ರಿಷಭ್ ಪಂತ್ ಭಾರತದ ಭರವಸೆಯ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರ ಮೇಲೆ ಭಾರಿ ನಿರೀಕ್ಷೆಗಳಿವೆ. ವಿಕೆಟ್ ಕೀಪರ್ ಕಮ್ ಫಿನಿಶರ್ ಆಗಿ ಧೋನಿಯ ಜಾಗದಲ್ಲಿ ಪಂತ್ ಆಡಬೇಕಿದೆ. ಆದರೆ 2022ರ ಡಿಸೆಂಬರ್ 30 ರಂದು ಭೀಕರ ಕಾರು ಅಪಘಾತಕ್ಕೊಳಗಾಗಿ ಮಹತ್ವದ ಪಂದ್ಯಗಳನ್ನು ಕಳೆದುಕೊಂಡರು. ಸದ್ಯ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದು ಶೀಘ್ರದಲ್ಲಿ ತಂಡ ಸೇರುವ ವಿಶ್ವಾಸದಲ್ಲಿದ್ದಾರೆ.
ಇತ್ತೀಚೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಿತು. ಪಂದ್ಯದಲ್ಲಿ ಪಂತ್ ಅವರನ್ನು ಭಾರತ ತಂಡ ತುಂಬಾ ಮಿಸ್ ಮಾಡಿಕೊಂಡಿದೆ ಎಂದರೆ ತಪ್ಪಾಗದು. ಏಕೆಂದರೆ ಪಂತ್ ಟೆಸ್ಟ್ ರೆಕಾರ್ಡ್ ಉತ್ತಮವಾಗಿದ್ದು, ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕಳೆದ ಕೆಲ ತಿಂಗಳುಗಳಿಂದ ಪಂದ್ಯಗಳನ್ನು ಆಡದಿದ್ದರೂ 10ನೇ ಸ್ಥಾನದಲ್ಲಿದ್ದಾರೆ. 2021 -23 ರ ಟೆಸ್ಟ್ ಚಾಂಪಿಯನ್ಶಿಪ್ ಸಿರೀಸ್ನಲ್ಲಿ ಪಂತ್ ಸರಾಸರಿ ಉತ್ತಮವಾಗಿತ್ತು. ಹೀಗಾಗಿ ಅವರ ಕೊರತೆ ಭಾರತಕ್ಕೆ ಬಹುವಾಗಿಯೇ ಕಾಡಿದೆ.
-
Not bad yaar Rishabh ❤️❤️😂. Simple things can be difficult sometimes 😇 pic.twitter.com/XcF9rZXurG
— Rishabh Pant (@RishabhPant17) June 14, 2023 " class="align-text-top noRightClick twitterSection" data="
">Not bad yaar Rishabh ❤️❤️😂. Simple things can be difficult sometimes 😇 pic.twitter.com/XcF9rZXurG
— Rishabh Pant (@RishabhPant17) June 14, 2023Not bad yaar Rishabh ❤️❤️😂. Simple things can be difficult sometimes 😇 pic.twitter.com/XcF9rZXurG
— Rishabh Pant (@RishabhPant17) June 14, 2023
ಎನ್ಸಿಎಯಲ್ಲಿ ತಯಾರಿ: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಯಲ್ಲಿದ್ದಾರೆ. ಇತ್ತೀಚೆಗೆ ಊರುಗೋಲು ಇಲ್ಲದೇ ನಡೆಯುವ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಈಗ ತಮ್ಮ ಮೇಲೆ ಇನ್ನಷ್ಟೂ ಪ್ರಯೋಗಗಳನ್ನು ಮಾಡುತ್ತಿದ್ದು, ಮೆಟ್ಟಿಲು ಹತ್ತುವ ಮೂಲಕ ಮೊಣಕಾಲಿನ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ, ಎನ್ಸಿಎಯಲ್ಲಿ ಮೆಟ್ಟಿಲು ಹತ್ತುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನ ಸ್ಟೋರಿಯಲ್ಲಿ ದಂಡ ಹಿಡಿದು ಮಂಡಿಯ ಮೇಲೆ ಆಧಾರ ಹಾಕಿ ಮಾಡುವ ವ್ಯಾಯಾಮ ಮಾಡುತ್ತಿರುವುದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಫಿಂಗರ್ ಕ್ರಾಸ್ ಆಗಿರುವ ಮೂರು ಕೈಗಳ ಎಮೋಜಿ ಮತ್ತು ತಲೆ ಸುತ್ತುವ ರೀತಿಯ ಎಮೋಜಿ ಹಾಕಿಕೊಂಡಿದ್ದಾರೆ.
