ಲಖನೌ: ಭಾರತ- ಶ್ರೀಲಂಕಾ ನಟುವಿನ 3 ಪಂದ್ಯಗಳ ಟಿ20 ಸರಣಿಯ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ನಾಯಕ ದಸುನ್ ಶನಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಭಾರತದ ಪರ ಆಲ್ರೌಂಡರ್ ದೀಪಕ್ ಹೂಡ ಪದಾರ್ಪಣೆ ಮಾಡಿದ್ದಾರೆ. ರುತುರಾಜ್ ಗಾಯಕ್ವಾಡ್ ಮಣಿಕಟ್ಟು ಗಾಯದ ಕಾರಣ ಕೊನೆಯ ಕ್ಷಣದಲ್ಲಿ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂದಿನ ಪಂದ್ಯದಲ್ಲೂ ಕೂಡ ಇಶಾನ್ ಕಿಶನ್ ನಾಯಕ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದಾರೆ.
-
ODI debut ✅
— BCCI (@BCCI) February 24, 2022 " class="align-text-top noRightClick twitterSection" data="
T20I debut ✅
Congratulations to @HoodaOnFire who is set to play his maiden T20I game. 👏 👏#TeamIndia | #INDvSL | @Paytm pic.twitter.com/4aUqemcFMF
">ODI debut ✅
— BCCI (@BCCI) February 24, 2022
T20I debut ✅
Congratulations to @HoodaOnFire who is set to play his maiden T20I game. 👏 👏#TeamIndia | #INDvSL | @Paytm pic.twitter.com/4aUqemcFMFODI debut ✅
— BCCI (@BCCI) February 24, 2022
T20I debut ✅
Congratulations to @HoodaOnFire who is set to play his maiden T20I game. 👏 👏#TeamIndia | #INDvSL | @Paytm pic.twitter.com/4aUqemcFMF
ಇನ್ನು ಕಳೆದ ವಿಂಡೀಸ್ ಸರಣಿಯಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಮತ್ತು ಗಾಯದಿಂದ ಮೂರು ತಿಂಗಳ ಕಾಲ ಕ್ರಿಕೆಟ್ನಿಂದ ದೂರವಿದ್ದ ರವೀಂದ್ರ ಜಡೇಜಾ ಮತ್ತೆ ತಂಡ ಸೇರಿಕೊಂಡಿದ್ದಾರೆ. ಸಂಜು ಸಾಮ್ಸನ್ ದೀರ್ಘ ಸಮಯದ ನಂತರ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಇನ್ನು ವಿಂಡೀಸ್ ವಿರುದ್ಧ ಕೊನೆಯ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಭುವನೇಶ್ವರ್, ಯುಜ್ವೇಂದ್ರ ಚಹಲ್ ಇಂದು ಕಣಕ್ಕಿಳಿದಿದ್ದಾರೆ.
ಇತ್ತ ಶ್ರೀಲಂಕಾ ತನ್ನ ಸ್ಟಾರ್ ಆಟಗಾರರಾದ ಕುಸಾಲ್ ಮೆಂಡಿಸ್, ಯುವ ಸ್ಪಿನ್ನರ್ ತೀಕ್ಷಣ ಹಾಗೂ ವನಿಂಡು ಹಸರಂಗ ಇಲ್ಲದೆ ಕಣಕ್ಕಿಳಿಯುತ್ತಿದೆ.
ತಂಡಗಳು:
ಭಾರತ (ಆಡುವ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೀ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಚರಿತ್ ಅಸಲಂಕಾ, ದಿನೇಶ್ ಚಂಡಿಮಲ್ (ವಿಕೀ), ಜನಿತ್ ಲಿಯಾನಗೆ, ದಸುನ್ ಶನಕ (ನಾಯಕ), ಚಮಿಕಾ ಕರುಣಾರತ್ನೆ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ದುಷ್ಮಂತ ಚಮೀರ, ಲಹಿರು ಕುಮಾರ
ಇದನ್ನೂ ಓದಿ:ವನಿತೆಯರ ಕ್ರಿಕೆಟ್: ಮಂಧಾನಾ ಪಂದ್ಯಶ್ರೇಷ್ಠ ಆಟ, ನ್ಯೂಜಿಲೆಂಡ್ ವಿರುದ್ಧ ಕೊನೆಯ ಪಂದ್ಯ ಗೆದ್ದ ಭಾರತ