ETV Bharat / sports

ದಕ್ಷಿಣ ಆಫ್ರಿಕಾಗೆ ಆಪದ್ಬಾಂಧವನಾದ ಮಿಲ್ಲರ್: ಆಸೀಸ್​ಗೆ 213 ರನ್​ಗಳ ಸಾಧಾರಣ ಗುರಿ​

South Africa vs Australia Semi Final: ಎರಡನೇ ಸೆಮಿಫೈನಲ್‌ ಪಂದ್ಯದ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದ್ದು, ಹರಿಣಗಳು ಆಸ್ಟ್ರೇಲಿಯಾಗೆ ಸಾಧಾರಣ ಗುರಿ ನೀಡಿದ್ದಾರೆ.

South Africa vs Australia 2nd Semi Final

author img

By ETV Bharat Karnataka Team

Published : Nov 16, 2023, 1:42 PM IST

Updated : Nov 16, 2023, 7:01 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): 2023ರ ಏಕದಿನ ವಿಶ್ವಕಪ್ ಎರಡನೇ ಸೆಮಿಫೈನಲ್‌ ಪಂದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದ ಮೊದಲ ಇನ್ನಿಂಗ್ಸ್​ ಮುಕ್ತಾಯಗೊಂಡಿದೆ. ಮೊದಲು ಬ್ಯಾಟ್​ ಮಾಡಿದ ಹರಿಣಗಳ ಪಡೆ ಡೆವಿಡ್​ ಮಿಲ್ಲರ್​ ಶತಕದ ನೆರವಿನಿಂದ 49.4 ಓವರಗಳ ಅಂತ್ಯಕ್ಕೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಕೇವಲ 212 ರನ್​ಗಳನ್ನು ಕಲೆ ಹಾಕಿದೆ. ಈ ಮೂಲಕ ಕಾಂಗರೂ ಪಡೆಗೆ 213 ರನ್​ಗಳ ಸಾಧಾರಣ ಗುರಿ ನೀಡಿದೆ.

ಇದಕ್ಕೂ ಮೊದಲು ಆಸಿಸ್​ ವಿರುದ್ದ ಟಾಸ್​ ಗೆದ್ದ ನಾಯಕ ಟೆಂಬಾ ಬವುಮಾ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡು, ಆಸ್ಟ್ರೇಲಿಯಾಗೆ ಬೌಲಿಂಗ್​ಗೆ ಆಹ್ವಾನಿಸಿದರು. ಆಸೀಸ್​ನ ಮಾರಕ ಬೌಲಿಂಗ್​ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ಕೇಲವ 24ರನ್​ಗಳಿಗೆ ತನ್ನ ಪ್ರಮುಖ ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್​ಗಳಾದ ಕ್ವಿಂಟನ್ ಡಿ ಕಾಕ್(3), ಟೆಂಬಾ ಬವುಮಾ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (6), ಐಡೆನ್ ಮಾರ್ಕ್ರಾಮ್ (10) ಬಹುಬೇಗ ವಿಕೆಟ್​ಗಳನ್ನು ಒಪ್ಪಿಸಿ ಪೆವಿಲಿಯನ್​ ಸೇರಿದರು.

ಮತ್ತೊಂದೆಡೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಹೆನ್ರಿಚ್​​ ಕ್ಲಾಸೇನ್(47) ಟ್ರಾವಿಸ್​ ಹೆಡ್​ ಎಸೆತದಲ್ಲಿ ಬೌಲ್ಡ್​ ಆಗುವ ಮೂಲಕ ಹರಿಣ ಪಡೆ ಮತ್ತೊಂದು ಆಘಾತಕ್ಕೊಳಗಾಯಿತು. ಈ ವೇಳೆ ತಂಡಕ್ಕೆ ಆಪದ್ಬಾಂಧವ ಆದ ಡೇವಿಡ್​ ಮಿಲ್ಲರ್​(101) ಆಸೀಸ್​ ಬೌಲರ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ಭರ್ಜರಿ ಶತಕ ಸಿಡಿದರು. ಈ ಮೂಲಕ ಹರಿಣಗಳ ಪಡೆ 212 ರನ್​ಗಳ ಕಲೆ ಹಾಕಿದೆ.

ಆಸ್ಟೇಲಿಯಾ ಪರ ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ತಲಾ 3, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್ ತಲಾ 2 ವಿಕೆಟ್​ ಪಡೆದು ಮಿಂಚಿದರು.

ಪ್ರಸ್ತುತ ಲೀಗ್‌ ಹಂತದಲ್ಲಿ ದಕ್ಷಿಣ ಆಫ್ರಿಕಾ ಆಡಿರುವ 9 ಪಂದ್ಯಗಳ ಪೈಕಿ 2 ರಲ್ಲಿ ಸೋತು, 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಟೂರ್ನಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದರಿಂದ 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಮತ್ತೊಂದೆಡೆ ಆಸೀಸ್​ ಕೂಡ ಆಡಿರುವ 9 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ ಗೆಲುವು ಹಾಗೂ 2ರಲ್ಲಿ ಸೋತಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ದಕ್ಷಿಣ ಆಫ್ರಿಕಾ ನೆಟ್‌ ರನ್‌ರೇಟ್​ನಿಂದ ಮುಂದಿದ್ದರೆ, ಆಸೀಸ್​ ಹಿಂದಿದೆ.

ಇದನ್ನೂ ಓದಿ: ವಿಶ್ವಕಪ್‌ನಲ್ಲಿಂದು 2ನೇ ಸೆಮಿ ಫೈನಲ್‌: ಆಸೀಸ್ ವಿರುದ್ಧ ಗೆದ್ದು 'ಚೋಕರ್ಸ್‌' ಹಣೆಪಟ್ಟಿ ಕಳಚುವುದೇ ದ.ಆಫ್ರಿಕಾ?

Last Updated : Nov 16, 2023, 7:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.