ETV Bharat / sports

ವಿಶ್ವ ಟೆಸ್ಟ್​ ಚಾಂಪಿಯನ್​ನಲ್ಲಿ ವಾರ್ನರ್​ ಹಿಂದಿಕ್ಕಿದ ರೋಹಿತ್: ಶರ್ಮಾ ಹೆಸರಿನಲ್ಲಿ ಮತ್ತೊಂದು ದಾಖಲೆ

ವಿಶ್ವ ಟೆಸ್ಟ್​ ಚಾಂಪಿಯನ್​ನಲ್ಲಿ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ 2000 ರನ್​​ಗಳ​ ಗಡಿ ದಾಟಿದ್ದಾರೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ
author img

By

Published : Jul 24, 2023, 6:38 PM IST

ಪೋರ್ಟ್ ಆಫ್ ಸ್ಪೇನ್ : ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಎರಡ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್​ಗೆ ಇಳಿದ ರೋಹಿತ್ ಶರ್ಮಾ ವೇಗವಾಗಿ ಅರ್ಧಶತಕ ಪೂರೈಸಿದರು. ಇದರೊಂದಿಗೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರನ್ನು ವಿಶ್ವ ಟೆಸ್ಟ್​ ಚಾಂಪಿಯನ್​ನಲ್ಲಿ ಹಿಂದಿಕ್ಕಿದ್ದಾರೆ.

ಹೌದು ವಿಶ್ವ ಟೆಸ್ಟ್​ ಚಾಂಪಿಯನ್ 2ನೇ ಆವೃತ್ತಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮೂರನೇ ಆವೃತ್ತಿಗೆ ವಿಶ್ವದ ಘಟಾನುಘಟಿ ತಂಡಗಳು ಸಿದ್ದಗೊಳ್ಳುತ್ತಿವೆ. ಇದರ ನಡುವೆ ರೋಹಿತ್ ಶರ್ಮಾ ಈವರಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ ಪಂದ್ಯಗಳಲ್ಲಿ ಆರಂಭಿಕರಾಗಿ ಅತಿ ಹೆಚ್ಚು ರನ್​ ಗಳಿಸಿದವರ ಪೈಕಿ ಮೊದಲ ಸ್ಥಾನಕ್ಕೇರಿದ್ದಾರೆ.

2092 ರನ್ ಗಳಿಸಿರುವ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದರೇ, ಡೇವಿಡ್ ವಾರ್ನರ್ ಅವರು 2040 ರನ್‌ಗಳ ಗಳಿಸಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಶ್ರೀಲಂಕಾದ ಆರಂಭಿಕರಾದ ದಿಮುತ್ ಕರುಣಾರತ್ನೆ ಅವರು 2020 ರನ್ ಗಳಿಸಿದ್ದು, ಇಂಡೀಸ್ ನಾಯಕ ಕ್ರೇಗ್ ಬ್ರಾಥ್‌ವೈಟ್ 1769 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹಾಗೂ ಆಸ್ಟ್ರೇಲಿಯಾದ ಮತ್ತೊಬ್ಬ ಆರಂಭಿಕ ಉಸ್ಮಾನ್ ಖವಾಜಾ ಅವರು ಕೂಡ ಐದನೇ ಸ್ಥಾನದಲ್ಲಿ 1760 ರನ್ ಗಳಿಸಿದ್ದಾರೆ.

  • Rohit Sharma for India in WTC has the most runs, best average, most hundreds, most fours, most sixes.

    - The hitman, A great. pic.twitter.com/MO3cvUKKUl

    — Johns. (@CricCrazyJohns) July 24, 2023 " class="align-text-top noRightClick twitterSection" data=" ">

ಡಬ್ಲ್ಯೂಟಿಸಿಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್ಸ್ : ಆಸ್ಟ್ರೇಲಿಯಾದ ನಾಥನ್ ಲಿಯಾನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, 80 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ನಂತರ ಎರಡನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ 67 ವಿಕೆಟ್​ ಪಡೆದುಕೊಂಡರೇ, ಮೂರನೇ ಸ್ಥಾನದಲ್ಲಿ ಭಾರತ ತಂಡದ ಸ್ಪಿನ್​ ಮಾಂತ್ರಿಕ ಎಂದೇ ಖ್ಯಾತಿ ಗಳಿಸಿರುವ ರವಿಚಂದ್ರನ್ ಅಶ್ವಿನ್​ ಅವರು 61 ವಿಕೆಟ್​ ಕಬಳಿಸಿದ್ದಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್​ ತಂಡದ ಟೆಸ್ಟ್​ ಕ್ರಿಕೆಟ್​ನ ಪ್ರಮುಖ ಅಸ್ತ್ರವಾದ ಜೇಮ್ಸ್ ಆಂಡರ್ಸನ್ ಅವರು 58 ವಿಕೆಟ್​ ಪಡೆಕೊಂಡರೆ, ಅವರ ಹಿಂದೆಯೇ ಕೇವಲ ಒಂದು ವಿಕೆಟ್​ ಅಂತರದಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಅವರು 57 ವಿಕೆಟ್​ ಪಡೆದುಕೊಳ್ಳುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.

ರೋಹಿತ್​ ಬಗ್ಗೆ ರಹಾನೆ ಗುಣಗಾನ : ನಾಯಕ ರೋಹಿತ್ ಶರ್ಮಾ, ತಂಡದ ಆಟಗಾರರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಿದ್ದು, ಅವರಲ್ಲಿ ಶ್ರೇಷ್ಠ ನಾಯಕನ ಗುಣಗಳಿವೆ ಎಂದು ಉಪನಾಯಕ ಅಜಿಂಕ್ಯ ರಹಾನೆ ಹಾಡಿ ಹೊಗಳಿದ್ದರು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಅಜಿಂಕ್ಯ ರಹಾನೆ ನಾಯಕ ರೋಹಿತ್ ಶರ್ಮಾ ಬಗ್ಗೆ ವಿಶೇಷವಾಗಿ ಗುಣಗಾನ ಮಾಡಿದ್ದರು.

ಇದನ್ನೂ ಓದಿ : ಭಾರತ vs ವೆಸ್ಟ್​​ ಇಂಡೀಸ್ ಅಂತಿಮ ಟೆಸ್ಟ್‌: ವಿಂಡೀಸ್‌ ಗೆಲುವಿಗೆ ಬೇಕು 289 ರನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.