ETV Bharat / sports

ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡುವುದು ಕಠಿಣ: ಶಾರ್ದೂಲ್ ಠಾಕೂರ್ - ETV Bharath Kannada news

Boxing Day Test: ದಕ್ಷಿಣ ಆಫ್ರಿಕಾದ ಕ್ರಿಕೆಟ್ ಪಿಚ್‌ಗಳ ಕುರಿತು ಶಾರ್ದೂಲ್​ ಠಾಕೂರ್​ ಅವರು ಸ್ಪಿನ್ನರ್​ ಆರ್.ಅಶ್ವಿನ್​ ಜೊತೆ ಅನುಭವ ಹಂಚಿಕೊಂಡರು.

Shardul Thakur
Shardul Thakur
author img

By ETV Bharat Karnataka Team

Published : Dec 24, 2023, 6:25 PM IST

ಹೈದರಾಬಾದ್​: ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್​ ಕ್ರಿಕೆಟ್​ ಆಡುವುದು ಕಷ್ಟ. ಅಲ್ಲಿನ ಮೈದಾನಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ಹೇಳಲಾಗದು ಎಂದು ಬೌಲಿಂಗ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಹೇಳಿದ್ದಾರೆ.

ಹರಿಣಗಳ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಸಿದ್ಧತೆ ನಡೆಸುತ್ತಿದೆ. ವಿಶ್ವಕಪ್​ ಫೈನಲ್​ ನಂತರ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಮೈದಾನಕ್ಕಿಳಿಯುತ್ತಿದ್ದಾರೆ. ಅನುಭವಿ ಸ್ಪಿನ್ನರ್​ ಆರ್​.ಅಶ್ವಿನ್​ ಈ ಪ್ರವಾಸದಲ್ಲಿ 500 ವಿಕೆಟ್​ ಪಡೆಯುವ ಹೊಸ್ತಿಲಲ್ಲಿದ್ದಾರೆ. ಒಟ್ಟಾರೆ ಭಾರತಕ್ಕಿದು ಹಲವು ವಿಶೇಷತೆಗಳ ಸರಣಿ.

  • " class="align-text-top noRightClick twitterSection" data="">

ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇಯಂದು ಆರಂಭವಾಗಲಿರುವ ಟೆಸ್ಟ್​ ಸರಣಿಯ ಕುರಿತು ಕೂಡಾ ಆಟಗಾರರೊಂದಿಗೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಶ್ವಿನ್​ ಅವರು ಕೆ.ಎಸ್.ಭರತ್​ ಮತ್ತು ಶಾರ್ದೂಲ್​ ಠಾಕೂರ್​ ಅವರನ್ನು ಮಾತನಾಡಿಸಿದರು. ಶಾರ್ದೂಲ್​, ಹರಿಣಗಳ ನಾಡಿನ ಪಿಚ್​ಗಳ ಕುರಿತು ತಮ್ಮ ಅನುಭವ ವಿವರಿಸಿದರು.

ಪಿಚ್​ ವರ್ತನೆ ತಿಳಿಯುವುದಿಲ್ಲ: "ನನ್ನ ಪ್ರಕಾರ, ದಕ್ಷಿಣ ಆಫ್ರಿಕಾವು ಟೆಸ್ಟ್ ಕ್ರಿಕೆಟ್ ಆಡಲು ಅತ್ಯಂತ ಕಷ್ಟಕರ ದೇಶಗಳಲ್ಲಿ ಒಂದು. ಪಿಚ್​ನ ಪರಿಸ್ಥಿತಿಗಳ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಲು ಕಷ್ಟ ಆಗುವಂಥ ದೇಶಗಳಲ್ಲೂ ಇದೂ ಒಂದು. ಪಿಚ್​ ಕುರಿತು ನಾವು ಇದೇ ರೀತಿ ಇರಲಿದೆ ಎಂದು ನಿರ್ಧರಿಸುವುದು ಕಷ್ಟ. ಹೀಗಾಗಿ ನಾವು ಆಡುವ ದಿನ ಮೈದಾನವನ್ನು ತಿಳಿಯಲು ಸಾಧ್ಯ. ಪಿಚ್​ಗಿಳಿದು ಆಡಲು ಆರಂಭಿಸಿದ ನಂತರ ವಿಕೆಟ್​ ಹೀಗೆ ವರ್ತಿಸುತ್ತೆದೆ ಎಂದು ಹೇಳಬಹುದು. ಹೀಗಾಗಿ ನಮ್ಮೆಲ್ಲ ಸಾಮರ್ಥ್ಯವನ್ನು ಬಳಸಿ ಆಡಬೇಕಿದೆ" ಎಂದು ಶಾರ್ದೂಲ್​ ಹೇಳಿದ್ದಾರೆ.

ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿದ್ದೇನೆ: ದಕ್ಷಿಣ ಆಫ್ರಿಕಾದ ಹವಾಮಾನಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಠಾಕೂರ್​​ ತಿಳಿಸಿದರು. "ನಾನು ಹವಾಮಾನಕ್ಕೆ ಒಗ್ಗಿಕೊಳ್ಳುತ್ತಿದ್ದೇನೆ. ಇದು ಎತ್ತರದ ಪ್ರದೇಶವಾದ್ದರಿಂದ ಉಸಿರಾಟಕ್ಕೆ ಸ್ವಲ್ಪ ಕಷ್ಟವಾಗುತ್ತಿದೆ, ಇದನ್ನು ಕಲಿಯುತ್ತಿದ್ದೇನೆ. ಓಡುವಾಗ ಅಥವಾ ಬೌಲಿಂಗ್ ಮಾಡುವಾಗ ಆಮ್ಲಜನಕದ ಕೊರತೆಯಾದಂಥ ಅನುಭವವಾಗುತ್ತದೆ. ಬೌಲಿಂಗ್ ರನ್ ಅಪ್​ ಮತ್ತು ಬ್ಯಾಟಿಂಗ್​ ವೇಳೆ ರನ್​ ಗಳಿಸುವಾಗ ವಿಕೆಟ್​ ನಡುವೆ ಓಡುವುದು ಆಯಾಸ ಎನಿಸುತ್ತದೆ" ಎಂದರು.

ಡಿಸೆಂಬರ್ 26ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಂಡು ಜನವರಿ 7ರವರೆಗೆ ನಡೆಯಲಿದೆ. ಮೊದಲ ಟೆಸ್ಟ್ ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಜನವರಿ 7ರಿಂದ ಕೇಪ್ ಟೌನ್‌ನಲ್ಲಿ ನಿಗದಿಯಾಗಿದೆ.

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಕೆ.ಎಸ್.ಭರತ್.

ಇದನ್ನೂ ಓದಿ: IND vs SA Test: ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​, ತಂಡ ಸೇರಿದ ವಿರಾಟ್ ಕೊಹ್ಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.