಡದಿದ್ದರೆ, ಉತ್ತಮ ಪ್ರದೇಶಗಳಲ್ಲಿ ಬೌಲಿಂಗ್ ಮಾಡಬಹುದೆಂದು ತಿಳಿದು ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಚ್​ ರಾಹುಲ್​ ಹೇಳಿದ ಮಾತು ಉಳಿಸಿಕೊಂಡ ಮಯಾಂಕ್​​​.. ಇದಕ್ಕೆ ಕಾರಣವಾಗಿದ್ದು ಸುನಿಲ್​ ಗವಾಸ್ಕರ್​!

Last Updated : Dec 4, 2021, 8:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.