-
KL Rahul has started his rehab at NCA followed by a cheeky reply by Pant. pic.twitter.com/cz0V0FFgft
— Johns. (@CricCrazyJohns) June 14, 2023 " class="align-text-top noRightClick twitterSection" data="
">KL Rahul has started his rehab at NCA followed by a cheeky reply by Pant. pic.twitter.com/cz0V0FFgft
— Johns. (@CricCrazyJohns) June 14, 2023KL Rahul has started his rehab at NCA followed by a cheeky reply by Pant. pic.twitter.com/cz0V0FFgft
— Johns. (@CricCrazyJohns) June 14, 2023
ಎನ್ಸಿಎಯಲ್ಲಿ ಕೆ.ಎಲ್. ರಾಹುಲ್ ಕಸರತ್ತು: ಇಂಗ್ಲೆಂಡ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಎನ್ಸಿಎಗೆ ನಿನ್ನೆ ಕೆ.ಎಲ್. ರಾಹುಲ್ ತಲುಪಿದ್ದಾರೆ. ಈ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಮನೆ ಎಂದು ಬರೆದುಕೊಂಡು ಪೋಸ್ಟ್ ಶೇರ್ ಮಾಡಿದ್ದರು. ಇಂದು ಇನ್ಸ್ಟಾಗ್ರಾಮ್ನಲ್ಲಿ ಎನ್ಸಿಎಯ ಜಿಮ್ನಲ್ಲಿ ಕಠಿಣ ಕಸರತ್ತು ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಪುನರ್ವಸತಿಯ ಪಯಣ, ಪ್ರತಿ ಸಣ್ಣ ಹೆಜ್ಜೆಯೂ ಅಮೂಲ್ಯ ಮೌಲ್ಯ ಹೊಂದಿದೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ರಿಷಭ್ ಪಂತ್ "ಸ್ವಾಗತ ಸಹೋದರ" ಎಂದು ಕಾಮೆಂಟ್ ಮಾಡಿದ್ದಾರೆ. ಅತ್ತ ಅಭಿಮಾನಿಗಳು ಇಬ್ಬರು ತಂಡಕ್ಕೆ ಆದಷ್ಟೂ ಬೇಗ ಮರಳಲಿ ಎಂದು ಹಾರೈಸಿದ್ದಾರೆ.
ಐಪಿಎಲ್ ವೇಳೆ ರಾಹುಲ್ಗೆ ಗಾಯ: ಈ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಡುವಾಗ ರಾಹುಲ್ ಗಾಯಕ್ಕೆ ತುತ್ತಾದರು. ಮೇ 1 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಏಕನಾ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿತ್ತು. ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡುವಾಗ ರಾಹುಲ್ ಬಲವಾಗಿ ಪೆಟ್ಟು ಬಿದ್ದಿತ್ತು. ನಂತರದ ಲಕ್ನೋ ತಂಡದ ನಾಯಕತ್ವವನ್ನು ಕೃನಾಲ್ ಪಾಂಡ್ಯ ನಿರ್ವಹಿಸಿದ್ದರು.
ಇದನ್ನೂ ಓದಿ: KL Rahul: ಏಷ್ಯಾ ಕಪ್ ಸಿದ್ಧತೆಗೆ ಬೆಂಗಳೂರು ತಲುಪಿದ ಕೆಎಲ್ ರಾಹುಲ್.. ಮನೆ ಎಂದು ಟ್ವಿಟ್ ಮಾಡಿದ ಲೋಕೇಶ್